Friday, Oct 30 2020 | Time 07:20 Hrs(IST)
Karnataka Share

ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ

ಕಲಬುರಗಿ, ಸೆ.21 (ಯುಎನ್ಐ) ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಸೋಮವಾರ ಪತ್ತೆಯಾಗಿದೆ.
ಶ್ರೀಚಂದ ಪಿರಶೆಟ್ಟಿ ಪೂಜಾರಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಜಿಲ್ಲೆಯ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಹಳ್ಳದಲ್ಲಿ ವ್ಯಕ್ತಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದರು.
ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಬೈಕ್ ‌ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಹಳ್ಳದಲ್ಲಿ ಬೈಕ್ ಮೇಲಿಂದ ಬಿದ್ದಿದ್ದರು. ಬಳಿಕ ಮತ್ತೆ ಎದ್ದು ಬೈಕ್ ಆರಂಭಿಸುವುದಕ್ಕೆ ಮುಂದಾಗಿದ್ದರು. ಆದರೆ, ವಾಹನ ನೀರಿನಲ್ಲಿ ಬಿದ್ದಿದ್ದರಿಂದ ಸಾಧ್ಯವಾಗಲಿಲ್ಲ. ನಂತರ ನೀರಿನ ರಭಸಕ್ಕೆ ಅವರು ಹಳ್ಳದಲ್ಲಿ ಬಿದ್ದಿರುವ ಮಾಹಿತಿ ತಿಳಿದ ಸ್ಥಳೀಯರು ಹಗ್ಗ ಎಸೆದು ಅವರ ರಕ್ಷಣೆ ಮುಂದಾಗಿದ್ದರು.
ಆದರೆ, ಹಗ್ಗವನ್ನು ಟೊಂಕಕ್ಕೆ ಕಟ್ಟಿಕೊಳ್ಳಲು ಪಿರಶೆಟ್ಟಿ ಅವರು ಮುಂದಾದಾಗ ನೀರಿನ ಸೆಳೆತಕ್ಕೆ ಅವರು ಗ್ರಾಮಸ್ಥರು , ಸಂಬಂಧಿಕರ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು.ಪೀರಶೆಟ್ಟಿಗಾಗಿ ರಾತ್ರಿಯಿಡಿ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿತ್ತು. ಇಂದುಬೆಳ್ಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಅವರ ಮೃತದೇಹ ಪತ್ತೆ ಹಚ್ಚಿ ಹಳ್ಳದಿಂದ ಹೊರತೆಗೆದಿದ್ದಾರೆ.
ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌. ಘಟನೆಗೆ ಸಂಬಂಧಿಸಿದಂತೆ ನರೋಣಾ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಎನ್ಐ ಪಿಕೆ ಎಎಚ್ 0935
More News
ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

ರಾಜ್ಯದಲ್ಲಿ 4,025 ಕೊರೋನಾ ಸೋಂಕು ದೃಢ: ಒಟ್ಟು ಸಂಖ್ಯೆ 8,16 809 ಕ್ಕೆ ಏರಿಕೆ

29 Oct 2020 | 9:12 PM

ಬೆಂಗಳೂರು, ಅ 28 (ಯುಎನ್ಐ) 1. ರಾಜ್ಯದಲ್ಲಿ 4 ಸಾವಿರದ 25 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 8 ಲಕ್ಷದ 16 ಸಾವಿರದ 809ಕ್ಕೆ ಏರಿಕೆಯಾಗಿದೆ.

 Sharesee more..
ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

29 Oct 2020 | 8:53 PM

ತುಮಕೂರು,ಅ 29 (ಯುಎನ್ಐ) ಹಿಂದಿನ ಸರ್ಕಾರದ ಒಳ್ಳೆಯ ಯೋಜನೆ, ಕಾರ್ಯಕ್ರಮಗಳಿಗೆ ಅನುದಾನ ನೀಡದೇ ಇತಿಶ್ರೀ ಹಾಡಿದ್ದೆ ಬಿಜೆಪಿ, ಯಡಿಯೂರಪ್ಪ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯವಾಗ್ದಾಳಿ ಮಾಡಿದ್ದಾರೆ.

 Sharesee more..