Sunday, Mar 29 2020 | Time 00:51 Hrs(IST)
National Share

ನಿರ್ಭಯಾ ಪ್ರಕರಣ - ಅಕ್ಷಯ್ ಠಾಕೂರ್ ದಯಾ ಮನವಿ : ರಾಷ್ಟ್ರಪತಿ ತಿರಸ್ಕಾರ

ನವದೆಹಲಿ, ಫೆ 5 (ಯುಎನ್ಐ) ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯಲ್ಲರುವ ಅಕ್ಷಯ್ ಠಾಕೂರ್ ಗಲ್ಲು ಶಿಕ್ಷೆ ವಿಧಿಸದಂತೆ ಮಾಡಿದ ದಯಾ ಮನವಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ.

ಈ ವಿಷಯವನ್ನು ಗೃಹ ಸಚಿವಾಲಯದ ಮೂಲಗಳು ಬುಧವಾರ ಖಚಿತಪಡಿಸಿದೆ. ಇದರೊಂದಿಗೆ ನಾಲ್ವರು ಅಪರಾಧಿಗಳು ಪೈಕಿ ಮುಖೇಶ್, ವಿನಯ್ ಮತ್ತು ಅಕ್ಷಯ್ ಅವರ ದಯಾ ಮನವಿ ತಿರಸ್ಕಾರವಾಗಿದೆ.
ನಾಲ್ಕನೇ ಅಪರಾಧಿ ಪವನ್ ಗುಪ್ತಾ ನ್ಯಾಯಾಂಗ ಕೊನೆಯ ಪರಿಹಾರವಾದ ಕ್ಯೂರೆಟಿವ್ ಪೆಟಿಶನ್ ದಾಖಲಿಸಬೇಕಿದೆ. ಇದರ ನಂತರ ದಯಾ ಮನವಿ ಸಲ್ಲಿಸುವ ಅವಕಾಶವಿದೆ.
ನಿರ್ಭಯಾ ಎಂದು ಕರೆಯಲ್ಪಡುವ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದು ಆತನನ್ನು ಬಾಲ ನ್ಯಾಯಮಂಡಳಿ ವಶಕ್ಕೆ ನೀಡಲಾಗಿತ್ತು. ಇನ್ನೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಫೆಬ್ರವರಿ 1 ರಂದು ಈ ನಾಲ್ವರಿಗೆ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿತ್ತು. ಜನವರಿ 31 ರಂದು ದೆಹಲಿ ನ್ಯಾಯಾಲಯ, ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷೆ ಮುಂದೂಡಲಾಗಿದೆ.
ಯುಎನ್ಐ ಜಿಎಸ್ಆರ್ 2209
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..