Wednesday, Feb 26 2020 | Time 10:33 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲು ಸಜ್ಜು

ನವದೆಹಲಿ, ಜನವರಿ 7 (ಯುಎನ್‌ಐ) ದೇಶಾದಾದ್ಯಂತ ಸಂಚಲನ ಮತ್ತು ತಲ್ಲಣ ಮೂಡಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಸಿದ್ಧತೆ ತಿಹಾರ್ ಜೈಲಿನಲ್ಲಿ ನಡೆಯುತ್ತಿದೆ.
ಪಾಟಿಯಾಲ ನ್ಯಾಯಲಯದ ಆದೇಶ ಹೊರ ಬೀಳುತ್ತಿದ್ದಂತೆಯೇ ದೇಶದ ಉದ್ದಗಲಕ್ಕೂ ಮಿಂಚಿನ ಸಂಚಲನ ಮೂಡಿದೆ.
ಗಲ್ಲು ಶಿಕ್ಷೆಯ ಚೌಕಟ್ಟನ್ನು ಹೊಂದಿರುವ ಜೈಲು ಸಂಖ್ಯೆ ಆವರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂದು ಜೈಲಿನ ನ ಮೂಲಗಳು ಮಂಗಳವಾರ ಖಚಿತಪಡಿಸಿವೆ.
ಜೈಲು ಅಧಿಕಾರಿಗಳು ಈ ಕೆಲಸಕ್ಕಾಗಿ ಮೀರತ್ ಜೈಲಿನಲ್ಲಿರುವ ಗಲ್ಲಿಗೇರಿಸುವವರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಮೇಲಾಗಿ . ನೇಣು ಹಾಕಲು ವಿಶೇಷವಾಗಿ ತಯಾರಿಸಿದ ಹಗ್ಗವನ್ನು ಬಿಹಾರದ ಬಕ್ಸಾರ್‌ನಿಂದ ಈಗಾಗಲೇ ಖರೀದಿಸಲಾಗಿದೆ.
ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ರಾಷ್ಟ್ರದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಡೆತ್ ವಾರಂಟ್ ಹೊರಡಿಸಿದೆ.
ಆರು ಅಪರಾಧಿಗಳಲ್ಲಿ ಒಬ್ಬ, ಅಪರಾಧ ನಡೆದಾಗ ಕೇವಲ 18 ಕ್ಕಿಂತ ಕಡಿಮೆ ವಯಸ್ಸಿನ ಬಾಲಾಪರಾಧಿಯಾಗಿ ಎಂಬ ಕಾರಣಕ್ಕೆ ಮೂರು ವರ್ಷ ಬಾಲಗೃಹದಲ್ಲಿ ಇದ್ದು ನಂತರ ಬಿಡುಗಡೆ ಯಾಗಿ ಹೊರಬಂದಿದ್ದಾನೆ.
ಇನ್ನೊಬ್ಬ ಅಪರಾಧಿ ರಾಮ್ ಸಿಂಗ್ ಎಂಬಾತ ಜೈಲಿನಲ್ಲೇ ನೇಣು ಹಾಕಿಕೊಂಡಿದ್ದ
ನಾಲ್ವರು ಅಪರಾಧಿಗಳ ವಿರುದ್ಧ 'ಬ್ಲ್ಯಾಕ್ ವಾರಂಟ್' ಹೊರಡಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಇಂದು ಅಂಗೀಕರಿಸಿದೆ. ಗಲ್ಲಿಗೇರಿಸುವ ದಿನಾಂಕವನ್ನೂ ಗೊತ್ತು ಪಡಿಸಿದೆ..
ನಾಲ್ವರು ಅಪರಾಧಿಗಳನ್ನು ಇದೇ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುವುದು ಎಂದು ಕೋರ್ಟ್ ತೀರ್ಪು ನೀಡಿದೆ.
ಡಿಸೆಂಬರ್ 16, 2012 ರಾತ್ರಿ, 23 ವರ್ಷದ ಪ್ಯಾರಾ-ಮೆಡಿಕಲ್ ವಿದ್ಯಾರ್ಥಿಯನ್ನು ಚಲಿಸುವ ಬಸ್‌ನಲ್ಲೆ ಸಾಮೂಹಿಕ ಅತ್ಯಾಚಾರ ಮಾಡಿ, ಕಬ್ಬಿಣದ ರಾಡ್‌ನಿಂದ ಆಕೆಗೆ ಚಿತ್ರಹಿಂಸೆ ನೀಡಿ ನಂತರ ಆಕೆಯ ದೇಹವನ್ನು ಬಸ್ಸಿನಿಂದ ಹೊರಕ್ಕೆ ಎಸೆದು ದೇಶವೇ ಬೆಚ್ಚಿಬೀಳಿಸುವ ಮೃಗದ ರೀತಿಯಲ್ಲಿ ವರ್ತನೆ ಮಾಡಿದ್ದ ನಾಲ್ವರು ಕಿರಾತಕರಿಗೆ ಕೋರ್ಟ್ ಕೊನೆಗೂ ಗಲ್ಲಿಗೇರಿಸುವ ದಿನಾಂಕ ನಿಗದಿಪಡಿಸಿದೆ .
ತೀವ್ರಗಾಯಗೊಂಡಿದ್ದ ನಿರ್ಭಯ ಕೆಲವು ದಿನಗಳ ನಂತರ ಸಿಂಗಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಅದು ಫಲಕಾರಿಯಾಗದೆ ಮೃತಪಟ್ಟಿದ್ದರು.
ಯುಎನ್ಐ ಕೆಎಸ್ಅರ್ 2114