Friday, Feb 28 2020 | Time 09:12 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ನಿರ್ಭಯಾ ಹಂತಕರಿಗೆ ಗಲ್ಲು, ಜಾರಿ ಇನ್ನೂ ಡೋಲಾಯಮಾನ..!!!

ನಿರ್ಭಯಾ ಹಂತಕರಿಗೆ ಗಲ್ಲು,  ಜಾರಿ ಇನ್ನೂ ಡೋಲಾಯಮಾನ..!!!
ನಿರ್ಭಯಾ ಹಂತಕರಿಗೆ ಗಲ್ಲು, ಜಾರಿ ಇನ್ನೂ ಡೋಲಾಯಮಾನ..!!!

ನವದೆಹಲಿ, ಜನವರಿ 15 (ಯುಎನ್ಐ ) ನಿರ್ಭಯಾ ಅತ್ಯಾಚಾರ, ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ನಾಲ್ವರ ಪೈಕಿ ಒಬ್ಬ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವುದರಿಂದ ಬರುವ 22 ರಂದು ಹಂತಕರಿಗೆ ಗಲ್ಲು ಶಿಕ್ಷೆ ಜಾರಿಯಾಗದು ಎಂದು ದೆಹಲಿ ಸರಕಾರ ಹೈಕೋರ್ಟಿಗೆ ಹೇಳಿದೆ.

ಇದೆ 22ರಂದು ಬೆಳಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಅಪರಾಧಿಗಳಾದ ವಿನಯ್ ಶರ್ಮ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಹಾಗು ಪವನ್ ಗುಪ್ತಾ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಕಳೆದ ವಾರ ಕೋರ್ಟ್ ಆದೇಶ ಮಾಡಿತ್ತು.ಹೀಗಾಗಿ ಇದು ಡೋಲಾಯಮಾನವಾಗಿದೆ ಅಸ್ಪಷ್ಟತೆ ಕಾಣಿಸಿಕೊಂಡಿದೆ.ಆದರೆ ನಾಲ್ವರಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಗುರುವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡರೂ ಅಪರಾಧಿಯೊಬ್ಬನಿಗೆ ಮರಣದಂಡನೆ ಶಿಕ್ಷೆಗೆ ಮೊದಲು ಕಾನೂನು ಬದ್ಧವಾಗಿ 14 ದಿನಗಳ ನೋಟಿಸ್ ನೀಡಬೇಕಿದೆ.

ಕ್ಷಮಾದಾನ ಅರ್ಜಿ ಕುರಿತು ತೀರ್ಮಾನ ಕೈಗೊಳ್ಳದ ಹೊರತು ನಾಲ್ಕು ಮಂದಿಯನ್ನು ಅಪರಾದಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಸರಕಾರದ ಪರ ವಕೀಲ ರಾಹುಲ್ ಮೆಹ್ರಾ ಹೇಳಿದ್ದಾರೆ.

'ಅಪರಾಧಿಗಳು ಪ್ರತ್ಯೇಕವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದು ಕಾನೂನು ಪ್ರಕ್ರಿಯೆ ಇನ್ನಷ್ಟು ವಿಳಂಬಗೊಳಿಸುವ ಉದ್ದೇಶದಿಂದ ಎಂದೂ ಅವರು ಹೇಳಿದ್ದಾರೆ.

ಯುಎನ್ಐ ಕೆಎಸ್ಆರ್ 1621