Sunday, Mar 29 2020 | Time 00:39 Hrs(IST)
National Share

ನಿರ್ಭಯಾ ಹಂತಕರಿಗೆ ಫೆಬ್ರವರಿ ಒಂದರಂದು ಗಲ್ಲು ಜಾರಿ

ನಿರ್ಭಯಾ  ಹಂತಕರಿಗೆ ಫೆಬ್ರವರಿ  ಒಂದರಂದು ಗಲ್ಲು ಜಾರಿ
ನಿರ್ಭಯಾ ಹಂತಕರಿಗೆ ಫೆಬ್ರವರಿ ಒಂದರಂದು ಗಲ್ಲು ಜಾರಿ

ನವದೆಹಲಿ, ಜನವರಿ, 17(ಯುಎನ್ಐ ) ರಾಷ್ಟ್ರಪತಿಗೆ ರಾಂನಾಥ್ ಕೋವಿಂದ್ ಕ್ಷಮಾಧಾನ ಮನವಿ ತಿರಸ್ಕರಿಸಿದ ನಂತರ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಎಲ್ಲ ನಾಲ್ವರು ಅಪರಾಧಿಗಳನ್ನು ಫೆಬ್ರುವರಿ 1ರ ಬೆಳಗ್ಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ಶುಕ್ರವಾರ ಹೊಸ ಡೆತ್ ವಾರಂಟ್ ಹೊರಡಿಸಿದೆ.

ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಸಲ್ಲಿಸಿದ್ದ ಮನವಿ ವಜಾಗೊಂಡ ದೆಹಲಿ ಕೋರ್ಟ್ ಹೊಸದಾಗಿ ಆದೇಶ ಮಾಡಿದೆ.

ಆದರೆ ಕೇಂದ್ರ ಸರ್ಕಾರ ಹಾಗೂ ದಿಲ್ಲಿ ಸರ್ಕಾರ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸ್ಸಿನಂತೆ ಅರ್ಜಿಯನ್ನು ರಾಷ್ಟ್ರಪತಿ ಕ್ಷಮಾಧಾನ ಮನವಿಯನ್ನೂ ವಜಾಗೊಳಿಸಿದ್ದರು.

ಕ್ಷಮಾದಾನ ಅರ್ಜಿ ವಜಾಗೊಳಿಸಿದ ಬಳಿಕ 14 ದಿನಗಳ ಕಾಲಾವಕಾಶ ನೀಡಬೇಕು ಎಂಬುದು ಕಾನೂನು ಇದ್ದಿರುವ ಹಿನ್ನೆಲೆಯಲ್ಲಿ ದಿಲ್ಲಿ ಕೋರ್ಟ್ ಇದೀಗ ನಾಲ್ವರು ಆರೋಪಿಗಳನ್ನು ಫೆ.1ರಂದು ಬೆಳಗ್ಗೆ ಗಲ್ಲಿಗೇರಿಸಲು ಹೊಸ ಡೆತ್ ವಾರಂಟ್ ಹೊರಡಿಸಿದೆ.

ಈ ಮೊದಲು ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಇದೆ 22ರಂದು ಬೆಳಗ್ಗೆ ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಹೊರಡಿಸಿತ್ತು. ಈ ನಡುವೆ ಅಪರಾಧಿ ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದ ಜ.22ರಂದು ಗಲ್ಲಿಗೇರಿಸಲು ತಡೆ ನೀಡಬೇಕೆಂದು ಕೋರಿ ದಿಲ್ಲಿ ಸರ್ಕಾರ ಕೋರ್ಟ್ ಗೆ ಮನವಿ ಮಾಡಿಕೊಂಡತ್ತು ಈಗ ಎಲ್ಲ ಅಡೆ ತಡೆ ನಿವಾರಣೆಯಾಗಿ ದೇಶದ ಜನರ ಮನಸ್ಸಿನ ಭಾವನೆಯಂತೆ ಫೆಬ್ರವರಿ ಒಂದರಂದು ನೇಣಿಗೇರಿಸಲಾಗುವುದು .

ಯುಎನ್ಐ ಕೆಎಸ್ಆರ್ 2228

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..