Wednesday, Jan 29 2020 | Time 13:35 Hrs(IST)
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
 • ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
 • ಇರ್ಫಾನ್ ಪಠಾಣ್ ಮೊದಲ ಓವರ್ ಹ್ಯಾಟ್ರಿಕ್ ಸಾಧನೆಗೆ ಇದೀಗ 14 ವರ್ಷ
 • ನಿರ್ಭಯಾ ಪ್ರಕರಣ, ಅಪರಾಧಿ ಮುಖೇಶ್ ಮನವಿ ತಿರಸ್ಕೃತ
Parliament Share

ನಿರ್ಮಲಾ ವಿರುದ್ಧ 'ನಿರ್ಬಲ’ ಹೇಳಿಕೆಗೆ ಅಧೀರ್ ವಿಷಾಧ

ನವದೆಹಲಿ, ಡಿ ೦೪ (ಯುಎನ್‌ಐ) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ನೀಡಿದ 'ನಿರ್ಬಲ (ದುರ್ಬಲ)’ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಕುರಿತ ಚರ್ಚೆಯ ಮುಕ್ತಾಯದ ಸಂದರ್ಭದಲ್ಲಿ, ಚೌಧರಿ ಅವರು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನನ್ನ ಸಹೋದರಿಯನ್ನಾಗಿ ಪರಿಗಣಿಸುತ್ತೇನೆ. ಸಹೋದರನಾಗಿ ನನ್ನಿಂದ ಅವರಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದರು.
ಅಧೀರ್ ಅವರ ’ನಿರ್ಬಲ’ ಹೇಳಿಕೆಗೆ ಸೋಮವಾರ ತೆರಿಗೆ ಕಾನೂನು ತಿದ್ದುಪಡಿ ಮಸೂದೆಯ ಚರ್ಚೆಗೆ ಉತ್ತರಿಸುವಾಗ ಖಡಕ್ಕಾಗಿ ತಿರುಗೇಟು ನೀಡಿದ್ದ ನಿರ್ಮಲಾ ಸೀತಾರಾಮನ್, ಬಿಜೆಪಿಯಲ್ಲಿನ ಎಲ್ಲ ಮಹಿಳೆಯರೂ ’ಸಬಲರು’ ಎಂದಿದ್ದರು.
ಬುಧವಾರ ನಡೆದ ಕಲಾಪದಲ್ಲಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇತೃತ್ವದ ಸರ್ವಪಕ್ಷಗಳ ನಿಯೋಗವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಬುಧವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಅಧೀರ್ ಚೌಧರಿ ಒತ್ತಾಯಿಸಿದರು.
"ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ನೋಡಲು ಬಯಸುತ್ತೇವೆ ...." ಎಂದು ಅವರು ಹೇಳಿದರು.
ಯುಪಿಎ -೨ ಅವಧಿಯಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಚೌಧರಿ, ರೈಲ್ವೆ ಸೇರಿದಂತೆ ವಿವಿಧ ಪಿಎಸ್ಯುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
"ರೈಲ್ವೆಯನ್ನು ಖಾಸಗೀಕರಣದ ಕ್ರಮದಿಂದ ದೂರವಿಡಬೇಕೆಂದು ನಾನು ಮನಃಪೂರ್ವಕವಾಗಿ ಒತ್ತಾಯಿಸುತ್ತೇನೆ ...." ಎಂದು ಅವರು ಹೇಳಿದರು.
ಯುಎನ್‌ಐ ಎಸ್‌ಎ ವಿಎನ್ ೧೯೩೬