Saturday, Sep 26 2020 | Time 22:59 Hrs(IST)
  • ಮುಖ್ಯಮಂತ್ರಿ ಮಾತಿಗೂ ಬೆಲೆಕೊಡದ ಆಡಳಿತ ಪಕ್ಷದ ಶಾಸಕರು-ನಿಮ್ಮ ಹಣೆಬರಹ ಏನುಬೇಕಾದರೂ ಮಾಡಿಕೊಳ್ಳಿ; ಯಡಿಯೂರಪ್ಪ
  • ರಾಜ್ಯದಲ್ಲಿ 8811 ಕೋವಿಡ್‌ ಪ್ರಕರಣಗಳು ವರದಿ; ಒಟ್ಟು ಸೋಂಕಿತರ ಸಂಖ್ಯೆ 5 66 ಲಕ್ಷಕ್ಕೇರಿಕೆ
  • ಕುಟುಂಬದ ವಿರುದ್ಧ ಆರೋಪ ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ : ಆರೋಪ ಸಾಬೀತುಮಾಡಲು ಸಾಧ್ಯವಾಗದ್ದರೆ ನೀವು ರಾಜೀನಾಮೆ ನೀಡಿ-ಯಡಿಯೂರಪ್ಪ
  • ಬಿಡಿಎ ಹಗರಣ: ಆರೋಪ ತಾಬೀತುಪಡಿಸಿದರೆ ರಾಜಕೀಯ ನಿವೃತ್ತಿ- ಸಿದ್ದರಾಮಯ್ಯ
  • ಕೋವಿಡ್ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ, ಭಯೋತ್ಪಾದನೆ ನಿಗ್ರಹಿಸಿದ ಸೇನೆಗೆ ಸಿಆರ್ ಪಿಎಫ್ ಶ್ಲಾಘನೆ
  • ಅವಿಶ್ವಾಸ ನಿರ್ಣಯ ಡಿವಿಷನ್ ಹಾಕಲ್ಲ-ಧ್ವನಿಮತದ ಮೂಲಕ ನಡೆಸಲು ತೀರ್ಮಾನ: ಸ್ಪೀಕರ್ ಕಾಗೇರಿ
  • ಭೂ ಸುಧಾರಣಾ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ದ್ವಂದ್ವ ನಿಲುವು-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾಯ್ದೆ ವಿರುದ್ಧ,ಮಗ ಮಾಜಿ ಮುಖ್ಯಮಂತ್ರಿ ಕಾಯ್ದೆ ಪರ ನಿಲುವು
  • ನಡ್ಡಾ ಹೊಸ ತಂಡ ರಚನೆ: 12 ಉಪಾಧ್ಯಕ್ಷರು, ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಬಿಜೆಪಿ ಹೊಸ ಪದಾಧಿಕಾರಿಗಳ ನೇಮಕ
  • ಲಡಾಕ್‌ ಸಂಸದರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿಯಾದ ಅಮಿತ್‌ ಶಾ
  • ವಿಶ್ವಸಂಸ್ಥೆಗೆ ಪರೋಕ್ಷ ಎಚ್ಚರಿಕೆ- ನಿರ್ಧಾರಗಳಿಂದ ಭಾರತವನ್ನು ಎಷ್ಟು ಕಾಲ ಹೊರಗಿಡಲು ಸಾಧ್ಯ? -ಪ್ರಧಾನಿ ಮೋದಿ
  • ವಿಶ್ವಸಂಸ್ಥೆಯಿಂದ ಭಾರತ ಇನ್ನೆಷ್ಟು ಕಾಲ ದೂರ ಇರಿಸುತ್ತೀರಿ: ಪ್ರಧಾನಿ ಮೋದಿ ತೀಕ್ಷ್ಣ ಪ್ರಶ್ನೆ
  • ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ನಡುವೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕಕ್ಕೆ ಅನುಮೋದನೆ
  • ಯಾವುದೇ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡಲು ವಿಜ್ಞಾನ ಸದಾ ಮುಂದುವರೆದಿದೆ- ತಜ್ಞರ ಪ್ರತಿಪಾದನೆ
  • ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ: ಸಿ ಟಿ ರವಿ, ತೇಜಸ್ವಿ ಸೂರ್ಯಗೆ ಸ್ಥಾನ
  • ವ್ಯಭಿಚಾರ ಅಪರಾಧ ವಲ್ಲ : ಮುಂಬೈ ಹೈಕೋರ್ಟ್
Parliament Share

ನಿರ್ಮಲಾ ಸೀತಾರಾಮನ್ ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ

ನಿರ್ಮಲಾ ಸೀತಾರಾಮನ್  ಕ್ಷಮೆಯಾಚಿಸಿದ  ಅಧೀರ್ ರಂಜನ್  ಚೌಧರಿ
ನಿರ್ಮಲಾ ಸೀತಾರಾಮನ್ ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ

ನವದೆಹಲಿ, ಡಿ ೪ (ಯುಎನ್‌ಐ) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದರು. ನಿರ್ಮಲಾ ಹಿರಿಯ ಸಹೋದರಿಯಿದ್ದಂತೆ , ನಾನು ಅವರ ಕಿರಿಯ ಸಹೋದರನಂತೆ ಎಂದು ಸ್ಪಷ್ಟಪಡಿಸಿದರು.

ವಿವಾದಾತ್ಮಕ ಹೇಳಿಕೆ ನೀಡಿದ ಎರಡು ದಿನಗಳ ನಂತರ ಅವರು ಲೋಕಸಭೆಯಲ್ಲಿ ಕ್ಷಮೆಯಾಚಿಸಿದರು. ಆದರೆ, ಕಾಂಗ್ರೆಸ್ ವರಿಷ್ಠರು ಒತ್ತಡ ಹೇರಿದ ಕಾರಣ, ಅವರು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

ಆದರೆ, ಕಾಂಗ್ರೆಸ್ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ನಿರ್ಮಲಾ ಸೀತಾರಾಮನ್ ಕುರಿತ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದವು. ಲೋಕಸಭೆಯಲ್ಲಿ ಸೋಮವಾರ ಅಧೀರ್ ರಂಜನ್ ಚೌಧರಿ ಮಾತನಾಡುತ್ತಾ, ನಿರ್ಮಲಾ ಸೀತಾರಾಮನ್ “ನಿರ್ಬಲ” ಹಣಕಾಸು ಸಚಿವರು ಎಂದು ಲೇವಡಿಮಾಡಿದ್ದರು.

ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಬಹಳ ಗೌರವ ಹೊಂದಿದ್ದಾನೆ, ಆದರೆ ಕೆಲವೊಮ್ಮೆ ಅವರನ್ನು ಏನೆಂದು ಕರೆಯಬೇಕೆಂದು ತಿಳಿಯುತ್ತಿಲ್ಲಎಂದರು “ ನಿಮ್ಮ ಬಗ್ಗೆ ನನಗೆ ಹೆಚ್ಚು ಗೌರವವಿದೆ, ಆದರೆ ನಿರ್ಮಲಾ ಸೀತಾರಾಮನ್ ಅನ್ನುವುದಕ್ಕೆ ಬದಲು “ನಿರ್ಬಲ ಸೀತಾರಾಮನ್” ಎಂದು ಕರೆಯುವುದು ಸೂಕ್ತವೇ? ಅಲ್ಲವೇ ? ಎಂದು ಹಲವು ಬಾರಿ ನಾನು ಯೋಚಿಸುತ್ತೇನೆ. ನೀವು ಮಂತ್ರಿ ಸ್ಥಾನದಲ್ಲಿದ್ದೀರಿ, ಆದರೆ ನೀವು ನಿಮ್ಮ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೀರಾ? ಅಥವಾ ಇಲ್ಲವಾ? ಎಂಬ ಸಂದೇಹ ತಮ್ಮನ್ನು ಕಾಡುತ್ತದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.



ಯುಎನ್‌ಐ ಕೆವಿಆರ್

More News

ಲೋಕಸಭೆಯಲ್ಲಿ ಶೇ 167 ಉತ್ಪಾದಕತೆ: ಓಂ ಬಿರ್ಲಾ

23 Sep 2020 | 10:20 PM

 Sharesee more..
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..
58 ದೇಶಗಳು  517 ಕೋಟಿ    ಇದು ಪ್ರಧಾನಿ ಮೋದಿ  ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..