Saturday, Mar 28 2020 | Time 23:30 Hrs(IST)
  • ಕೊವಿದ್‍-19: ರಾಜ್ಯದಲ್ಲಿ ಹೊಸ 12 ಪ್ರಕರಣಗಳು ದೃಢ, ಒಟ್ಟು ಸಂಖ್ಯೆ 76ಕ್ಕೆ ಏರಿಕೆ
  • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
  • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
  • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
  • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
  • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
  • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
  • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
  • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
  • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
  • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
  • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
  • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
  • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
  • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
Karnataka Share

ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ಹಣ ನೀಡಿದೆ: ಗೋವಿಂದ ಕಾರಜೋಳ

ಚಿಕ್ಕೋಡಿ, ಜ.24 (ಯುಎನ್ಐ) ಕೇಂದ್ರದ ಎನ್ ಡಿ ಆರ್ ಎಫ್ ಪ್ರಕಾರ 95 ಸಾವಿರ ರೂಪಾಯಿ ಮಾತ್ರ ಪೂರ್ಣ ಬಿದ್ದ ಮನೆಗೆ ನೀಡಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ 5 ಲಕ್ಷ ರೂ ಪರಿಹಾರ ಹಣ ನೀಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯ ಅವರು, ಬೆಳೆ ಪರಿಹಾರಕ್ಕಾಗಿ ಒಣ ಬೇಸಾಯದ ಬೆಳೆಗೆ 6,800 ಹಾಗೂ ನೀರಾವರಿ ಬೆಳೆಗೆ 13,000 ಪರಿಹಾರ ಹಣ ನೀಡಲಾಗುತ್ತಿದೆ. ಹಣ್ಣು ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ 18,000 ಪರಿಹಾರ ಹಣ ನೀಡಲಾಗುತ್ತಿತ್ತು. ಇವೆಲ್ಲದಕ್ಕೂ ಹೆಚ್ಚಿಗೆ 10,000 ನೀಡಲಾಗುತ್ತಿದೆ ಎಂದು ಹೇಳಿದರು.
ನೂರಕ್ಕೆ ಶೇಕಡಾ 99ರಷ್ಟು ಪ್ರತಿಶತ ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಶತ ಉಳಿದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧವಾಗಿದೆ. ಸರಕಾರದ ಖಜಾನೆಯಲ್ಲಿ ಹಣ ಇಲ್ಲಾ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚು ವರಿಯಾಗಿ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದರು.
ಮಂಗಳೂರ ಬಾಂಬ್ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ, ವಿಧ್ವಂಸಕ ಕೃತ್ಯವನ್ನು ಯಾರು ಮಾಡಿದರು ಅದು ತಪ್ಪು. ಯಾವುದೇ ಧರ್ಮ ಎನ್ನುವುದಕ್ಕಿಂತ ನಾವು ಭಾರತೀಯರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದರು.
ಆದಿತ್ಯ ರಾವ್ ಪ್ರಭಾಕರ್ ಭಟ್ ಜೊತೆಗಿನ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಕರ್ನಾಟಕದಲ್ಲಿ ನನ್ನೊಂದಿಗೂ ಬಹಳ ಜನ ಫೋಟೋ ತೆಗೆದುಕೊಂಡಿದ್ದಾರೆ, ಅವರು ಏನಾದರೂ ಮಾಡಿದರೆ ನಾನು ಜವಾಬ್ದಾರಿ ಆಗಿತ್ತೇನಾ ? ಎಂದು ಪ್ರಶ್ನಿಸಿದರು.
ಯುಎನ್ಐ ಎಎಚ್ 2250
More News
ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ

ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ

28 Mar 2020 | 9:54 PM

ಬೆಂಗಳೂರು,ಮಾ 28 []ಯುಎನ್ಐ] ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದಾಗಿ ಘೋಷಿಸಲಾಗಿರುವ 21 ದಿನಗಳ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸರ್ಕಾರ ಅಗತ್ಯ ವ್ಯವಸ್ಥೆ ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 Sharesee more..
ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್

ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್

28 Mar 2020 | 9:41 PM

ಬೆಂಗಳೂರು, ಮಾ 28 (ಯುಎನ್ಐ) ದೇಶಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿರುವವರೆಗೆ ಸಾಲ‌ಗಾರರ ಆಸ್ತಿಪಾಸ್ತಿ ಅಥವಾ ವಾಹನಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

 Sharesee more..