Wednesday, Jan 29 2020 | Time 14:25 Hrs(IST)
 • ವುಹಾನ್‌ನಿಂದ ವಿದೇಶಿ ನಾಗರಿಕರ ಸ್ಥಳಾಂತರಕ್ಕೆ ಚೀನಾ ಸಹಾಯ
 • ಎಂ ಎಸ್ ಧೋನಿ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ
 • ರೋಹಿತ್ ಸ್ಪೋಟಕ ಅರ್ಧಶತಕ: ನ್ಯೂಜಿಲೆಂಡ್‌ಗೆ 180 ರನ್ ಗುರಿ
 • ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು, 40 ಜನರಿಗೆ ಗಾಯ
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
Parliament Share

ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ

ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ
ನೀಲಂಬೂರು-ನಂಜನಗೂಡು ರೈಲ್ವೆ ಯೋಜನೆ ಜಾರಿಗೆ ರಾಹುಲ್ ಆಗ್ರಹ

ನವದೆಹಲಿ, ಡಿಸೆಂಬರ್ 4 (ಯುಎನ್ಐ) ಕೇರಳ - ಕರ್ನಾಟಕ ಬೆಸೆಯುವ, ಸಂಪರ್ಕ ಕಲ್ಪಿಸುವ ಪ್ರಮುಖ ನೀಲಂಬೂರ್-ನಂಜನಗೂಡು ಯೋಜನೆಯನ್ನು ಕೇಂದ್ರ ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ, ವಯನಾಡು ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆಗ್ರ ಹಪಡಿಸಿದರು

ಸದನದಲ್ಲಿ ಈ ಈ ವಿಷಯ ಪ್ರಸ್ತಾಪಿಸಿದ ಅವರು , ನೀಲಂಬೂರ್-ನಂಜನಗೂಡು ರೈಲ್ವೆ ಮಾರ್ಗವು ತನ್ನ ಕ್ಷೇತ್ರದ ವಯನಾಡಿನ ಜನರಿಗೆ ಬಹಳ ಅಗತ್ಯ ನಿರ್ಣಾಯಕವಾಗಿದೆ ಹೀಗಾಗಿ ಇದನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಬೇಕು, ಬೇಗ ಪೂರ್ಣ ಮಾಡಬೇಕು ಎಂದು ಹೇಳಿದರು.

ಸಿಪಿಐ (ಎಂ) ನೇತೃತ್ವದ ಕೇರಳ ಸರ್ಕಾರಕ್ಕೆ ಈ ಯೋಜನೆ ಪೂರ್ಣಗೊಳಿಸಲು ಕೇಂದ್ರವು ಎಲ್ಲ ರೀತಿಯ ಬೆಂಬಲ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನೀಲಾಂಬುರು ಕೇರಳದ ವಯನಾಡ್ ಪ್ರದೇಶದ ವ್ಯಾಪ್ತಿಗೆ ಬಂದರೆ ನಂಜನಗೂಡು ಕರ್ನಾಟಕದಲ್ಲಿದೆ.

ಡಿಎಂಕೆ ಸದಸ್ಯ ಎಂ.ಕಣಿಮೋಳಿ ಮತ್ತು ಬಿಜೆಪಿ ಸದಸ್ಯ ರವಿ ಕಿಶನ್ ಮತ್ತು ಲಾಕೆಟ್ ಚಟರ್ಜಿ ಕೂಡ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು.

ಚಟರ್ಜಿ ಅವರು ತಮ್ಮ ಕ್ಷೇತ್ರ ಹೂಗ್ಲಿ ಒಂದು ಕಾಲದಲ್ಲಿ ಸೆಣಬಿನ ಉತ್ಪಾದನೆಯ ಕೇಂದ್ರವಾಗಿತ್ತು ಮತ್ತು ಆದ್ದರಿಂದ ಸೆಣಬಿನ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಕೇಂದ್ರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಸರಕಾರವನ್ನು ಒತ್ತಾಯಿಸಿದರು .

ಯುಎನ್ಐ ಕೆಎಸ್ಆರ್ 1522