Friday, Dec 13 2019 | Time 10:51 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Sports Share

ನಾಳೆ ವಿಂಡೀಸ್ ತವರು ಸರಣಿಗೆ ಭಾರತ ತಂಡ ಆಯ್ಕೆ : ರೋಹಿತ್‌ಗೆ ವಿಶ್ರಾಂತಿ ?, ಧವನ್ ಆಯ್ಕೆ ಅನುಮಾನ

ನವದೆಹಲಿ, ನ 20 (ಯುಎನ್‌ಐ) ವೆಸ್ಟ್‌ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಭಾರತ ತಂಡವನ್ನು ನಾಳೆ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಪ್ರಕಟಿಸಲಿದ್ದು, ಉಪ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆದರೆ, ಬ್ಯಾಾಟಿಂಗ್ ಲಯ ಕಳೆದುಕೊಂಡಿರುವ ಆರಂಭಿಕ ಶಿಖರ್ ಧವನ್ ಅವರ ಆಯ್ಕೆ ತೀವ್ರ ಕುತೂಹಲ ಮೂಡಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ಬಾಗಿಲು ತೆರೆದರೂ ಅಚ್ಚರಿಯೇನಿಲ್ಲ
ಉಪ ನಾಯಕ ರೋಹಿತ್ ಶರ್ಮಾ ಐಸಿಸಿ ವಿಶ್ವಕಪ್ ಟೂರ್ನಿ ಮುಗಿದ ದಿನದಂದಲೂ ಬಿಡುವಿಲ್ಲದೆ ರಾಷ್ಟ್ರೀಯ ತಂಡದಲ್ಲಿ ತೊಡಗಿಸಿಕೊಂಡಿದ್ದಾಾರೆ. ಹಾಗಾಗಿ, ವೆಸ್ಟ್‌ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಅವರಿಗೆ ವಿಶ್ರಾಂತಿ ನೀಡಬಹುದು. ಒಂದು ವೇಳೆ ಅವರಿಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಅವರು ಮುಂದಿನ ವರ್ಷ ನ್ಯೂಜಿಲೆಂಡ್ ಪ್ರವಾಸಕ್ಕೆೆ ತಂಡಕ್ಕೆೆ ಮರಳಲಿದ್ದಾರೆ. ಕಿವೀಸ್ ವಿರುದ್ಧ ಭಾರತ ಐದು ಪಂದ್ಯಗಳ ಟಿ-20, ಮೂರು ಪಂದ್ಯಗಳ ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ.
ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯು ಡಿ.6 ರಂದು ಮುಂಬೈನಲ್ಲಿ ಆರಂಭಗೊಂಡು ಡಿ.8 ರಂದು ತಿರುವನಂತಪುರಂ ಹಾಗೂ ಡಿ.11 ರಂದು ಹೈದರಾಬಾದ್ ನಲ್ಲಿ ಮುಕ್ತಾಯವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ಡಿ.15 ರಂದು ಚೆನ್ನೈನಲ್ಲಿ ಆರಂಭಗೊಂಡು, ಡಿ.18 ರಂದು ವಿಶಾಖಪಟ್ಟಣಂ ಹಾಗೂ ಡಿ.22ಕ್ಕೆೆ ಕಟಕ್ ನಲ್ಲಿ ಮೂರನೇ ಪಂದ್ಯದೊಂದಿಗೆ ತವರು ಸರಣಿ ಅಂತ್ಯವಾಗಲಿದೆ.
ಐಪಿಎಲ್ ಸೇರಿದಂತೆ ಪ್ರಸಕ್ತ ವರ್ಷದಲ್ಲಿ ಒಟ್ಟು 60 ಪಂದ್ಯಗಳಾಡಿರುವ ರೋಹಿತ್ ಶರ್ಮಾ ಬಗ್ಗೆೆ ಆಯ್ಕೆ ಸಮಿತಿ ಹೆಚ್ಚು ಚರ್ಚೆ ನಡೆಸಲಿದೆ. ಪ್ರಸಕ್ತ ಆವೃತ್ತಿಯಲ್ಲಿ ಹಿಟ್‌ಮನ್ 25 ಏಕದಿನ, 11 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದಾರೆ. ಇತ್ತೀಚೆಗೆ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿಿ ಗಿಂತ ರೋಹಿತ್ ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳು ಹೆಚ್ಚಾಗಿ ಆಡಿದ್ದಾರೆ. ಈ ಹಿನ್ನೆೆಲೆಯಲ್ಲಿ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಹೆಬ್ಬೆೆರಳು ಗಾಯದಿಂದಾಗಿ ತವರಿಗೆ ಮರಳಿದ್ದ ಶಿಖರ್ ಧವನ್ ಇನ್ನೂ ಬ್ಯಾಟಿಂಗ್ ಲಯಕ್ಕೆೆ ಮರಳುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ ಅದ್ಭುತ ಲಯದಲ್ಲಿರುವ ಮಯಾಂಕ್ ಅಗರ್ವಾಲ್ ಅವರಿಗೂ ಸೀಮಿತ ಓವರ್‌ಗಳ ತಂಡಕ್ಕೂ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಅವರು ಲಿಸ್ಟ್‌ ‘ಎ’ ಕ್ರಿಕೆಟ್ ನಲ್ಲಿ ಶೇ. 50 ಸರಾಸರಿ ಹಾಗೂ ಸ್ಟ್ರೈಕ್ ರೇಟ್ 100ಕ್ಕೂ ಹೆಚ್ಚು ಹೊಂದಿದ್ದಾರೆ. ಹಾಗಾಗಿ, ಕೆ.ಎಲ್ ರಾಹುಲ್ ಅವರ ಜತೆಗೆ ಮತ್ತೊಬ್ಬ ಆರಂಭಿಕನಾಗಿ ಅಗರ್ವಾಲ್‌ಗೆ ಅವಕಾಶ ನೀಡಿದರೂ ಅಚ್ಚರಿ ಪಡುವಂತಿಲ್ಲ.
ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಶಿಖರ್ ಧವನ್ 41 (42 ಎಸೆತ), 31 (27 ಎಸೆತ) ಹಾಗೂ 19 (16 ಎಸೆತ) ರನ್ ಗಳಿಸಿದ್ದರು. ದೇಶೀಯ ಕ್ರಿಕೆಟ್ ನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಕಳಪೆ ಪ್ರದರ್ಶನ ತೋರಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ 0 (9), ಜಾರ್ಖಂಡ್ ವಿರುದ್ಧ 9 (6), ಸಿಕ್ಕಿಂ ವಿರುದ್ಧ 19 (16) ಹಾಗೂ ಓಡಿಶಾ ವಿರುದ್ಧ 35 (33) ರನ್‌ಗಳಿಗೆ ಸೀಮಿತರಾಗಿದ್ದರು.
ಇನ್ನು, ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಕಳೆದ ಚುಟುಕು ಸರಣಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರಿಲ್ಲ. ಹಾಗಾಗಿ, ಮೀಸಲು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ಅವಕಾಶಕ್ಕಾಗಿ ಸರತಿ ಸಾಲಿನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಮುಂದುವರಿಸಬಹುದು.
ಕಳೆದ ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ಕೃನಾಲ್ ಪಾಂಡ್ಯ ಅವರ ಆಯ್ಕೆ ಕೂಡ ತೀವ್ರ ಕುತೂಹಲ ಕೆರಳಿಸಿದೆ. ಉತ್ತಮ ಲಯದಲ್ಲಿರುವ ಯಜುವೇಂದ್ರ ಚಾಹಲ್ ಹಾಗೂ ರವೀಂದ್ರ ಜಡೇಜಾ ಅವರು ತಂಡದಲ್ಲಿ ಮುಂದುವರಿಯಲಿದ್ದಾಾರೆ. ಚುಟುಕು ಕ್ರಿಕೆಟ್ ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ದೀಪಕ್ ಚಾಹರ್ ತಂಡದಲ್ಲಿ ಮುಂದುವರಿದರೆ, ಖಲೀಲ್ ಅಹಮದ್ ಅವರ ಎಕಾನಮಿ ಕಡಿಮೆ ಇದೆ. ಬಾಂಗ್ಲಾ ವಿರುದ್ಧ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 37 ಕ್ಕೆೆ 1 ಹಾಗೂ 44 ಕ್ಕೆೆ 1 ದುಬಾರಿಯಾಗಿದ್ದರು.
ಯುಎನ್‌ಐ ಆರ್ ಕೆ 1931