Sunday, Nov 1 2020 | Time 00:04 Hrs(IST)
Sports Share

ನಾವು ಏಕೆ ತರಬೇತಿ ಪಡೆಯುತ್ತಿದ್ದೇವೆ ಎಂಬುದರ ನಮಗೆ ತಿಳಿದಿಲ್ಲ: ಮಿಥಾಲಿ

ನವದೆಹಲಿ, ಸೆ. 22 (ಯುಎನ್ಐ)- ಭವಿಷ್ಯದ ವೇಳಾಪಟ್ಟಿಯ ಬಗ್ಗೆ ತಂಡವು ಚಿಂತಿತವಾಗಿದ್ದು, ತಂಡ ಯಾವ ಸರಣಿಗೆ ತರಬೇತಿ ಪಡೆಯುತ್ತಿದೆ ಎಂದುದು ಅವರಿಗೆ ತಿಳಿದಿಲ್ಲ ಎಂದು ಭಾರತೀಯ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ ಕ್ರೀಡಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿವೆ. ಮಹಿಳಾ ತಂಡದ ಕಾರ್ಯಕ್ರಮದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಐಪಿಎಲ್‌ಗಾಗಿ ಪುರುಷರ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿದ್ದರೂ, ಅವರು ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಮಹಿಳಾ ತಂಡದ ಪ್ರವಾಸದ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

“ನಾವು ಈಗ ಏಕೆ ತರಬೇತಿ ಪಡೆಯುತ್ತಿದ್ದೇವೆ ಎಂಬುದು ನಮಗೆ ತಿಳಿದಿಲ್ಲವಾದ್ದರಿಂದ ತಂಡದ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಇದಕ್ಕಾಗಿ ಒಂದು ಉದ್ದೇಶದ ಅಗತ್ಯವಿದೆ. ಈ ಮೊದಲು, ನಾವು ಅಂತಾರಾಷ್ಟ್ರೀಯ ಸರಣಿಯನ್ನು ಆಡಬೇಕಾದರೆ ಮತ್ತು ಅದು ವಿದೇಶಿ ಪ್ರವಾಸವಾಗಿದ್ದರೆ, ನಾವು ಅದಕ್ಕೆ ತಕ್ಕಂತೆ ತಯಾರಿ ನಡೆಸಬೇಕು. ದೇಶೀಯ ಸರಣಿ ಇದ್ದಿದ್ದರೆ, ನಾವು ಅದಕ್ಕೆ ತಕ್ಕಂತೆ ಸಿದ್ಧಪಡಿಸುತ್ತಿದ್ದೆವು, ಆದರೆ ನಾವು ಏನು ತರಬೇತಿ ಪಡೆಯುತ್ತಿದ್ದೇವೆ ಎಂಬುದುರ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ” ಎಂದು ತಿಳಿಸಿದ್ದಾರೆ.

"ಕೆಲವೊಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್, ಅಂತಾರಾಷ್ಟ್ರೀಯ ಸರಣಿ ಅಥವಾ ದೇಶೀಯ ಪಂದ್ಯಗಳಿಲ್ಲದಿದ್ದರೆ, ತರಬೇತಿ ನೀಡುವ ಅವಶ್ಯಕತೆ ಇಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಈ ಸಮಯದಲ್ಲಿ ಒಂದು ಸಕಾರಾತ್ಮಕ ವಿಷಯ ಸಂಭವಿಸಿದ್ದು, ನಾವು ಕ್ರಮೇಣ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ” ಎಂದಿದ್ದಾರೆ.

"ಆದರೆ ಇದೀಗ ನೀವು ಎಲ್ಲವನ್ನೂ ಸಮಯದೊಂದಿಗೆ ಆಡಬೇಕು. ಮತ್ತು ಬಹುಶಃ ಬೌಲರ್‌ಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಎರಡು-ಮೂರು ಬೌಲರ್‌ಗಳು ಮಾತ್ರ ಇದ್ದಾರೆ. ಆದರೆ ಒಂದು ಸಮಯದಲ್ಲಿ ನಾವು ಪಂದ್ಯವನ್ನು ಆಡುತ್ತೇವೆ ಮತ್ತು ಆದ್ದರಿಂದ ತಂಡದ ಆಟಗಾರರು ಅವರ ಫಿಟ್‌ನೆಸ್‌ನತ್ತ ಗಮನ ಹರಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಮಿಥಾಲಿ ತಿಳಿಸಿದ್ದಾರೆ.

ಯುಎನ್ಐ ವಿಎನ್ಎಲ್ 1836
More News
ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

31 Oct 2020 | 9:53 PM

ದುಬೈ, ಅ.31 (ಯುಎನ್ಐ)- ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಮರ್ಮ ಅರಿಯುವಲ್ಲಿ ವಿಫಲರಾಗಿದ್ದೇವೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

 Sharesee more..

ಸನ್ ದಾಳಿಗೆ ಬೆಂಗಳೂರು ತಬ್ಬಿಬ್ಬು

31 Oct 2020 | 9:28 PM

 Sharesee more..
ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

31 Oct 2020 | 8:03 PM

ಅಬುಧಾಬಿ, ಅ 31(ಯುಎನ್ಐ) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 Sharesee more..

ಮುಂಬೈ ಮುಂದುವರಿಸಿದ ಗೆಲುವಿನ ನಾಗಾಲೋಟ

31 Oct 2020 | 6:47 PM

 Sharesee more..