Monday, Aug 3 2020 | Time 23:32 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ

ಬೀಜಿಂಗ್, ಜುಲೈ ೪(ಯುಎನ್‌ಐ) ಚೈನಾ ಬ್ಯಾಡ್ಮಿಂಟನ್ ಸೂಪರ್ ಸ್ಟಾರ್ ೩೬ ವರ್ಷದ ಲಿನ್ ಡಾನ್ ಕ್ರೀಡಾ ಬದುಕಿನಿಂದ ನಿವೃತ್ತಿಯಾಗುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಸತತ ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಲಿನ್ ಇತಿಹಾಸ ನಿರ್ಮಿಸಿದ್ದರು. ೨೦೦೮ ಬೀಜಿಂಗ್, ೨೦೧೨ ಲಂಡನ್ ಒಲಿಂಪಿಕ್ಸ್ ನಲ್ಲಿ ಈ ಹೆಗ್ಗಳಿಕೆ ಸಾಧಿಸಿದ್ದರು
ವೃತ್ತಿಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ನನ್ನ ಕುಟುಂಬ, ತರಬೇತುದಾರರು, ತಂಡದ ಸದಸ್ಯರು ಹಾಗೂ ಅಭಿಮಾನಿಗಳು ನನಗೆ ಬೆಂಬಲ ನೀಡಿದ್ದಾರೆ. ಈಗ ನನಗೆ ೩೭ ವರ್ಷ ವಯಸ್ಸಾಗಿರುವ ಕಾರಣ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಇತರ ಕ್ರೀಡಾ ಪಟುಗಳೊಂದಿಗೆ ಆಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ದೇಶದ ಪರವಾಗಿ ಆಡಬೇಕೆಂದು ಭಾವಿಸಿದ್ದೆ. ಆದರೆ ಪ್ರಪಂಚದಾದ್ಯಂತ ಕೊರೊನಾ ಕಾರಣದಿಂದ ಎಲ್ಲ ಕ್ರೀಡಾ ಕೂಟಗಳು ಮುಂದೂಡಿರುವ ಕಾರಣ ಟೋಕಿಯೋ ಒಲಿಂಪಿಕ್ಸ್ ಕನಸು ಕರಗಿ ಹೋಗಿದೆ. ಇಷ್ಟು ಸಮು ದಿನ ನನ್ನನ್ನು ಪ್ರೀತಿಸಿದವರಿಗೆ ಧನ್ಯವಾದಗಳು ಎಂದು ಲಿನ್ ಡಾನ್ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.
ಡಬಲ್ ಒಲಿಂಪಿಕ್ ಚಿನ್ನದೊಂದಿಗೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಲಿನ್. ದೀರ್ಘಕಾಲದ ವಿಶ್ವದ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆಯಾಗಿದ್ದ ಲಿನ್ ಡಾನ್ ಅವರನ್ನು ಸೂಪರ್ ಡಾನ್ ಎಂದು ಹೆಸರುವಾಸಿಯಾಗಿದ್ದರು. ಅವರ ಪ್ರತಿಸ್ಪರ್ಧಿ ಮಲೇಷ್ಯಾ ತಾರೆ, ಗೆಳೆಯ ಲೀ ಚೊಂಗ್ ವೀ ನಿವೃತ್ತರಾದ ಒಂದು ವರ್ಷದ ನಂತರ, ಲಿನ್ ಅವರು ನಿವೃತ್ತಿ ಘೋಷಿಸಿದ್ದಾರೆ. ಲೀ ಚೊಂಗ್ ವೀ ಮತ್ತು ಲಿನ್ ಡಾನ್ ದಶಕಕ್ಕೂ ಹೆಚ್ಚು ಕಾಲ ಬ್ಯಾಡ್ಮಿಂಟನ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದರು.
ಯುಎನ್ಐ ಕೆವಿಆರ್ 1346