Tuesday, Sep 22 2020 | Time 07:57 Hrs(IST)
Karnataka Share

ಪಕ್ಷೇತರರನ್ನು ಕಲಾಪಕ್ಕೆ ಕರೆದುಕೊಂಡು ಬರುವುದೇ ಬಿಜೆಪಿ ಭಾರೀ ಸವಾಲು

ಬೆಂಗಳೂರು,ಜು 17(ಯುಎನ್ಐ) ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಬಿಜೆಪಿಗೆ ಪಕ್ಷೇತರ ಶಾಸಕರನ್ನು ರಕ್ಷಿಸಿಕೊಂಡು ಕಲಾಪಕ್ಕೆ ಕರೆದು ತರುವುದೇ ಬಹು ದೊಡ್ಡ ಸವಾಲಾಗಿದೆ.
ಮೈತ್ರಿ ಪಕ್ಷದ ವಿಶ್ವಾಸ ಮತ ನಿರ್ಣಯವನ್ನು ವಿಫಲಗೊಳಿಸಲು ಪಕ್ಷೇತರ ಶಾಸಕರನ್ನು ನಾಳಿನ ಕಲಾಪಕ್ಕೆ ಕರೆದು ತರಬೇಕಾಗಿದೆ. ಅಲ್ಲದೆ ಪಕ್ಷೇತರರಿಗೆ ಗಾಳ ಹಾಕಿರುವ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಶಾಸಕರನ್ನು ರಕ್ಷಿಸಿಕೊಳ್ಳುವುದೇ ಬಿಜೆಪಿಗೆ ಕಷ್ಟವೆಂಬ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಮುಂಬೈನಿಂದ ರಾಜೀನಾಮೆ ನೀಡಿರುವ ಶಾಸಕರನ್ನು ಹೈದರಾಬಾದ್ ಗೆ ಸ್ಥಳಾಂತರ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಜೊತೆಗೆ ಹೈದರಾಬಾದಿನಿಂದ ರಸ್ತೆಯ ಮೂಲಕ ಬೆಂಗಳೂರಿಗೆ ಕರೆತಂದು ರಮಡಾ ರೆಸಾರ್ಟ್ ನಲ್ಲಿ ವಾಸ್ತವ್ಯ ಕಲ್ಪಿಸುವ ಚಿಂತನೆ ಬಿಜೆಪಿ ನಾಯಕರದ್ದಾಗಿದೆ. ರೆಸಾರ್ಟ್ ಗೆ ಪಕ್ಷೇತರ ಶಾಸಕರು ಆಗಮಿಸಿದ ಬಳಿಕ ವಿಧಾನ ಸೌಧಕ್ಕೆ ಎಲ್ಲಾ ಶಾಸಕರ ಜೊತೆಯಲ್ಲಿ ಕಲಾಪಕ್ಕೆ ಒಟ್ಟಿಗೆ ತೆರಳಲು ಬಿಜೆಪಿ ನಾಯಕರು ಯೋಜನೆ ರೂಪಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಮಡಾ ರೆಸಾರ್ಟ್ ನಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಸಿದ ಬಿಎಸ್ ಯಡಿಯೂರಪ್ಪ ಶಾಸಕರಿಗೆ ಭರವಸೆ ನೀಡಿದ್ದಾರೆ. ವಾರಾಂತ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಅಲ್ಲಿಯವರೆಗೆ ಶಾಸಕರು ರೆಸಾರ್ಟ್ ವಾಸ್ತವ್ಯ ಹಾಗೂ ಆಪರೇಷನ್ ಕಮಲದ ಬಗ್ಗೆ ಎಲ್ಲೂ ಸುಳಿವು ನೀಡಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ನಾಳಿನ ಕಲಾಪದಲ್ಲಿ ಎಲ್ಲರೂ ಭಾಗವಹಿಸಬೇಕು. ಸದನದಲ್ಲಿ ಅನಾವಶ್ಯಕವಾಗಿ ಕೂಗಾಟ, ಗದ್ದಲ ಮಾಡುವುದು ಬೇಡ. ವಿಶ್ವಾಸ ಮತದ ಮೇಲೆ ಚರ್ಚೆ ನಡೆಯುವಾಗ ತಾಳ್ಮೆಯಿಂದ ವರ್ತಿಸಿ, ಮುಖ್ಯಮಂತ್ರಿ ಭಾಷಣದ ಮೇಲೆ ಬಿಜೆಪಿಯ ಯಡಿಯೂರಪ್ಪ ಹಾಗೂ ಜೆ.ಸಿ.ಮಾಧುಸ್ವಾಮಿ ಮಾತ್ರ ಮಾತನಾಡಿ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲು ಒತ್ತಾಯ ಮಾಡಲಾಗುವುದು. ಬೇರೆ ಶಾಸಕರು ಚರ್ಚೆಯಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ ಎಂದು ಯಡಿಯೂರಪ್ಪ ಶಾಸಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಪಕ್ಷದ ಶಾಸಕಾಂಗ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಭಾಗವಹಿಸಿದ್ದರು.
ಊಟದ ವೇಳೆ ಯಡಿಯೂರಪ್ಪ ಎಲ್ಲಾ ಶಾಸಕರ ಬಳಿ ತೆರಳಿ ಕೈ ಕುಲುಕಿ ನಗು ಮೊಗದಿಂದಲೇ ಮಾತನಾಡಿಸಿ ಶಾಸಕರನ್ನು ಭೋಜನಕ್ಕೆ ಆಹ್ವಾನಿಸಿ ತಾವು ಅವರೊಟ್ಟಿಗೆ ಭೋಜನ ಸವಿದಿದ್ದಾರೆ.
ಸರ್ಕಾರ ರಚಿಸುವ ಸಂತಷದಲ್ಲಿರುವ ಬಿಜೆಪಿ ಶಾಸಕರಿಗೆ ಬೇಸರವಾಗದಂತೆ ಇಂದು ಸಂಜೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ ಆರರಿಂದ ಒಂಭತ್ತರವರೆಗೂ ಕಡಬಗೆರೆಯ ಸ್ನೇಹಸಾಗರ ಸುಗಮ ಸಂಗೀತ ತಂಡದಿಂದ ರಸಸಂಜೆ ಕಾರ್ಯಕ್ರಮವನ್ನು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಆಯೋಜಿಸಿದ್ದಾರೆ. ಸಂಜೆಯ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿಯ ಎಲ್ಲಾ ಹಿರಿಯ ನಾಯಕರುಗಳು ಭಾಗಿಯಾಗುವ ಸಾಧ್ಯತೆ ಇದೆ.
ನಿನ್ನೆ ಸಂಜೆ ಸಹ ಭೋಜನದ ಬಳಿಕ ಹೋಟೇಲಿನ ಹೊರವಲಯದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಬಹುತೇಕ ಶಾಸಕರು ಭಜನೆಯಲ್ಲಿ ಪಾಲ್ಗೊಂಡಿದ್ದರು. ಚಂದ್ರ ಗ್ರಹಣದ ಹಿನ್ನಲೆಯಲ್ಲಿ ದೇವರ ನಾಮ ಹಾಗೂ ಭಕ್ತಿ ಗೀತೆಗಳ ಗಾಯನದಲ್ಲಿ ಶಾಸಕರು ಸಂಭ್ರಮಿಸಿದರು.
ಯುಎನ್ಐ ಎಸ್ಎಂಆರ್ ವಿಎನ್ 1755
More News
ರಾಜ್ಯದಲ್ಲಿ ಕೋವಿಡ್ ಚೇತರಿಕೆ ಹೆಚ್ಚಳ, ದಿನವೊಂದರಲ್ಲೇ 9925  ಮಂದಿ ಗುಣಮುಖ: ಸೋಂಕಿತರ ಸಂಖ್ಯೆ 5 26 ಲಕ್ಷಕ್ಕೇರಿಕೆ

ರಾಜ್ಯದಲ್ಲಿ ಕೋವಿಡ್ ಚೇತರಿಕೆ ಹೆಚ್ಚಳ, ದಿನವೊಂದರಲ್ಲೇ 9925 ಮಂದಿ ಗುಣಮುಖ: ಸೋಂಕಿತರ ಸಂಖ್ಯೆ 5 26 ಲಕ್ಷಕ್ಕೇರಿಕೆ

21 Sep 2020 | 8:30 PM

ಬೆಂಗಳೂರು, ಸೆ 21 (ಯುಎನ್ಐ) ರಾಜ್ಯದಲ್ಲಿ ಕೋವಿಡ್‌ ಚೇತರಿಕೆಯ ಪ್ರಮಾಣ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 9925 ಮಂದಿ ಗುಣಮುಖರಾಗಿದ್ದಾರೆ.

 Sharesee more..