Monday, Jan 27 2020 | Time 00:02 Hrs(IST)
National Share

ಪಕ್ಷೇತರ ಶಾಸಕರ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಸುಪ್ರೀಂ ನಕಾರ

ಪಕ್ಷೇತರ ಶಾಸಕರ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಸುಪ್ರೀಂ ನಕಾರ
ಪಕ್ಷೇತರ ಶಾಸಕರ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಸುಪ್ರೀಂ ನಕಾರ

ನವದೆಹಲಿ, ಜು 22 (ಯುಎನ್ಐ) ಪಕ್ಷೇತರ ಶಾಸಕರ ಅರ್ಜಿಯನ್ನು ಇಂದು ವಿಚಾರಣೆ ನಡೆಸಲು ಸಾಧ್ಯವಿಲ್ಲ, ನಾಳೆ ವಿಚಾರಣೆ ನಡೆಸುವ ಬಗ್ಗೆ ನೋಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ

ಇದರಿಂದ ಮೈತ್ರಿ ಸರ್ಕಾರ ತಾತ್ಕಾಲಿಕ ನಿರಾಳಗೊಂಡಿದೆ, ಆದರೆ ಸ್ಪೀಕರ್ ರಮೇಶ್ ಕುಮಾರ್ ಸೋಮವಾರವೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಪಕ್ಷೇತರ ಶಾಸಕರ ಪರವಾಗಿ ಮುಕುಲ್ ರೋಹ್ಟಗಿ ಹಾಜರಾಗಿ, ರಾಜ್ಯಪಾಲರ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ, ನಾಳೆ ಮೊದಲ ಪ್ರಕರಣವಾಗಿಯಾದರೂ ಇದನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ಎಂದು ಮನವಿ ಮಾಡಿದರು.

ಇಂದು ಕಲಾಪ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸುತ್ತೇವೆ, ಯಾರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ನಾಳೆ ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹೇಳಿತು.

2018ರಲ್ಲಿ ವಿಶ್ವಾಸಮತ ಯಾಚನೆಗೆ ಒಂದೇ ದಿನದ ಗಡುವನ್ನು ಸುಪ್ರೀಂಕೋರ್ಟ್ ನೀಡಿತ್ತು. ಅದು ಈಗಲೂ ಅನ್ವಯವಾಗಲಿ. ವಿಶ್ವಾಸಮತ ಯಾಚನೆ ಪದೇ ಪದೇ ವಿಳಂಬವಾಗುತ್ತಿದೆ ಎಂದು ರೋಹ್ಟಗಿ ಮನವಿ ಮಾಡಿದರು.

ಆದರೆ ಪೀಠ, ನಾಳೆ ನೋಡೋಣ ಎಂದು ಹೇಳಿದೆ.

ಸೋಮವಾರ ಸಂಜೆಯೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸಲು ನಿರ್ದೇಶನ ನೀಡಬೇಕು ಎಂದು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಯುಎನ್ಐ ಎಸ್‌ಎಂಆರ್ ಎಎಚ್ 1125

More News
ಗಣರಾಜ್ಯೋತ್ಸವ ಶುಭಾಷಯ ಕೋರಿದ ಮಾಲ್ಡೀವ್ಸ್‌ ಅಧ್ಯಕ್ಷ, ಲಂಕಾ ಪ್ರಧಾನಿಗೆ ಮೋದಿ ಕೃತಜ್ಞತೆ

ಗಣರಾಜ್ಯೋತ್ಸವ ಶುಭಾಷಯ ಕೋರಿದ ಮಾಲ್ಡೀವ್ಸ್‌ ಅಧ್ಯಕ್ಷ, ಲಂಕಾ ಪ್ರಧಾನಿಗೆ ಮೋದಿ ಕೃತಜ್ಞತೆ

26 Jan 2020 | 7:08 PM

ನವದೆಹಲಿ, ಜ.26: (ಯುಎನ್ಐ) ದೇಶದ 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶುಭಾಶಯ ಕೋರಿದ ಮಾಲ್ಡೀವಿಯನ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸಾಲಿಹ್ ಮತ್ತು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ.

 Sharesee more..
ರಾಷ್ಟ್ರಪತಿ ಧ್ವಜಾರೋಹಣ, ಸೇನಾಶಕ್ತಿ ಬೃಹತ್ ಅನಾವರಣ

ರಾಷ್ಟ್ರಪತಿ ಧ್ವಜಾರೋಹಣ, ಸೇನಾಶಕ್ತಿ ಬೃಹತ್ ಅನಾವರಣ

26 Jan 2020 | 6:46 PM

ನವದೆಹಲಿ, ಜನವರಿ 26 (ಯುಎನ್ಐ) ಗಣರಾಜ್ಯ ದಿನದ ಅಂಗವಾಗಿ ರಾಷ್ಟ್ರರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಧ್ವಜಾರೋಹಣ ನೆರವೇರಿಸಿದರು.

 Sharesee more..
ಗಣರಾಜ್ಯೋತ್ಸವ: ದೇಶವಾಸಿಗಳಿಗೆ ಉಪರಾಷ್ಟ್ರಪತಿ- ಪ್ರಧಾನಿ ಶುಭಾಶಯ

ಗಣರಾಜ್ಯೋತ್ಸವ: ದೇಶವಾಸಿಗಳಿಗೆ ಉಪರಾಷ್ಟ್ರಪತಿ- ಪ್ರಧಾನಿ ಶುಭಾಶಯ

26 Jan 2020 | 6:28 PM

ನವದೆಹಲಿ, ಜನವರಿ 26 (ಯುಎನ್ಐ) 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಉಪರಾಷ್ಟ್ರ ಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಹೇಳಿದ್ದಾರೆ.

 Sharesee more..