Sunday, Mar 29 2020 | Time 00:24 Hrs(IST)
National Share

ಪಕ್ಷ ಸಂಸ್ಥಾಪನಾ ದಿನ : ನಾಳೆ ದೇಶಾದ್ಯಂತ ಕಾಂಗ್ರೆಸ್ ಫ್ಲ್ಯಾಗ್ ಧ್ವಜ ಮೆರವಣಿಗೆ

ನವದೆಹಲಿ, ಡಿ 27 (ಯುಎನ್‍ಐ) ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ಕಾಂಗ್ರೆಸ್ ತನ್ನ ಸಂಸ್ಥಾಪನಾ ದಿನದಂದು ಶನಿವಾರ ದೇಶಾದ್ಯಂತ ಫ್ಲ್ಯಾಗ್ ಮಾರ್ಚ್ ಹಮ್ಮಿಕೊಂಡಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಂನ ಗುವಾಹಟಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲಖನೌದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ 134 ನೇ ಸಂಸ್ಥಾಪನಾ ದಿನದಂದು 0930 ಗಂಟೆಗೆ ಪಕ್ಷದ ಧ್ವಜಾರೋಹಣ ನೆರವೇರಿಸಲಿದ್ದಾರೆ.
"ಆಯಾ ರಾಜ್ಯ ರಾಜಧಾನಿಗಳಲ್ಲಿ ವಾಡಿಕೆಯಂತೆ ಧ್ವಜಾರೋಹಣ ಮಾಡುವುದರ ಜೊತೆಗೆ, ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ನಂತರ 'ಸಂವಿಧಾನವನ್ನು ಉಳಿಸಿ - ಭಾರತವನ್ನು ಉಳಿಸಿ' ಎಂಬ ಸಂದೇಶವನ್ನು ಹೊಂದಿರುವ ಧ್ವಜ ಮೆರವಣಿಗೆಗಳನ್ನು ಕೈಗೊಳ್ಳಲಿದ್ದಾರೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂವಿಧಾನದ ಮುನ್ನುಡಿಯನ್ನು ಆಯಾ ಭಾಷೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಓದುತ್ತಾರೆ ಎಂದರು.
ವಿವಾದಾತ್ಮಕ ಸಿಎಎ-ಎನ್‌ಆರ್‌ಸಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದ ಪ್ರಸ್ತುತ ವಾತಾವರಣವನ್ನು ತಿಳಿಸಿದ ವೇಣುಗೋಪಾಲ್, ಭಾರತದ ಸಂವಿಧಾನಕ್ಕೆ ಸವಾಲು ಎದುರಾದಾಗ ಮತ್ತು ಐತಿಹಾಸಿಕ ಮಧ್ಯೆ ದೇಶವನ್ನು ತನ್ನ ಪ್ರಗತಿಯ ಹಾದಿಯಿಂದ ಹಳಿ ತಪ್ಪಿಸುವ ಯಾವುದೇ ಪ್ರಯತ್ನಗಳು ನಡೆದಾಗ ಕಾಂಗ್ರೆಸ್ ಪ್ರತಿಯೊಂದು ಸಂದರ್ಭದಲ್ಲೂ ಪ್ರತಿಭಟಿಸುತ್ತದೆ ಎಂದು ಹೇಳಿದರು.

ಕಳೆದ ಕೆಲವು ದಿನಗಳಲ್ಲಿ ಎನ್‌ಆರ್‌ಸಿ / ಸಿಎಎ ಅನುಷ್ಠಾನಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ದೇಶಾದ್ಯಂತ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಸಂಸ್ಥೆಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಅನೇಕ ಸ್ಥಳಗಳಲ್ಲಿ ಪೊಲೀಸರು ಗುಂಡು ಹಾರಿಸುವುದರಿಂದ ಸಾವಿನ ಪ್ರಕರಣಗಳಾಗಿವೆ ಎಂದು ಅವರು ಆರೋಪಿಸಿದ್ದಾರೆ.
"ಪ್ರಧಾನಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ವಿವಿಧ ಸಂದರ್ಭಗಳಲ್ಲಿ ವಿರೋಧಾತ್ಮಕ ಹೇಳಿಕೆಗಳನ್ನು ನೀಡುವುದರೊಂದಿಗೆ ಸರ್ಕಾರವು ಈ ವಿಷಯಗಳ ಬಗ್ಗೆ ತನ್ನನ್ನು ತಾನೇ ಬಂಧಿಸಿಕೊಂಡಿದೆ ಎಂದು ಕೆ.ಸಿ. ವೇಣುಗೋಪಾಲ್ ಟೀಕಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1655
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..