Friday, Feb 28 2020 | Time 08:42 Hrs(IST)
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಪಠ್ಯಕ್ರಮದಲ್ಲಿ ಸಾವರ್ಕರ್ ಜೀವನಗಾಥೆ ಅಳವಡಿಸಿ: ಉಪ ರಾಷ್ಟ್ರಪತಿ ಸಲಹೆ

ನವದೆಹಲಿ, ಜ 17 (ಯುಎನ್‍ಐ) ವೀರ ಸಾವರ್ಕರ್ ಸೇರಿದಂತೆ ದೇಶದ ವಿವಿಧ ಭಾಗಗಳ ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅಂಡಮಾನ್‌ನಲ್ಲಿನ ಸೆಲ್ಯುಲಾರ್ ಜೈಲು ಸೇರಿದ್ದ ಐತಿಹಾಸಿಕ ಪಾತ್ರ ವೀರ ಸಾವರ್ಕರ್ ಇತಿಹಾಸ ಪಠ್ಯಪುಸ್ತಕಗಳ ಭಾಗವಾಗಬೇಕು ಎಂದು ಪೋರ್ಟ್ ಬ್ಲೇರ್ ಮುನ್ಸಿಪಲ್ ಕೌನ್ಸಿಲ್ (ಪಿಬಿಎಂಸಿ) ಅವರ ಗೌರವಾರ್ಥವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ಸೆಲ್ಯುಲಾರ್ ಜೈಲಿಗೆ ಭೇಟಿ ನೀಡುವಂತೆ ದೇಶಾದ್ಯಂತದ ಎಲ್ಲ ಸಂಸತ್ ಸದಸ್ಯರು, ಶಾಸಕರು ಮತ್ತು ಸಂಸದರಿಗೆ ಅವರು ಸಲಹೆ ನೀಡಿದ್ದಾರೆ.
ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ವೆಕಯ್ಯ ನಾಯ್ಡು ಇದನ್ನು "ಪವಿತ್ರ ದೇವಾಲಯಕ್ಕೆ ತೀರ್ಥಯಾತ್ರೆ" ಎಂದು ಬಣ್ಣಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಜನರಲ್ಲಿ ವಿಭಜಕ ಪ್ರವೃತ್ತಿಯನ್ನು ಉಂಟುಮಾಡುವ ಯತ್ನಗಳನ್ನು ಪ್ರಸ್ತಾಪಿಸಿದ ಅವರು, ಪ್ರತಿಯೊಬ್ಬರೂ ಏಕತೆಯಿಂದ ಒಗ್ಗೂಡಬೇಕಾದ ಸಮಯವಾಗಿದೆ ಎಂದಿರುವ ನಾಯ್ಡು, ಸ್ವಾತಂತ್ರ್ಯವನ್ನು ಅತ್ಯಂತ ಕಷ್ಟದಿಂದ ಗಳಿಸಲಾಗಿದೆ. ಎಲ್ಲಾ ನಾಗರಿಕರು ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯಿಂದ ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಅಸಂಖ್ಯಾತ ತ್ಯಾಗಗಳಿಂದ ಸ್ಫೂರ್ತಿ ಪಡೆಯಬೇಕು ಈ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಪೋರ್ಟ್ ಬ್ಲೇರ್ ನ ವಿವಿಧೆಡೆ ಹಲವುಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಯುಎನ್‍ಐ ಎಸ್‍ಎ ವಿಎನ್ 1851