Monday, Jul 22 2019 | Time 07:30 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ಪಶ್ಚಿಮ ಸಿರಿಯಾದಲ್ಲಿ ಭಯೋತ್ಪಾದಕ ದಾಳಿ: ಇಬ್ಬರು ನಾಗರಿಕರು ಸಾವು

ಮಾಸ್ಕೋ, ಜುಲೈ 10 (ಸ್ಪುಟ್ನಿಕ್) ಪಶ್ಚಿಮ ಹಮಾ ಪ್ರಾಂತ್ಯದಲ್ಲಿರುವ ಸಿರಿಯನ್ ನಗರವಾದ ಅಸ್ ಸುಕೈಲಾಬಿಯಾ ಮೇಲೆ ನುಸ್ರಾ ಫ್ರಂಟ್ (ರಷ್ಯಾದಲ್ಲಿ ನಿಷೇಧಿತ ಭಯೋತ್ಪಾದಕ ಗುಂಪು) ಭಯೋತ್ಪಾದಕರು ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಸನಾ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.
ಈ ಪ್ರದೇಶದಲ್ಲಿ ನೆಲೆಗೊಂಡಿರುವ ಸರ್ಕಾರಿ ಸೇನಾ ಘಟಕವು ಹಲವಾರು ರಾಕೆಟ್ ಉಡಾವಣಾ ಪ್ಯಾಡ್ ಮತ್ತು ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದೆ ಎಂದು ವರದಿ ತಿಳಿಸಿದೆ.
ಹಮಾ ಪ್ರಾಂತ್ಯದ ಉತ್ತರದ ಎರಡು ಹಳ್ಳಿಗಳ ಮೇಲೆ ಇದೇ ರೀತಿಯ ಶೆಲ್ ದಾಳಿ ನಡೆಸಿದ ಬಳಿಕ ಈ ದಾಳಿ ಸಂಭವಿಸಿದೆ.
ಹಮಾ ಪ್ರಾಂತ್ಯದ ಉತ್ತರದ ಪ್ರದೇಶಗಳು ಈ ಬಂಡಾಯಕೋರರ ವಲಯಗಳ ವ್ಯಾಪ್ತಿಗೆ ಬಂದರೂ, ನೆರೆಯ ಇಡ್ಲಿಬ್ ಪ್ರಾಂತ್ಯದ ಭಯೋತ್ಪಾದಕರು ವ್ಯವಸ್ಥಿತವಾಗಿ ಒಪ್ಪಂದವನ್ನು ಉಲ್ಲಂಘಿಸಿ ಹಮಾದ ಮೇಲೆ ದಾಳಿ ಮಾಡಿದ್ದಾರೆ.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2213