Monday, Sep 21 2020 | Time 12:34 Hrs(IST)
 • ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆ
 • ಕೊರೊನಾ ಆತಂಕದ ಮಧ್ಯೆ ವಿಧಾನಮಂಡಲ ಅಧಿವೇಶನ4 ಆರಂಭ: ಇತ್ತೀಚೆಗೆ ಮೃತರಾದ ಗಣ್ಯರಿಗೆ ಸಂತಾಪ
 • ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು: ಮುಂದುವರೆದ ಶೋಧ ಕಾರ್ಯ
 • ಸಚಿವ ಸಂಪುಟ ವಿಸ್ತರಣೆಗಾಗಿ ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ: ಯಡಿಯೂರಪ್ಪ
 • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
 • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
 • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
 • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
 • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
 • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Karnataka Share

ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ: ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ: ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ: ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ

ಬೆಂಗಳೂರು,ಆ 09(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಾಗಿ ಇಂದು 17 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದರು.ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೊಂದಿಗೆ ಸಂವಾ ನಡೆಸಿದರು.ಹಾಸನ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘವೊಂದರ ಕಾರ್ಯದರ್ಶಿಯಾಗಿರುವ ಬಸವೇಗೌಡ ಅವರು ಪ್ರಧಾನಿ ಅವರ ಜೊತೆ ಸಂವಾದ ನಡೆಸಿದರು. ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಯಾವ್ಯಾವ ನೆರವು ನೀಡಲಾಗುತ್ತಿದೆ,ಎಷ್ಟು ರೈತರಿಗೆ ನೆರವು ಸಿಗುತ್ತಿದೆ,ಹಣಕಾಸು ನೆರವಿನ ವ್ಯವಸ್ಥೆ ಹೇಗಿದೆ ಎಂದು ಪ್ರಧಾನಿ ಮೋದಿ ಅವರು ಸಂಘದ ಸದಸ್ಯರನ್ನು ಪ್ರಶ್ನಿಸಿದರು.

ಪ್ರಧಾನಿ ಅವರ ಪ್ರಶ್ನೆಗೆ ಉತ್ತರಿಸಿದ ಸಂಘದ ಕಾರ್ಯದರ್ಶಿ ಬಸವೇಗೌಡ ,ಕಳೆದ 40 ವರ್ಷದಿಂದ ಕೃಷಿ ಪತ್ತಿನ ಸಹಕಾರ ಸಂಘವನ್ನು ಆರಂಭಿಸಲಾಗಿದ್ದು, ವಾರ್ಷಿಕ ವಹಿವಾಟು 50 ಕೋಟಿ ರೂ ನಡೆಸಲಾಗುತ್ತಿದೆ.ಸಹಕಾರ ಸಂಘದಿಂದ 22 ಗ್ರಾಮಗಳ 2,300 ರೈತರಿಗೆ ಆರ್ಥಿಕ ಹಾಗೂ ಕೃಷಿಗೆ ನೆರವಾಗುತ್ತಿದ್ದೇವೆ. ಇಲ್ಲಿ ಮೆಕ್ಕೆ ಜೋಳ, ಶುಂಟಿ,ಆಲೂಗಡ್ಡೆ,ಅಡಿಕೆ ಮೊದಲಾದ ಬೆಳೆಗಳನ್ನ ಬೆಳೆಯಲಾಗತ್ತಿದೆ ಎಂದು ಮಾಹಿತಿ ನೀಡಿದರು.ಸಂಘ ಪ್ರಾರಂಭಿಸಲು ಕಾರಣವೇನೆಂಬ ಪ್ರಶ್ನೆಗೆ ಉತ್ತರಿಸಿದ ಬಸವೇಗೌಡ,40 ವರ್ಷದ ಹಿಂದೆ ರೈತರ ಕೃಷಿ ಕಾರ್ಯಗಳಿಗೆ,ಉಪಕರಣ ಖರೀದಿಗೆ,ವ್ಯಾಪಾರ ವಹಿವಾಟು ನಡೆಸಲು ಸೂಕ್ತ ಸಾಲ ಸೌಲಭ್ಯ ದೊರಕುತ್ತಿರಲಿಲ್ಲ.ಹೀಗಾಗಿ ತಾವು ಸಂಘ ಸ್ಥಾಪಿಸಿಕೊಂಡು ರೈತರಿಗೆ ಸಾಲದ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದ್ದೇವೆಂದು ತಿಳಿಸಿದರು.

ನಿಮ್ಮ ಸಂಘದ ಕಾರ್ಯಚಟಿಕೆ ಏನೇನು ಹಮ್ಮಿಕೊಂಡಿದ್ದೀರಿ ಎಂಬ ಪ್ರಧಾನಿ ಅವರ ಪ್ರಶ್ನೆಗೆ ಉತ್ತರಿಸಿದ ಬಸವೇಗೌಡ,ಕ್ಯಾತನಹಳ್ಳಿ ಗ್ರಾಮದಲ್ಲಿ 1,200 ಮೆಟ್ರಿಕ್ ಟನ್ ದಾಸ್ತಾನು ಮಾಡುವ ಗೋದಾಮನ್ನು ಸ್ಥಾಪಿಸುವ ಯೋಜನೆ ಹೊಂದಿದ್ದೇವೆ.ಕಟಾವು ಸಂದರ್ಭದಲ್ಲಿ ರೈತರ ಬೆಳೆಗಳಿಗೆ ಕೆಲವೊಮ್ಮೆ ಸೂಕ್ತ ಬೆಲೆ ಸಿಗುವುದಿಲ್ಲ.ನಾವು ಅವರ ಬೆಳೆಯನ್ನು ದಾಸ್ತಾನು ಮಾಡಿಕೊಂಡು ಬೆಳೆಯ ಮೇಲೆ ರೈತರಿಗೆ ಸಾಲ ಕೂಡ ನೀಡುತ್ತೇವೆ.ಸೂಕ್ತ ಬೆಲೆ ಸಿಕ್ಕರೆ ರೈತರು ಆ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಈ ಗೋದಾಮು ಸ್ಥಾಪನೆಗೆ 40 ಲಕ್ಷ ರೂ ವೆಚ್ಚವಾಗುವ ನಿರೀಕ್ಷೆ ಇದೆ. ನಬಾರ್ಡ್​ನಿಂದ 30 ಲಕ್ಷ ರೂ ಸಾಲ ಪಡೆಯಲಿದ್ದೇವೆ.3 ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುತ್ತದೆ.ಇದರಿಂ ದ 2-3 ಸಾವಿರ ರೈತರಿಗೆ ಲಾಭವಾಗುತ್ತದೆ ಎಂದು ಬಸವೇಗೌಡರು ವಿವರಿಸಿದರು.

ಕೃಷಿ ಪತ್ತಿನ ಸಹಕಾರ ಸಂಘವನ್ನು ಇನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಮೂಲಕ ರೈತರ ಆರ್ಥಿಕ ಮತ್ತು ಕೃಷಿಗೆ ಸಹಕಾರಿಯಾಗಿ.ಜೊತೆಗೆ ಅವರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡುವತ್ತ ಸಂಘದ ನಿರಂತರ ಪ್ರಯತ್ನ ನಡೆಸಲಿ ಎಂದು ಪ್ರಧಾನಿ ಮೋದಿ ಅವರು ಹಾಸನದ ಈ ರೈತರಿಗೆ ಶುಭ ಹಾರೈಸಿದರು.

ಯುಎನ್ಐ ಎಸ್ಎಂಆರ್ ವಿಎನ್ 1315