Wednesday, Feb 26 2020 | Time 09:42 Hrs(IST)
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಪಾಕ್ ನಲ್ಲಿ ಸಿಖ್ ಯುವಕನ ಹತ್ಯೆ; ಭಾರತದ ಖಂಡನೆ

ನವದೆಹಲಿ, ಜ 5 (ಯುಎನ್ಐ) ಪಾಕಿಸ್ತಾನದ ಪೇಶಾವರದಲ್ಲಿ ಸಿಖ್ ಸಮುದಾಯದ ಸದಸ್ಯರ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ವಿದೇಶಾಂಗ ಸಚಿವಾಲಯ, ಭಾರತ ಸಿಖ್ ಸಮುದಾಯದ ಸದಸ್ಯರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ, ಪವಿತ್ರ ಗುರುದ್ವಾರವಾದ ನಂಕನ ಸಾಹಿಬ್ ನಲ್ಲಿನ ಶ್ರೀ ಜನಮ್ ಸಂಸ್ಥಾನಕ್ಕೆ ಹಾನಿಯುಂಟು ಮಾಡಿದ್ದನ್ನು ವಿರೋಧಿಸುತ್ತದೆ. ಸಿಖ್ ಸಮುದಾಯದ ಮೇಲಿನ ಅಪರಾಧ, ಬಲವಂತದ ಮತಾಂತರ ಹಾಗೂ ಸಿಖ್ ಬಾಲಕಿ ಜಗ್ಜೀತ್ ಕೌರ್ ವಿವಾಹವನ್ನು ಕೂಡ ಸಚಿವಾಲಯ ತೀವ್ರವಾಗಿ ಖಂಡಿಸುತ್ತದೆ ಎಂದಿದೆ.
ಪಾಕಿಸ್ತಾನದ ಈ ವಿಷಯದಲ್ಲಿ ನಾಜೂಕುತನ ತೋರುವುದನ್ನು ಬಿಟ್ಟು, ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನ ಇತರ ರಾಷ್ಟ್ರಗಳಿಗೆ ಧರ್ಮದ ಪಾಠ ಹೇಳುವ ಬದಲು ತಮ್ಮ ರಾಷ್ಟ್ರದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿರಬೇಕು ಎಂದು ಸಲಹೆ ನೀಡಿದೆ.
ಮಾಧ್ಯಮಗಳ ವರದಿ ಪ್ರಕಾರ 25 ವರ್ಷದ ಸಿಖ್ ವ್ಯಕ್ತಿ ರವೀಂದ್ರ ಸಿಂಗ್ ಎಂಬಾತನನ್ನು ಪಾಕಿಸ್ತಾನದ ಪೇಶಾವರದಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಇನ್ನೂ ಪತ್ತೆ ಮಾಡಲಾಗಿಲ್ಲ.
ಇದಕ್ಕೂ ಮುನ್ನ ಸಿಖ್ ಯಾತ್ರಿಕರ ಮೇಲೆ ಅಲ್ಲಿನ ನಿವಾಸಿಗಳು ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗಿದೆ. ಈ ಯಾತ್ರಿಕರು ಗುರುನಾನಕ್ ದೇವ್ ಅವರ ಜನ್ಮಸ್ಥಳವಾದ ನಂಕನ ಸಾಹಿಬ್ ಗುರುದ್ವಾರಕ್ಕೆ ಆಗಮಿಸಿದ್ದರು.
ಯುಎನ್ಐ ಎಸ್ಎಚ್ 2004