Friday, Dec 6 2019 | Time 02:03 Hrs(IST)
Sports Share

ಪಿಂಕ್ ಬಾಲ್ ಬಗ್ಗೆ ಬಾಂಗ್ಲಾ ಆಟಗಾರರಿಗೆ ಕೋಚ್ ವೆಟೋರಿ ಪಾಠ

ನವದೆಹಲಿ, ನ 20 (ಯುಎನ್‌ಐ) ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಲಾಗುವ ಪಿಂಕ್‌ ಬಾಲ್‌ ಬೆಳಗ್ಗಿನ ಸಮಯದಲ್ಲಿ ಹೆಚ್ಚೇನು ವರ್ತಿಸುವುದಿಲ್ಲ. ಆದರೆ, ಇಲ್ಲಿ ಸಂಜೆ 4ರ ಹೊತ್ತಿಗಾಗಲೇ ಸೂರ್ಯಾಸ್ಥವಾಗಿಬಿಡುತ್ತದೆ. ಬಳಿಕ ಪಿಂಕ್‌ ಬಾಲ್‌ ಹೆಚ್ಚು ಪ್ರಭಾವಶಾಲಿ ಆಗಬಲ್ಲದು ಎಂದು ಬಾಂಗ್ಲಾ ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಡೇನಿಯೆಲ್‌ ವೆಟೋರಿ ಅಭಿಪ್ರಾಯ ಪಟ್ಟಿದ್ದಾರೆ.
ಪಿಂಕ್‌ ಬಾಲ್‌ ಹೊನಲು ಬೆಳಕಿನಲ್ಲಿ ಹೆಚ್ಚು ಸ್ವಿಂಗ್‌ ಪಡೆಯುತ್ತದೆ. ಹೀಗಾಗಿ ಬಾಂಗ್ಲಾ ತನ್ನ ಬತ್ತಳಿಕೆಯಲ್ಲಿರುವ ನಾಲ್ವರು ವೇಗಿಗಳನ್ನೂ ಡೇ-ನೈಟ್‌ ಟೆಸ್ಟ್‌ನಲ್ಲಿ ಆಡಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವ ರಣತಂತ್ರ ಹೆಣೆಯುವ ಸಾದ್ಯತೆ ಇದೆ.
"ತಂಡದಲ್ಲಿರುವ 4 ಜನ ವೇಗಿಗಳಿಗಿಗೆ ಈ ಪಂದ್ಯಲ್ಲಿ ಆಡುವ ಉತ್ಸುಕತೆ ಹೆಚ್ಚಿದೆ. ಸಾಮಾನ್ಯವಾಗಿ ಅವರಲ್ಲಿ ಇಷ್ಟು ಉತ್ಸುಕತೆ ಇರುವುದಿಲ್ಲ. ತಂಡದ ಮಟ್ಟಿಗೆ ಇದೊಂದು ಒಳ್ಳೆಯ ಸಂಗತಿ. ಜೊತೆಗೆ ಎಸ್‌ಜಿ ಪಿಂಕ್‌ ಬಾಲ್‌ ಕೂಡ ವಿಭಿನ್ನ. ಒಟ್ಟಾರೆ ತಂಡದ ಎಲ್ಲಾ ಆಟಗಾರರು ಈ ಪಂದ್ಯವನ್ನಾಡಲು ಎದುರು ನೋಡುತ್ತಿದ್ದಾರೆ," ಎಂದು ವೆಟೋರಿ ಹೇಳಿದ್ದಾರೆ.
"ಸ್ಪಿನ್‌ ಬೌಲರ್‌ಗಳು ಕೂಡ ಇಲ್ಲಿ ಪ್ರಭಾವ ಬೀರಬಲ್ಲರು ಎಂಬುದು ನನ್ನ ಬಲವಾದ ಅಭಿಪ್ರಾಯ. ಮೊದಲ ಎರಡು ಇನಿಂಗ್ಸ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ಪ್ರಮುಖ. ಕಳೆದ ಪಂದ್ಯದಲ್ಲಿ ಎರಡೂ ತಂಡಗಳು ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಿದೆ. ಪಿಚ್‌ ಹೇಗೇ ಇದ್ದರೂ ಟೆಸ್ಟ್‌ ಪಂದ್ಯದಲ್ಲಿ ಹಲವು ಬಾರಿ ಸ್ಪಿನ್ನರ್‌ಗಳ ಅಗತ್ಯವಿರುತ್ತದೆ," ಎಂದಿದ್ದಾರೆ.
ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್‌ ಮತ್ತು 130 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದೀಗ 2ನೇ ಪಂದ್ಯ ನ.22ರಂದು ಆರಂಭವಾಗಲಿದೆ. ಬಾಂಗ್ಲಾದೇಶ ತಂಡದ ಪ್ರಧಾನಮಂತ್ರಿ ಶೇಕ್‌ ಹಸೀನ್‌ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಶುಕ್ರವಾರ ಬೆಲ್‌ ಬಾರಿಸುವ ಮೂಲಕ ಡೇ-ನೈಟ್‌ ಟೆಸ್ಟ್‌ಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಪಂದ್ಯ ಶುರುವಾಗಿ, ರಾತ್ರಿ 8ಕ್ಕೆ ಅಂತ್ಯಗೊಳ್ಳಲಿದೆ.
ಯುಎನ್‌ಐ ಆರ್ ಕೆ 2211
More News

ಆರ್ಥರ್ ಶ್ರೀಲಂಕಾ ತಂಡದ ಕೋಚ್

05 Dec 2019 | 10:02 PM

 Sharesee more..

ಎಸ್ಎ ಜಿ: ಕರ್ನಾಟಕದ ಲಿಖಿತ್ ಗೆ ಬಂಗಾರ

05 Dec 2019 | 9:42 PM

 Sharesee more..

ಸೂಪರ್ ಡಿವಿಜನ್: ಡ್ರೀಮ್ ಯುನೈಟೆಡ್ ಎಫ್ ಸಿಗೆ ಜಯ

05 Dec 2019 | 9:40 PM

 Sharesee more..

ದಿಗ್ಗಜ ಬೌಲರ್ ಬಾಬ್ ವಿಲ್ಲೀಸ್ ನಿಧನ

05 Dec 2019 | 8:05 PM

 Sharesee more..