Monday, Jun 1 2020 | Time 01:29 Hrs(IST)
International Share

ಪಾಕ್ ವಿಮಾನ ಅಪಘಾತ: ಸಾವಿನ ಸಂಖ್ಯೆ 97 ಏರಿಕೆ

ಇಸ್ಲಾಮಾಬಾದ್, ಮೇ 23 (ಯುಎಎನ್ಐ ) ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 97 ಕ್ಕೆ ಏರಿಕೆಯಾಗಿದೆ ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಇಲಾಖೆಯ ವಕ್ತಾರ ಮೀರನ್ ಯೂಸುಫ್ ಶನಿವಾರ ಖಚಿತಪಡಿಸಿದ್ದಾರೆ.
ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ವಿಮಾನ ಇಳಿಯುವಾಗ ಅದು ವಸತಿ ಸಮುಚ್ಚಯದಲ್ಲಿ ಅಪ್ಪಳಿಸಿ ಅಪಫಾತಕ್ಕೀಡಾಗಿತ್ತು.
ಆಗ ವಿಮಾನದಲ್ಲಿ 99 ಜನರಿದ್ದರು ಎಂದು ಹೇಳಲಾಗಿದೆ ಆದರೆ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕಿದ್ದಾರೆ. ಎಂದು ಯೂಸುಫ್ ತನ್ನ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಈವರೆಗೆ 19 ಶವಗಳನ್ನು ಗುರುತಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಪಘಾತದ ಸ್ಥಳದಲ್ಲಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
ಯುಎನ್ಐ ಕೆಎಸ್ಆರ್ 0827
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..