Friday, Feb 28 2020 | Time 07:18 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ದಾಳಿಗೆ ಬಿಜೆಪಿ ಕಿಡಿ : ಸಿಎಎ ಜಾರಿಗೆ ಮೀನಾಕ್ಷಿ ಲೇಖಿ ಸಮರ್ಥನೆ

ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ದಾಳಿಗೆ ಬಿಜೆಪಿ ಕಿಡಿ : ಸಿಎಎ ಜಾರಿಗೆ ಮೀನಾಕ್ಷಿ ಲೇಖಿ ಸಮರ್ಥನೆ
ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ದಾಳಿಗೆ ಬಿಜೆಪಿ ಕಿಡಿ : ಸಿಎಎ ಜಾರಿಗೆ ಮೀನಾಕ್ಷಿ ಲೇಖಿ ಸಮರ್ಥನೆ

ನವದೆಹಲಿ, ಜ 04 (ಯುಎನ್‍ಐ) ಪಾಕಿಸ್ತಾನದಲ್ಲಿ ಸಿಖ್ಖರ ಮೇಲಿನ ದಾಳಿಯನ್ನು ಬಿಜೆಪಿ ಶನಿವಾರ ಖಂಡಿಸಿದ್ದು, ನಂಕಾನಾ ಸಾಹಿಬ್ ಗುರುದ್ವಾರದಲ್ಲಿ ನಡೆದ ಪ್ರಸಂಗವು ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ "ಸರಿ" ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದೆಈ ಕುರಿತು ಸುದ್ದಿಗಾರರೊಡನೆ ಮಾತನಾಡಿದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, "... ಪಾಕಿಸ್ತಾನದಲ್ಲಿ ನಡೆದಿರುವ ಸಿಖ್ಖರ ಮೇಲಿನ ಹಲ್ಲೆಯು ಸಿಎಎಯಂತಹ ಕಾಯಿದೆಯ ಅಗತ್ಯವನ್ನು ಸಮರ್ಥಿಸುತ್ತದೆ. ಹಾಗೂ ಕಾನೂನಿನ ರ ತಕ್ಷಣದ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುತ್ತದೆ" ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಮಮತಾ ಬ್ಯಾನರ್ಜಿ, ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಮೌನವಾಗಿರುವುದೇಕೆ ಎಂದು ಪ್ರಶ್ನಸಿದ ಮೀನಾಕ್ಷಿ ಲೇಖಿ,ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕಿರುಕುಳ ನೀಡಲಾಗುತ್ತಿರುವುದರಿಂದ ನಂಕಾನಾ ಸಾಹಿಬ್‌ನಲ್ಲಿ ಏನಾಯಿತು ಎಂಬುದು ಟ್ರೈಲರ್‌ನಂತಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿಯ ಮತ್ತೋರ್ವ ನಾಯಕ ತರುಣ್ ಚುಂಗ್, ಪಾಕ್‍ನಲ್ಲಿ ಸಿಖ್ ಸಮುದಾಯ ಮೇಲಿನ ಹಲ್ಲೆಯ ಬಗ್ಗೆ ಎಡಪಂಥೀಯ ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೌನವನ್ನು ಪ್ರಶ್ನಿಸಿದ್ದಾರೆ.ಪಿಣರಾಯಿ ಅವರ ನಾಯಕತ್ವದಲ್ಲಿ ರಾಜ್ಯ ವಿಧಾನಸಭೆ ಇತ್ತೀಚೆಗೆ ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.ಯುಎನ್‍ಐ ಎಸ್‍ಎ ವಿಎನ್ 1707