Tuesday, Nov 12 2019 | Time 04:43 Hrs(IST)
Special Share

ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ ಸಮಾವೇಶ ಬಹಿಷ್ಕರಿಸಿದ ಜಾಗತಿಕ ಮಾಧ್ಯಮ

ಲಂಡನ್, ಜುಲೈ 12( ಯುಎನ್ಐ) ಲಂಡನ್ ನಲ್ಲಿ ನಡೆಯುತ್ತಿರುವ “ಮಾಧ್ಯಮ ಸ್ವಾತಂತ್ರ್ಯ ರಕ್ಷಣೆ ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರೊಂದಿಗೆ ಸಭೆಯನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಬಹಿಷ್ಕರಿಸಿದ್ದವು ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಪ್ರತಿಭಟಿಸಿ ಪತ್ರಕರ್ತರು ಸಮಾವೇಶ ಬಹಿಷ್ಕರಿಸಿದ ಕಾರಣ ಶಾ ಮೆಹಮೂದ್ ಖುರೇಷಿ ಅವರನ್ನು ಸಭಾಂಗಣದಲ್ಲಿ ಖಾಲಿಯಾಗಿದ್ದ ಆಸನಗಳು ಅವರನ್ನು ಸ್ವಾಗತಿಸಿದವು.
ಲಂಡನ್ ನಲ್ಲಿ ಅಧಿಕೃತ ಪ್ರವಾಸದಲ್ಲಿರುವ ಖುರೇಷಿ, ಜನರಿಲ್ಲದೆ ಬಣಗುಡುವ ಸಭಾಂಗಣದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಸರ್ಕಾರ ಹೇರಿರುವ ನಿರ್ಬಂಧವನ್ನು ಮಾಧ್ಯಮಗಳ ಪ್ರತಿನಿಧಿಗಳು ಇದೇ ಸಂದರ್ಭದಲ್ಲಿ ಪ್ರಶ್ನಿಸಿದವು ಇದಕ್ಕೆ ಉತ್ತರಿಸಿದ ಖುರೇಷಿ, “ ನನ್ನನ್ನು ನಂಬಿ. ಮಾಧ್ಯಮಗಳನ್ನು ನಿಯಂತ್ರಿಸುವ ಅಥವಾ ಕಡಿವಾಣ ಹಾಕುವ ಪ್ರಶ್ನೆಯೇ ಈಗ ಬರುವುದಿಲ್ಲ ಎಂದು ಬ್ರಿಟನ್ – ಕೆನಡಾ ಜಂಟಿಯಾಗಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಸ್ಪಷ್ಟಪಡಿಸಿದರು.
ನಿರ್ಬಂಧ ಅಥವಾ ಕಡಿವಾಣ ಎಂಬ ಮಾತುಗಳು ಸವಕಲು ಪದಗಳಾಗಿದ್ದು, ಈಗ ಸೋಷಿಯಲ್ ಮೀಡಿಯಾಕಾಲ, ಸೋಷಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಮಾಧ್ಯಮಗಳಿಗೆ ಕಡಿವಾಣ ಹಾಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಪಾಶ್ಚಿಮಾತ್ಯ ಮಾಧ್ಯಮಗಳು ಪಾಕಿಸ್ತಾನವನ್ನು ನಕಾರಾತ್ಮಕವಾಗಿ ಚಿತ್ರಿಸುತ್ತಿವೆ. ಪಾಕಿಸ್ತಾನ ಮಾಧ್ಯಮದ ವಾಸ್ತವ ಸ್ಥಿತಿಯನ್ನು ಸರಿಯಾಗಿ ಪ್ರತಿಬಿಂಬಿಸುತ್ತಿಲ್ಲ. ವಾಕ್ ಸ್ವಾತಂತ್ರ್ಯ ಹಾಗೂ ಕೆಲವು ಸುದ್ದಿವಾಹಿನಿಗಳ ವಿರುದ್ದ ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ ಖುರೇಷಿ, ಪಾಶ್ಚಿಮಾತ್ಯ ಮಾಧ್ಯಮಗಳು ಪಾಕಿಸ್ತಾನದ ವಾಸ್ತವ ಸ್ಥಿತಿಯನ್ನು ಕಡೆಗಣಿಸಿವೆ ಎಂದು ಉತ್ತರಿಸಿದರು.
ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 1507
More News
ಉಪ ಚುನಾವಣೆಯಲ್ಲಿ   ಬಿಜೆಪಿ  ಎಲ್ಲಾ  15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

11 Nov 2019 | 9:53 PM

ಮಂಗಳೂರು, ನ 11( ಯುಎನ್ಐ)- ಡಿಸೆಂಬರ್ 5 ರಂದು ರಾಜ್ಯದಲ್ಲಿ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಭಾರಿ ಭರ್ಜರಿ ಜಯ ಸಾಧಿಸಲೇಬೇಕು ಎಂದು ಪಕ್ಷದ ಹಿರಿಯ ನಾಯಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೋಮವಾರ ಹೇಳಿದ್ದಾರೆ.

 Sharesee more..

ಲತಾ ಮಂಗೇಶ್ಕರ್ ದೇಹಾರೋಗ್ಯ ಸ್ಥಿರ

11 Nov 2019 | 8:12 PM

 Sharesee more..