Monday, Jun 24 2019 | Time 14:57 Hrs(IST)
 • ರಷ್ಯನ್‌ ಹೆಲಿಕಾಪ್ಟರ್ಸ್‌ ಕಂಪೆನಿಯಿಂದ ಪ್ರಸಕ್ತ ವರ್ಷ 200 ಹೆಲಿಕಾಪ್ಟರ್‌ಗಳ ಉತ್ಪಾದನೆ
 • ಮರಾಠವಾಡದಲ್ಲಿ ಮುಂದುವರಿದ ಮಳೆ, ರೈತರಲ್ಲಿ ಹರ್ಷ
 • ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರ ಸಾಧನೆ ಕೊಂಡಾಡಿದ ಸಾರಂಗಿ
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
 • ಹೊಸ ವಿಮಾನ ಸೇರ್ಪಡೆಯಾಗುವವರೆಗೆ ಎಎನ್ -32 ವಿಮಾನ ಮುಂದುವರಿಕೆ: ವಾಯು ಪಡೆ ಮುಖ್ಯಸ್ಥ ಧನೋವಾ
 • ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ
Special Share

ಪಾಕಿಸ್ತಾನ ವಾಯುಮಾರ್ಗ ಸಹವಾಸವೇ ಬೇಡ ಎಂದ ಪ್ರಧಾನಿ ಮೋದಿ….!

ಪಾಕಿಸ್ತಾನ ವಾಯುಮಾರ್ಗ ಸಹವಾಸವೇ ಬೇಡ ಎಂದ ಪ್ರಧಾನಿ ಮೋದಿ….!
ಪಾಕಿಸ್ತಾನ ವಾಯುಮಾರ್ಗ ಸಹವಾಸವೇ ಬೇಡ ಎಂದ ಪ್ರಧಾನಿ ಮೋದಿ….!

ನವದೆಹಲಿ, ಜೂನ್ 12 ( ಯುಎನ್ಐ)-ನೆರೆಯ ಪಾಕಿಸ್ತಾನದೊಂದಿಗೆ ಯಾವುದೇ “ಸ್ನೇಹ” ಬೇಡ ಎಂಬ ದೃಢ ಸಂಕಲ್ಪ ತೊಟ್ಟಂತೆ ಭಾರತ ಕಂಡು ಬರುತ್ತಿದ್ದು, ಕಿರ್ಗಿಸ್ಥಾನದ ರಾಜಧಾನಿ ಬಿಶ್ಕೇಕ್ ನಲ್ಲಿ ಇದೇ 13 ರಂದು ಆರಂಭಗೊಳ್ಳಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗ ಮೇಳದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರ ವಿಮಾನ ಅಲ್ಲಿಗೆ ತೆರಳಲು ಪಾಕಿಸ್ತಾನದ ವಾಯು ಮಾರ್ಗ ಬಳಸದಿರಲು ನಿರ್ಧರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವ ವಿಮಾನ, ಓಮನ್, ಇರಾನ್ ಹಾಗೂ ಮಧ್ಯ ಏಷ್ಯಾ ದೇಶಗಳ ವಾಯು ಮಾರ್ಗಗಳ ಮೂಲಕ ಬಿಶ್ಕೇಕ್ ಗೆ ತಲುಪಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಬುಧವಾರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದ್ದಾರೆ.

ಬಿಶ್ಕೇಕ್ ಗೆ ಪ್ರಧಾನಿ ಮೋದಿ ಅವರನ್ನು ಹೊತ್ತ ಅತಿಗಣ್ಯರ ವಿಮಾನ ಹಾರಾಟ ನಡೆಸಲು ಭಾರತ ಸರ್ಕಾರ ಎರಡು ವಾಯು ಮಾರ್ಗಗಳನ್ನು ಆಯ್ಕೆಮಾಡಿಕೊಂಡಿದ್ದು. ಪಾಕಿಸ್ತಾನದ ಮಾರ್ಗದ ಬದಲು ಅನ್ಯ ಮಾರ್ಗ ಬಳಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಜೂನ್ 13 ಹಾಗೂ 14 ರಂದು ಕಿರ್ಗಿಸ್ಥಾನದ ರಾಜಧಾನಿ ಬಿಶ್ಕೇಕ್ ನಲ್ಲಿ ನಡೆಯಲಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆ- ಎಸ್ ಸಿಓ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಅಲ್ಲಿಗೆ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊತ್ತ ವಿಮಾನ ಬಿಷ್ಕೇಕ್ ಗೆ ತೆರಳಲು ತನ್ನ ವಾಯು ಮಾರ್ಗ ಬಳಸಿಕೊಳ್ಳಲು ಪಾಕಿಸ್ತಾನ ತಾತ್ವಿಕ ಒಪ್ಪಿಗೆ ನೀಡಿತ್ತು ಎಂದು ಈ ಮೊದಲು ವರದಿಯಾಗಿತ್ತು

ಯುಎನ್ಐ ಕೆವಿಆರ್ ಎಎಚ್ 1553