Wednesday, Sep 23 2020 | Time 01:23 Hrs(IST)
National Share

ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ

ನವದೆಹಲಿ, ಆ 3 (ಯುಎನ್‌ಐ) ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎರಡು ತಿಂಗಳ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ರಮೇಶ್ ಪೋಖ್ರಿಯಲ್ 'ನಿಶಾಂಕ್' ಸೋಮವಾರ ಬಿಡುಗಡೆ ಮಾಡಿದ್ದಾರೆ.
ಈ ಮಾರ್ಗಸೂಚಿಗಳಲ್ಲಿ, ಮೊಬೈಲ್, ವಾಟ್ಸಾಪ್ ಸಂದೇಶ, ಟಿವಿ- ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮನೆಯಲ್ಲೇ ಶಿಕ್ಷಣ ಪಡೆಯಲು ಅವಕಾಶವಿದೆ.
ಈ ಕುರಿತಂತೆ ಮಾಹಿತಿಯನ್ನು ಟ್ವೀಟ್ ಮಾಡಿರುವ ಡಾ. ಪೋಖ್ರಿಯಾಲ್ , ‘ಎಂಟು ವಾರಗಳವರೆಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸುವುದು ಎಂಬುದರ ಕುರಿತು ಶಿಕ್ಷಕರಿಗೆ ಮಾರ್ಗಸೂಚಿಗಳಿವೆ.’ ಎಂದು ಹೇಳಿದ್ದಾರೆ.
ಈ ಕ್ಯಾಲೆಂಡರ್ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರು ಮತ್ತು ಪೋಷಕರನ್ನು ಸಬಲಗೊಳಿಸುತ್ತದೆ. ಉತ್ತಮ ಫಲಿತಾಂಶ ದೊರೆಯುವಂತಾಗಲು ಕರೋನಾ ಕಾಲದಲ್ಲಿ ಆನ್‌ಲೈನ್ ಬೋಧನೆಯ ಕುರಿತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಮಕ್ಕಳ ಕಲಿಕೆಯಲ್ಲಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಶಿಕ್ಷಕರು ಮತ್ತು ಪೋಷಕರಿಗೆ ಅನುಕೂಲವಾಗುವಂತೆ ಪಠ್ಯಕ್ರಮ ಅಥವಾ ಪಠ್ಯಪುಸ್ತಕದ ಅಧ್ಯಾಯದಿಂದ ಆಸಕ್ತಿದಾಯಕ ಮತ್ತು ಸವಾಲಿನ ಚಟುವಟಿಕೆಗಳನ್ನು ಒಳಗೊಂಡಿರುವ ವಾರದ ಕಾರ್ಯಕ್ರಮವನ್ನು ಕ್ಯಾಲೆಂಡರ್ ಒಳಗೊಂಡಿದೆ.
ಇದರಲ್ಲಿ ಕಲಾ ಶಿಕ್ಷಣ, ದೈಹಿಕ ವ್ಯಾಯಾಮ, ಯೋಗ, ಮತ್ತು ವೃತ್ತಿಪರ ಕೌಶಲ್ಯಗಳಂತಹ ಪ್ರಾಯೋಗಿಕ ಕಲಿಕೆಯ ಚಟುವಟಿಕೆಳು ಒಳಗೊಂಡಿವೆ. ಕ್ಯಾಲೆಂಡರ್, ತರಗತಿ ಮತ್ತು ವಿಷಯವಾರು ಚಟುವಟಿಕೆಗಳನ್ನು ಕೋಷ್ಟಕ ರೂಪಗಳಲ್ಲಿ ಒಳಗೊಂಡಿದೆ. ಕ್ಯಾಲೆಂಡರ್‍ ನಲ್ಲಿ ಹಿಂದಿ ಇಂಗ್ಲಿಷ್, ಉರ್ದು ಮತ್ತು ಸಂಸ್ಕೃತ ಭಾಷೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು ವಿಷಯ ವಲಯಗಳಾಗಿ ಒಳಗೊಂಡಿವೆ.
ಯುಎನ್‍ಐ ಎಸ್ಎಲ್ಎಸ್ 2251
More News
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..