Monday, Jun 1 2020 | Time 01:33 Hrs(IST)
Sports Share

ಪೂಜಾರ ಅವರನ್ನು ಬೇಗ ಔಟ್ ಮಾಡಬೇಕು: ಕಮಿನ್ಸ್

ಮೆಲ್ಬೋರ್ನ್, ಮೇ 23 (ಯುಎನ್ಐ)- ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರು ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರನ್ನು ಹೊಗಳಿದ್ದಾರೆ. ಅವರು ಕ್ರೀಸ್ನಲ್ಲಿ ದೀರ್ಘಕಾಲ ಉಳಿಯುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತು ಭಾರತ ವಿರುದ್ಧದ ತವರಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಅವರನ್ನು ಕಟ್ಟಿಹಾಕ ಬೇಕಿದೆ ಎಂದು ತಿಳಿಸಿದ್ದಾರೆ.

2018-19ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯಲ್ಲಿ ಪೂಜಾರ ಅತ್ಯುತ್ತಮ ಪ್ರದರ್ಶನ ನೀಡಿ 521 ರನ್ ಗಳಿಸಿದ್ದರು. ಪೂಜಾರ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1258 ಎಸೆತಗಳನ್ನು ಎದುರಿಸಿದ್ದರು. ಭಾರತ ಮತ್ತು ಆಸ್ಟ್ರೇಲಿಯಾ ಈ ವರ್ಷದ ಡಿಸೆಂಬರ್‌ನಲ್ಲಿ ನಾಲ್ಕು ಟೆಸ್ಟ್ ಸರಣಿಯನ್ನು ಆಡಲಿವೆ.

"ಪೂಜಾರ ಆ ಸರಣಿಯಲ್ಲಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಮಯ ತೆಗೆದುಕೊಳ್ಳುವ ಆಟಗಾರರಲ್ಲಿ ಅವರು ಒಬ್ಬರು. ಅವರಿಗೆ ತನ್ನದೇ ಆದ ಕೆಲವು ಸಮಸ್ಯೆಗಳಿದ್ದರೂ, ಅವುಗಳ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಪೂಜಾರ ಅವರನ್ನು ಬೇಗ ಪೆವಿಲಿಯನ್ ಗೆ ಅಟ್ಟುವ ಪ್ಲಾನ್ ಮಾಡಿಕೊಂಡಿದ್ದೇವೆ” ಎಂದಿದ್ದಾರೆ.

"ನಾನು ಟೆಸ್ಟ್ ಕ್ರಿಕೆಟ್ ಆಡುವಾಗಲೆಲ್ಲಾ ನನ್ನ ಬೌಲಿಂಗ್ ಬಗ್ಗೆ ಸ್ವಲ್ಪ ಕಲಿಯುತ್ತೇನೆ ಎಂದು ನಾನು ಭಾವಿಸುತ್ತೇನೆ. ಆ ಸರಣಿಯ ನಂತರ ನಾನು ಸುಮಾರು 10 ರಿಂದ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ ಮತ್ತು ಪ್ರತಿ ಸರಣಿಯ ನಂತರವೂ ನನ್ನ ಸಾಧನೆ ಸುಧಾರಿಸಿದೆ” ಎಂದು ಕಮಿನ್ಸ್ ಹೇಳಿದ್ದಾರೆ.

ಯುಎನ್ಐ ವಿಎನ್ಎಲ್ 1830