Sunday, Nov 1 2020 | Time 00:45 Hrs(IST)
Sports Share

ಪೀಟ್ ಸಂಪ್ರಾಸ್ ದಾಖಲೆಯನ್ನು ಮೀರಿದ ಜೊಕೊವಿಚ್

ನವದೆಹಲಿ, ಸೆ. 22 (ಯುಎನ್ಐ)- ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಇಟಾಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದು, ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಇದೇ ಸ್ಥಾನ 287 ವಾರ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಅವರು ಅಮೆರಿಕದ ಪೀಟ್ ಸಂಪ್ರಾಸ್ ಅವರನ್ನು ಹಿಂದಿಕ್ಕಿದ್ದಾರೆ.

ಜೊಕೊವಿಚ್ ಐದನೇ ಬಾರಿಗೆ ಇಟಾಲಿಯನ್ ಓಪನ್ ಚಾಂಪಿಯನ್ ಆಗಿದ್ದು, ಪ್ರಥಮ ಸ್ಥಾನದಲ್ಲಿ 287 ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಅವರು 286 ವಾರಗಳವರೆಗೆ ಪ್ರಥಮ ಸ್ಥಾನದಲ್ಲಿದ್ದ ಸಂಪ್ರಾಸ್‌ನ ದಾಖಲೆಯನ್ನು ಮೀರಿಸಿದರು ಮತ್ತು ಆ ಕ್ರಮದಲ್ಲಿ ಎರಡನೇ ಸ್ಥಾನಕ್ಕೆ ಏರಿದರು.

ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ 310 ವಾರ ಮೊದಲ ಸ್ಥಾನದಲ್ಲಿದ್ದು, ಅತಿ ಹೆಚ್ಚು ವಾರಗಳ ಈ ಸ್ಥಾನ ಹೊಂದಿದ್ದ ದಾಖಲೆಯನ್ನು ಪಡೆದಿದ್ದಾರೆ. ಈ ಕ್ರಮದಲ್ಲಿ, ಅಮೆರಿಕದ ಇವಾನ್ ಲೆಂಡ್ಲ್ 270 ವಾರಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ ಮತ್ತು ಅಮೆರಿಕದ ಜಿಮ್ಮಿ ಕಾನರ್ಸ್ 268 ವಾರಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಈ ಗೆಲುವಿನ ನಂತರ 29 ವರ್ಷದ ಜೊಕೊವಿಚ್ 11260 ಅಂಕಗಳನ್ನು ಗಳಿಸಿದ್ದಾರೆ. ಜೊಕೊವಿಚ್ ಮತ್ತು ಎರಡನೇ ಸ್ಥಾನದಲ್ಲಿರುವ ಸ್ಪೇನ್‌ನ ರಾಫೆಲ್ ನಡಾಲ್ ನಡುವೆ 1410 ಅಂಕಗಳನ್ನು ಅಂತರವಿದೆ. ಪುರುಷರ ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ ಒಂಬತ್ತು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಮತ್ತು ಕೆನಡಾದ ಡೆನಿಸ್ ಶಪೋವೊಲೊವ್ ಅಗ್ರ 10 ರಲ್ಲಿ ಪ್ರವೇಶಿಸಿ ನಾಲ್ಕು ಸ್ಥಾನಗಳ ಸುಧಾರಣೆ ಕಂಡಿದ್ದಾರೆ. ಫೈನಲ್‌ನಲ್ಲಿ ಜೊಕೊವಿಚ್ ವಿರುದ್ಧ ಸೋತ ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್‌ಜ್ಮನ್ ಎರಡು ಸ್ಥಾನಗಳ ಸುಧಾರಣೆಯೊಂದಿಗೆ 13 ನೇ ಸ್ಥಾನಕ್ಕೆ ಏರಿದ್ದಾರೆ.

ಯುಎನ್ಐ ವಿಎನ್ಎಲ್ 1844
More News
ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

31 Oct 2020 | 9:53 PM

ದುಬೈ, ಅ.31 (ಯುಎನ್ಐ)- ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಮರ್ಮ ಅರಿಯುವಲ್ಲಿ ವಿಫಲರಾಗಿದ್ದೇವೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

 Sharesee more..

ಸನ್ ದಾಳಿಗೆ ಬೆಂಗಳೂರು ತಬ್ಬಿಬ್ಬು

31 Oct 2020 | 9:28 PM

 Sharesee more..
ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

31 Oct 2020 | 8:03 PM

ಅಬುಧಾಬಿ, ಅ 31(ಯುಎನ್ಐ) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 Sharesee more..

ಮುಂಬೈ ಮುಂದುವರಿಸಿದ ಗೆಲುವಿನ ನಾಗಾಲೋಟ

31 Oct 2020 | 6:47 PM

 Sharesee more..