Saturday, May 25 2019 | Time 04:53 Hrs(IST)
Election Share

ಪ.ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಡಿತ

ಪ.ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಡಿತ
ಪ.ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಡಿತ

ನವದೆಹಲಿ, ಮೇ 15(ಯುಎನ್‌ಐ) ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿನ 7ನೇ ಹಾಗೂ ಅಂತಿಮ ಹಂತದ ಲೋಕಸಭಾ ಚುನಾವಣಾ ಪ್ರಚಾರವನ್ನು ಸುಮಾರು 22 ಗಂಟೆಗಳಷ್ಟು ಕಡಿತಗೊಳಿಸಿದೆ.

ಚುನಾವಣಾ ಇತಿಹಾಸದಲ್ಲಿ ಇದೊಂದು ಅಪರೂಪದ ಪ್ರಕರಣವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಮಾದರಿ ನಡಾವಳಿ ಸಂಹಿತೆ ಉಲ್ಲಂಘಿಸುತ್ತಿರುವ ಪ್ರಕರಣಗಳು ಪದೇಪದೇ ಮರುಕಳಿಸುತ್ತಿರುವುದನ್ನು ಮನಗೊಂಡು ಆಯೋಗ ತನಗೆ ಸಂವಿಧಾನದಡಿ ದೊರೆತ ಅಧಿಕಾರವನ್ನು ಚಲಾಯಿಸಿದೆ.

ಎಡಿಜಿ ಸಿಐಡಿ ರಾಜೀವ್‌ ಕುಮಾರ್‌ ಮತ್ತು ಪ್ರಧಾನ ಗೃಹ ಕಾರ್ಯದರ್ಶಿ ಅವರನ್ನು ಚುನಾವಣಾ ಕರ್ತವ್ಯದಿಂದ ಮೊಟುಕುಗೊಳಿಸಿದೆ. ಸಂವಿಧಾನದ ಕಾಯ್ದೆ 324ರ ಪ್ರಕಾರ ಆಯೋಗ ಈ ಕ್ರಮ ತೆಗೆದುಕೊಂಡಿದೆ.

ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ರೋಡ್‌ ಶೋ ವೇಳೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ ನಡೆದಿದ್ದ ಘರ್ಷಣೆ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ಯುಎನ್‌ಐ ಕೆಎಸ್‌ವಿ ವಿಎನ್‌ 2044

More News

ಪ್ರಧಾನಿ ಮೋದಿಗೆ ಶತ್ರುಘ್ನ ಸಿನ್ಹಾ ಅಭಿನಂದನೆ

24 May 2019 | 8:42 PM

 Sharesee more..
ರಾಷ್ಟ್ರಪತಿಯವರಿಂದ ಸರ್ಕಾರದ ರಾಜೀನಾಮೆ ಅಂಗೀಕಾರ: ಪ್ರಮಾಣ ವಚನ ಸ್ವೀಕರಿಸುವವರಿಗೆ ಮುಂದುವರೆಯಲು ಸೂಚನೆ

ರಾಷ್ಟ್ರಪತಿಯವರಿಂದ ಸರ್ಕಾರದ ರಾಜೀನಾಮೆ ಅಂಗೀಕಾರ: ಪ್ರಮಾಣ ವಚನ ಸ್ವೀಕರಿಸುವವರಿಗೆ ಮುಂದುವರೆಯಲು ಸೂಚನೆ

24 May 2019 | 8:41 PM

ನವದೆಹಲಿ ಮೇ 24 (ಯುಎನ್‌ಐ)-ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಸರ್ಕಾರದ ರಾಜೀನಾಮೆ ಅಂಗೀಕರಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಮುಂದುವರೆಯುವಂತೆ ಪ್ರಧಾನಿ ನರೇಂದ್ರಮೋದಿ ಹಾಗೂ ಸಚಿವ ಪರಿಷತ್‌ನ ಸದಸ್ಯರಿಗೆ ಮನವಿ ಮಾಡಿದ್ದಾರೆ.

 Sharesee more..