Friday, Feb 28 2020 | Time 09:36 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಪ.ಬಂಗಾಳದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ನಾಲ್ವರು ಸಾವು, ಅನೇಕರಿಗೆ ಗಾಯ

ಕೊಲ್ಕತ್ತ, ಜ3(ಯುಎನ್‍ಐ)- ಪಶ್ಚಿಮ ಬಂಗಾಳದ ಉತ್ತರ 24 ಪರಗಣಾಸ್ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮತ್ತು ಅಧಿಕೃತ ಮೂಲಗಳು ತಿಳಿಸಿವೆ.
ನತದೃಷ್ಟರೆಲ್ಲರೂ ನಿಹಾತಿಯಲ್ಲಿ ದೆಬೋಕ್ ನಲ್ಲಿರುವ ಕಾರ್ಖಾನೆ ಕೆಲಸಗಾರರಾಗಿದ್ದು, ಕಾರ್ಖಾನೆಯಲ್ಲಿನ ಸರಣಿ ಸ್ಫೋಟಗಳಿಂದ ಕಟ್ಟಡ ನೆಲಸಮವಾಗಿದೆ.
ಈ ದುರಂತ ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ನಡೆದಿದದು, ಸ್ಫೋಟದ ಸದ್ದು 10ಕಿ.ಮೀ ದೂರದವರೆಗೆ ಕೇಳಿಸಿದೆ. ಕಾರ್ಖಾನೆಯ ಮಾಲೀಕ ನೂರ್ ಹುಸೇನ್ ಪರಾರಿಯಾಗಿದ್ದಾನೆ.
ಒಂದು ವರ್ಷದ ಹಿಂದೆ ಇದೇ ಕಾರ್ಖಾನೆಯಲ್ಲಿ ಇಂತಹುದೇ ಸ್ಫೋಟಗಳು ಸಂಭವಿಸಿ, ಐವರು ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯ ಪೊಲೀಸರು ಆರೋಪಿಸಿದ್ದಾರೆ.
ಘಟನೆ ಕುರಿತು ಎನ್‍ಐಎನಿಂದ ತನಿಖೆ ನಡೆಸುವಂತೆ ಬರಾಕ್‍ಪುರ್ ಕ್ಷೇತ್ರದ ಲೋಕಸಭಾ ಸದಸ್ಯ ಅರ್ಜುನ್‍ಸಿಂಗ್, ಈ ಪ್ರದೇಶದಲ್ಲಿ ಅನೇಕ ಅಕ್ರಮ ಪಟಾಕಿ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದ್ದಾರೆ.
ಸ್ಫೋಟದ ಕುರಿತು ತನಿಖೆ ನಡೆಸಲು ಬರಾಕ್‍ಪುರ್ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಯುಎನ್‍ಐ ಎಸ್‍ಎಲ್‍ಎಸ್ 1850