Friday, Feb 28 2020 | Time 09:25 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲ: ಕೇಂದ್ರದ ವಿರುದ್ಧ ಚಿದು ವಾಗ್ದಾಳಿ

ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲ: ಕೇಂದ್ರದ ವಿರುದ್ಧ   ಚಿದು ವಾಗ್ದಾಳಿ
ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲ: ಕೇಂದ್ರದ ವಿರುದ್ಧ ಚಿದು ವಾಗ್ದಾಳಿ

ನವದೆಹಲಿ, ಜನವರಿ 23 (ಯುಎನ್‌ಐ) ಎನ್‌ಡಿಎ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನುಹಿಂದೆಂದೂ ಕಂಡರಿಯದ ರೀತಿಯಲ್ಲಿ ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಗಂಬೀರ ಆರೋಪ ಮಾಡಿದ್ದಾರೆ.

ಆರ್ಥಿಕ ಗುಪ್ತಚರ ಘಟಕ ಪ್ರಕಟಿಸಿದ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ ಹತ್ತು ಅಂಕ ಕುಸಿತ ಕಂಡಿರುವುದು ನಿಜಕ್ಕು ಕಳವಳ ಮತ್ತು ತಲೆ ತಗ್ಗಿಸಬೇಕಾದ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.



ಟ್ವೀಟ್‌ಗಳ ಸರಣಿಯಲ್ಲಿ, ಕೇಂದ್ರ ಸರ್ಕಾರದ ನೀತಿ ನಿಯಮಗಳನ್ನೂ ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಕಳೆದ ಎರಡು ವರ್ಷಗಳ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಅತ್ಯಂತ ದುರ್ಬಲಗೊಂಡಿವೆ ಎಂದು ತಿಳಿದಿದೆ, ಅಧಿಕಾರದಲ್ಲಿರುವ ನಿಜವಾದ 'ತುಕ್ಡೆ ತುಕ್ಡೆ' ಗ್ಯಾಂಗ್ ' ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 10 ಸ್ಥಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ಅರಿಯಬೇಕು ಎಂದು ಚಾಟಿ ಬೀಸಿದರು.

ಇಂಡಿಯಾ ತೆಗೆದುಕೊಳ್ಳುತ್ತಿರುವ ದಿಕ್ಕಿನಿಂದ ಜಗತ್ತು ಗಾಬರಿಗೊಂಡಿದೆ. ಪ್ರತಿಯೊಬ್ಬ ದೇಶಭಕ್ತ ಭಾರತೀಯರೂ ಎಚ್ಚರಗೊಳ್ಳಬೇಕಾದ ಸಮಯ ಬಂದಿದೆ.

ಆರ್ಥಿಕ ಗುಪ್ತಚರ ಘಟಕವು ‘ಪ್ರಜಾಪ್ರಭುತ್ವ ಸೂಚ್ಯಂಕ’ ಪ್ರಕಟಿಸಿದ ಒಂದು ದಿನದ ನಂತರ ಚಿದಂಬರಂ ಅವರ ಹೇಳಿಕೆ ಕಣ್ಣು ತೆರೆಸಿವೆ. ಇದರಲ್ಲಿ 2018 ಕ್ಕೆ ಹೋಲಿಸಿದರೆ ಭಾರತ 10 ಸ್ಥಾನಗಳನ್ನು ಕಳೆದುಕೊಂಡಿದೆ.

ದೇಶದಲ್ಲಿ 'ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವ'ಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎತ್ತ ಕೆಡೆ ಹೋಗುತ್ತಿದೆಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ಅವರು ದೂರಿದರು.

ದೇಶದ ನೈಜ ಪರಿಸ್ಥಿತಿ ವಿಶ್ವಮಟ್ಟದಲ್ಲಿ ಬಯಲಾಗಿದೆ ಪ್ರಜಾಪ್ರಭುತ್ವ ಸೂಚ್ಯಂಕವನ್ನು ಎಲ್ಲವನ್ನು ಬಯಲು ಮಾಡಿದೆ.

ಸೂಚ್ಯಂಕವು 2006 ರಲ್ಲಿ ಪ್ರಾರಂಭವಾದಾಗಿನಿಂದ, ಭಾರತ ಎಂದೂ ಈ ಮಟ್ಟದ ಕುಸಿತ ಕಂಡಿರಲಿಲ್ಲ ಎಂದು ಎಐಸಿಸಿ ಪಕ್ಷದ ವಕ್ತಾರ ಅಭಿಷೇಕ್ ಸಿಂಗ್ವಿ ಇಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಹೇಳಿದರು.

ಯುಎನ್ಐ ಕೆಎಸ್ಆರ್ 2035