Sunday, Nov 1 2020 | Time 00:53 Hrs(IST)
Special Share

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ
ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಲಖನೌ, ಸೆ 23 (ಯುಎನ್‍ಐ) ಸಂಸತ್ತಿನ ಮಿತಿಗಳನ್ನು ಮೀರಿ ಪ್ರಸ್ತುತ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

"ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಯಲಾಗಿದ್ದರೂ, ಅದರ ಘನತೆಯನ್ನು ಹಲವು ಬಾರಿ ಕಡಿದುಕೊಂಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

“ಸರ್ಕಾರದಲ್ಲಿ ಕಾರ್ಯವೈಖರಿ ಮತ್ತು ಸದನದಲ್ಲಿ ಕಂಡುಬರುವ ಪ್ರತಿಪಕ್ಷಗಳ ವರ್ತನೆ ಸಂಸತ್ತು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಘನತೆಗೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಇದು ಅತ್ಯಂತ ದುಃಖಕರವಾಗಿದೆ. " ಎಂದಿದ್ದಾರೆ.

ಪ್ರತಿಪಕ್ಷದ ಸಂಸದರು ಕಳೆದ ಭಾನುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಬಗ್ಗೆ ಸಾಕಷ್ಟು ಗದ್ದಲ ಮತ್ತು ಕೋಲಾಹಲ ಸೃಷ್ಟಿಸಿದ್ದರು. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ'ಬ್ರೇನ್ ರೂಲ್ ಬುಕ್‌ ಹರಿದುಹಾಕಿದ್ದರೆ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಜಯ್ ಸಿಂಗ್ ಅವರು ಉಪಾಧ್ಯಕ್ಷರ ವೇದಿಕೆಯ ಬಳಿ ಸರ್ಕಾರ ವಿರೋಧಿ ಘೋಷಣೆ ಕೂಗಿದ್ದರು.

ನಂತರ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ವಿಪಕ್ಷಗಳ ಎಂಟು ಸಂಸದರನ್ನು ಸದನದಿಂದ ಅಮಾನತುಗೊಳಿಸಿದ್ದರು.

ಯುಎನ್ಐ ಎಸ್‍ಎ 1402

More News

ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್

31 Oct 2020 | 7:50 PM

 Sharesee more..
ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

31 Oct 2020 | 7:22 PM

ಶ್ರೀನಗರ್, ಅ 31 (ಯುಎನ್ಐ) ಕೇಂದ್ರ ಸರ್ಕಾರದ ಅನ್ಲಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಮ್ಮು ಕಾಶ್ಮೀರ ಆಡಳಿತ ನವೆಂಬರ್ 1 ರಿಂದ ಮಾತಾ ವೈಷ್ಣೋದೇವಿಯ ದೇಗುಲದಲ್ಲಿ ದಿನಕ್ಕೆ 15 ಸಾವಿರ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಿದೆ.

 Sharesee more..
ಅದು ಪಕ್ಷದ ತೀರ್ಮಾನ  ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ'  ಮೊರೆ ಹೋದ ಕಮಲ್ ನಾಥ್

ಅದು ಪಕ್ಷದ ತೀರ್ಮಾನ ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ' ಮೊರೆ ಹೋದ ಕಮಲ್ ನಾಥ್

31 Oct 2020 | 7:11 PM

ನವದೆಹಲಿ, ಅ 31(ಯುಎನ್ಐ) ತಮ್ಮ 'ತಾರಾ ಪ್ರಚಾರಕ' ಸ್ಥಾನಮಾನ ರದ್ದುಗೊಳಿಸಿದ ಚುನಾವಣಾ ಆಯೋಗ ಕ್ರಮದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಶನಿವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

 Sharesee more..

ನ್ಯಾಯ್ ಕೌಶಲ್ ಮೂಲಕ ತ್ವರಿತ ನ್ಯಾಯದಾನ: ಸಿಜೆಐ

31 Oct 2020 | 4:58 PM

 Sharesee more..