Monday, Jul 22 2019 | Time 19:51 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
Parliament Share

ಪ್ರತ್ಯೇಕ ರೈಲ್ವೆ ಬಜೆಟ್ ರದ್ದು : ಪಿಯೂಷ್ ಗೋಯಲ್ ಸಮರ್ಥನೆ

ನವದೆಹಲಿ, ಜುಲೈ 12(ಯುಎನ್ಐ ) ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸುವುದು ಸರಿಯಲ್ಲ ಹಾಗೂ ಪ್ರತ್ಯೇಕ ರೈಲ್ವೆ ಬಜೆಟ್ ತೆಗೆದು ಹಾಕಿದ ಸರಕಾರದ ತೀರ್ಮಾನವನ್ನೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಕೇಂದ್ರದ ಈ ಕ್ರಮವನ್ನು ದೇಶವೇ ಮುಕ್ತಕಂಠದಿಂದ ಪ್ರಶಂಸೆ ಮಾಡಿದೆ ಎಂದೂ ರೈಲ್ವೆ ಸಚಿವರು ಲೋಕಸಭೆಯಲ್ಲಿ ರೈಲ್ವೆ ಇಲಾಖೆ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ಕೊಡುವ ಸಮಯದಲ್ಲಿ ಹೇಳಿದ್ದಾರೆ . ರೈಲ್ವೆ ಬಜೆಟ್ ಈ ವರೆಗೆ ಸಂಪೂರ್ಣವಾಗಿ ರಾಜಕೀಯ ಬಜೆಟ್ ಆಗಿತ್ತು" ಎಂದು ಅವರು ಅಭಿಪ್ರಾಯಪಟ್ಟರು.
ಅಂತಹ ಬಜೆಟ್ ರಾಜಕೀಯ ಕಾರಣಗಳಿಗಾಗಿ ಮಾಡಲ್ಪಟ್ಟಿತ್ತು ಮತ್ತು ಇಡೀ ದೇಶ ಮತ್ತು ಸಂಸದರನ್ನು ದಾರಿ ತಪ್ಪಿಸುವ ಗುರಿಯನ್ನು ಮಾತ್ರ ಹೊಂದಿತ್ತು ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಗೆಲ್ಲಲು ಮತ್ತು ಕ್ಷೇತ್ರಗಳ ಜನರನ್ನು ಸಂತೋಷಪಡಿಸಲು"ಹೀಗೆ ಮಾಡಲಾಗುತ್ತಿತ್ತು ತಮ್ಮ ಭಾಷಣದಲ್ಲಿ, ರೈಲ್ವೆ ಇಲಾಖೆಯಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಅವರು ಹಿಂದಿನ ಇಬ್ಬರು ಸಚಿವರಾದ ಸುರೇಶ್ ಪ್ರಭು ಮತ್ತು ಡಿ.ವಿ ಸದಾನಂದ ಗೌಡ ಅವರ ಕೆಲಸವನ್ನೂ ಅವರು ಶ್ಲಾಘಿಸಿ, ರೈಲ್ವೆಗೆ ಹೊಸ ದೃಷ್ಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರು ಅಭಿನಂದಿಸಿದರು.
2007 ರಿಂದ ಯುಪಿಎ ಆಡಳಿತವು ಸರಕು ಕಾರಿಡಾರ್ ಯೋಜನೆಯನ್ನು ಪ್ರಾರಂಭಿಸುವುದನ್ನು ರೈಲ್ವೆ ಸಚಿವರು ಉಲ್ಲೇಖಿಸಿದ್ದರು ಆದರೆ 2007 ಮತ್ತು 2014 ರ ನಡುವಿನ ಏಳು ವರ್ಷಗಳಲ್ಲಿ - ಇದಕ್ಕಾಗಿ ಕೇವಲ 9000 ಕೋಟಿ ರೂ.ವ್ಯಯ ಮಾಡುವುದಾಗಿ ಹೇಳಿದ್ದರೂ ಆದರೆ ಒಂದು ಕಿಮೀ ಟ್ರ್ಯಾಕ್ ಲಿಂಕ್ ಕೂಡ ಮಾಡಲಿಲ್ಲ ಎಂದು ಅವರು ಟೀಕಿಸಿದರು.
ಆದಾಗ್ಯೂ, 2014 ರ ನಂತರ, ನಾವು ಅದೇ ಕೆಲಸ ಮಾಡಿದ್ದೇವೆ ಮತ್ತು ಕೇವಲ ಐದು ವರ್ಷಗಳಲ್ಲಿ ನಾವು 39,000 ಕೋಟಿ ರೂ. ಹೂಡಿಕೆ ಮಾಡಿ 1900 ಕಿಮೀ ಟ್ರ್ಯಾಕ್ ಲಿಂಕ್ ಅನ್ನು ಸಹ ಸೇರಿಸಲಾಗಿದೆ. 2021 ರ ವೇಳೆಗೆ ಎರಡು ಸರಕು ಕಾರಿಡಾರ್‌ಗಳು ಸಿದ್ಧವಾಗಲಿವೆ. ರೈಲ್ವೆ ಇಲಾಖೆಯಲ್ಲಿ ಸುಧಾರಣೆ ತರಲು ಪಿಪಿಪಿ ಮಾದರಿಯ ಅಳವಡಿಕೆ ಬಗ್ಗೆ ಸರ್ಕಾರದ ನಿಲುವನ್ನು ಸಚಿವ ಗೋಯಲ್ ಅವರು ಸಮರ್ಥಿಸಿಕೊಂಡರು.
ಯುಎನ್ಐ ಕೆಸ್ಆರ್ ಎಎಚ್ 1455
More News
ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

ಗುಜರಾತಿಗಳೆಂಬ ಕಾರಣಕ್ಕೆ ಅಂಬಾನಿ ಮತ್ತು ಅದಾನಿ ಟಾರ್ಗೆಟ್‌ : ಸಚಿವ ರುಪಾಲ

19 Jul 2019 | 8:48 PM

ನವದೆಹಲಿ, ಜುಲೈ 19 (ಯುಎನ್‌ಐ) ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ಮಸೂದೆಗೆ ಉತ್ತರಿಸುವಾಗ ರಫೆಲ್‌, ಅಂಬಾನಿ ಮತ್ತು ಅದಾನಿ ಅವರ ಹೆಸರಿನ ಪ್ರಸ್ತಾಪಕ್ಕೆ ಕೃಷಿ ಖಾತೆ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಶುಕ್ರವಾರ ಆಕ್ಷೇಪಿಸಿದರು.

 Sharesee more..
ಕೇಂದ್ರ ಸಚಿವ ಬಲಿಯಾನ್ ಗೆ  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

ಕೇಂದ್ರ ಸಚಿವ ಬಲಿಯಾನ್ ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಎಚ್ಚರಿಕೆ

19 Jul 2019 | 8:41 PM

ನವದೆಹಲಿ, ಜುಲೈ 19( ಯುಎನ್ಐ) ಸಂಸತ್ತಿನ ಕಲಾಪದಲ್ಲಿ ಹಾಜರಾಗದೆ ಸಮಯ ವ್ಯರ್ಥ ಗೊಳಿಸಿದ್ದಕ್ಕಾಗಿ ಕೇಂದ್ರ ಪಶುಸಂಗೋಪನಾ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸಂಜೀವ್ ಕುಮಾರ್ ಬಲಿಯಾನ್ ವಿರುದ್ಧ ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ.

 Sharesee more..