Wednesday, Sep 23 2020 | Time 20:28 Hrs(IST)
 • ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್
 • ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ 15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ
 • ಐಪಿಎಲ್ 2020: ಸೈಡ್‌ ಸ್ಟ್ರೈನ್‌ನಿಂದ ಚೇತರಿಸಿಕೊಂಡ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌
 • ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಸಚಿವ ಮಾಧುಸ್ವಾಮಿ v/s ಎಚ್‌ ಕೆ ಪಾಟೀಲ್ ಜಟಾಪಟಿ
 • ವಿಧಾನ ಸಭೆಯಲ್ಲಿ ಆರ್ಥಿಕ ಹೊಣೆಗಾರಿಕೆ ಸೇರಿ 12 ವಿಧೇಯಕಗಳು,3 ವರದಿಗಳ ಮಂಡನೆ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್‌ ಮುಖಾಮುಖಿ ನಾಳೆ
 • ಕೊನೆಗೂ ಭೌತಿಕ ವಿಚಾರಣೆಗೆ ತೆರೆದುಕೊಂಡ ಹೈಕೋರ್ಟ್‌; ಭಾಗಶಃ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ
 • ಸೆನ್ಸೆಕ್ಸ್ 65 66 ಅಂಕ ಕುಸಿತ
 • ರಾಯಚೂರು ಐಐಐಟಿಗೆ ಕೇಂದ್ರದ ಅಸ್ತು: ಡಿಸಿಎಂ ಸವದಿ ಅಭಿನಂದನೆ
 • ಕೊರೋನಾ ಸೋಂಕು ಎಷ್ಟೇ ಹೆಚ್ಚಾದರೂ ನಿಯಂತ್ರಣಕ್ಕೆ ಸರ್ಕಾರ ಸಿದ್ಧ: ಜಾವೆದ್ ಅಖ್ತರ್
 • ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಧರಣಿ
 • ಕಿಕ್ ಬ್ಯಾಕ್ ಆರೋಪ: ಯಡಿಯೂರಪ್ಪ ರಾಜೀನಾಮೆಗೆ ಸುರ್ಜೇವಾಲಾ ಒತ್ತಾಯ
 • ರೈತರು ಮತ್ತು ಕಾರ್ಮಿಕರ ಕುರಿತ ಮಸೂದೆಗಳನ್ನು ವಿರೋಧಿಸಿ ಸಂಸತ್ ಭವನದ ಆವರಣದಲ್ಲಿ ಪ್ರತಿಪಕ್ಷಗಳ ಸದಸ್ಯರಿಂದ ಪ್ರತಿಭಟನಾ ಮೆರವಣಿಗೆ
 • ಚರ್ಚ್ ಪಾದರ್ ನಿಂದ ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಆಯುಕ್ತರ ಕಚೇರಿಯಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ
 • ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ಕುರಿತ ಟರ್ಕಿ ಅಧ್ಯಕ್ಷರ ಹೇಳಿಕೆಗೆ ಭಾರತ ಖಂಡನೆ
Special Share

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ : ಅಸ್ಸಾಂ ಉದ್ವಿಗ್ನ

ಗುವಾಹಟಿ, ಡಿ ೧೩ (ಯುಎನ್‌ಐ) ಪೌರತ್ವ ಕಾಯ್ದೆ ವಿರುದ್ಧ ನಡೆದಿರುವ ಪ್ರತಿಭಟನೆಗಳಿಂದಾಗಿ ಅಸ್ಸಾಂನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆಯಾದರೂ, ಸದ್ಯಕ್ಕೆ ನಿಯಂತ್ರಣದಲ್ಲಿದೆ
ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ತಡೆಯಲು ಎರಡು ದಿನಗಳ ಹಿಂದೆ ಹೇರಿದ ಅನಿರ್ದಿಷ್ಟ ಕರ್ಫ್ಯೂ ರಾಜಧಾನಿ ಗುವಾಹಟಿಯಲ್ಲಿ ಶುಕ್ರವಾರ ಮುಂದುವರಿದಿದ್ದು, ಅಸ್ಸಾಂನ ದಿಬ್ರುಗಡದಲ್ಲಿ ಐದು ಗಂಟೆಗಳ ವಿಶ್ರಾಂತಿ ನೀಡಲಾಯಿತು. ಗುವಾಹಟಿಯಲ್ಲಿ ಕರ್ಫ್ಯೂ ನಡುವೆಯೇ ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಹೊರಬಂದಿದ್ದರು.
ಜನರಲ್ಲಿನ ಆತಂಕ ದೂರ ಮಾಡು ಉದ್ದೇಶದಿಂದ ಗುವಾಹಟಿಯ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯು ಧ್ವಜ ಮೆರವಣಿಗೆಯನ್ನು ಮುಂದುವರೆಸಿತು.
ಪ್ರಭಾವಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ನೇತೃತ್ವದ ಪೌರತ್ವ ವಿರೋಧಿ ತಿದ್ದುಪಡಿ ಮಸೂದೆ (ಸಿಎಬಿ) ಪ್ರತಿಭಟನೆ ಮುಂದುವರೆದಿದ್ದು, ವಿದ್ಯಾರ್ಥಿ ಸಂಘವು ತಮ್ಮ ಹನ್ನೆರಡು ಗಂಟೆಗಳ ಧರಣಿ ಆಂದೋಲನವನ್ನು ಚನ್ಮಾರಿ ಕ್ಷೇತ್ರದಲ್ಲಿ ಇಲ್ಲಿ ಆಯೋಜಿಸಿತ್ತು.
ವಿಶೇಷವೆಂದರೆ, ಸಿಎಬಿ ವಿರುದ್ಧ ಎಎಎಸ್‌ಯು ಕೋಲಾಹಲವು ಈಗ ವಿವಿಧ ರಾಜಕೀಯ ಬಣಗಳಿಂದ ಬೆಂಬಲ ಪಡೆಯುತ್ತಿದೆ.
೨೦೧೪ ರ ಡಿಸೆಂಬರ್ ೩೧ ರ ಮೊದಲು ಭಾರತಕ್ಕೆ ಪ್ರವೇಶಿಸಿದ್ದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಅಕ್ರಮ ಹಿಂದೂ, ಪಾರ್ಸಿ, ಸಿಖ್, ಜೈನ್, ಬೌದ್ಧ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಕಾಯ್ದೆ ವಿರುದ್ಧ ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದವು.
ಈಶಾನ್ಯ ರಾಜ್ಯಗಳ ಜನರು, ವಿಶೇಷವಾಗಿ ಅಸ್ಸಾಂ ಮತ್ತು ತ್ರಿಪುರಗಳು ನೆರೆಯ ಬಾಂಗ್ಲಾದೇಶದ ಮುಸ್ಲಿಮೇತರರಿಂದ "ಅತಿಕ್ರಮಿಸಲ್ಪಡುತ್ತವೆ" ಎಂಬ ಭಯದಿಂದಾಗಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೧೦೩
More News
ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು: ಮಾಯಾವತಿ

23 Sep 2020 | 5:12 PM

ಲಖನೌ, ಸೆ 23 (ಯುಎನ್‍ಐ) ಸಂಸತ್ತಿನ ಮಿತಿಗಳನ್ನು ಮೀರಿ ಪ್ರಸ್ತುತ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

 Sharesee more..
ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

ಶರದ್ ಪವಾರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್, ಚುನಾವಣಾ ಆಯೋಗ ಸ್ಪಷ್ಟನೆ

23 Sep 2020 | 5:07 PM

ನವದೆಹಲಿ, ಸೆ 23(ಯುಎನ್ಐ) ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ( ಎನ್ ಸಿ ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟೀಸ್ ನೀಡಬೇಕೆಂದು ತಾನು ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿರಲಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ.

 Sharesee more..
ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

23 Sep 2020 | 4:51 PM

ಬೀಜಿಂಗ್, ಸೆ 23(ಯುಎನ್ಐ) ಚೀನಾ ಎಂದಿಗೂ ಆಧಿಪತ್ಯ ಸಾಧಿಸಲು ಬಯಸುವುದಿಲ್ಲ... ಶೀತಲ ಸಮರ ಇಲ್ಲವೇ ಉಷ್ಣ ಸಮರಗಳ ಅಗತ್ಯ ತಮಗಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

 Sharesee more..
ದೇಶದಲ್ಲಿ 24 ಗಂಟೆಗಳಲ್ಲಿ 83,347 ಹೊಸ ಕೊರೊನಾ ಪ್ರಕರಣಗಳು

ದೇಶದಲ್ಲಿ 24 ಗಂಟೆಗಳಲ್ಲಿ 83,347 ಹೊಸ ಕೊರೊನಾ ಪ್ರಕರಣಗಳು

23 Sep 2020 | 4:43 PM

ನವದೆಹಲಿ, ಸೆ 23(ಯುಎನ್ಐ) ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 9,53,683 ಲಕ್ಷ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, 83,347 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..