Sunday, Sep 27 2020 | Time 03:40 Hrs(IST)
Special Share

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಅಸ್ಸಾಂನಲ್ಲಿ ತೀವ್ರಗೊಂಡ ಪ್ರತಿಭಟನೆ: ಸಿಎಬಿಗೆ ಎರಡು ಬಲಿ

ಗುವಾಹಟಿ, ಡಿ.12 (ಯುಎನ್ಐ) ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯ ವೇಳೆ ಗಾಯಗೊಂಡು ಗುವಾಹಟಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಇಬ್ಬರು ಪ್ರತಿಭಟನಕಾರರು ಸಾವನ್ನಪ್ಪಿದ್ದಾರೆ.
ಸಿಎಬಿ ವಿರೋಧಿ ಪ್ರತಿಭಟನೆಗಳು ರಾಜ್ಯಾದ್ಯಂತ ತೀವ್ರಗೊಂಡಿದ್ದು, ಗುವಾಹಟಿ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆ ತೀವ್ರಗೊಂಡಿರುವ ಬೀದಿಗಳಲ್ಲಿ ಸೈನ್ಯವನ್ನು ಕರೆಸಿಕೊಂಡು ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸಲಾಗುತ್ತಿದೆ.
ಬ್ರಹ್ಮಪುತ್ರ ಕಣಿವೆಯ ಬಹುತೇಕ ಎಲ್ಲಾ ಭಾಗಗಳಲ್ಲಿ ಸ್ವಯಂಪ್ರೇರಿತ ಬಂದ್‌ ಆಚರಿಸಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ವಿಮಾನ ಮತ್ತು ರೈಲ್ವೆ ಸೇವೆಗಳಿಗೆ ಅಡಚಣೆಯಾಗಿದ್ದು, ಗುವಾಹಟಿ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಹಲವು ವಿಮಾನಗಳು ಸೇವೆಗಳು ರದ್ದುಗೊಂಡಿವೆ.
ಈಶಾನ್ಯ ರಾಜ್ಯಗಳಲ್ಲಿನ ಎಲ್ಲಾ ಕಡಿಮೆ ದೂರ ಸಂಚರಿಸುವ ಪ್ರಯಾಣಿಕರ ರೈಲುಗಳನ್ನು ಗುರುವಾರ ಮತ್ತು ಶುಕ್ರವಾರ ರದ್ದುಪಡಿಸಲಾಗಿದೆ. ದಿಬ್ರುಗರ್‌, ತಿನ್ಸುಕಿಯಾ, ಸಿಲ್ಚಾರ್ ಮತ್ತು ಅಗರ್ತಲಾಕ್ಕೆ ಮತ್ತು ಅಲ್ಲಿಂದ ಬರುವ ದೂರದ ಪ್ರಯಾಣದ ಮೇಲ್ ಅಥವಾ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲುಗಳನ್ನು ಅಲ್ಪಾವಧಿಗೆ ರದ್ದುಗೊಳಿಸಲಾಗಿದೆ.
ರಾಜ್ಯಪಾಲ ಜಗದೀಶ್ ಮುಖಿ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದು, ಸಾರ್ವಜನಿಕರು ಸಂಯಮ ಪಾಲಿಸುವಂತೆ ವಿನಂತಿಸಿಕೊಂಡಿದ್ದಾರೆ.


ಸಿಎಬಿ ವಿಷಯದಲ್ಲಿ ಜನರ ಆಕ್ರೋಶಕ್ಕೆ ತುತ್ತಾಗಿರುವ ಮುಖ್ಯಮಂತ್ರಿ ಸೋನೊವಾಲ್, ಒಂದು ವಿಭಾಗದ ಜನರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಮತ್ತು ಸಿಎಬಿಯ ನೆಪದಲ್ಲಿ ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸಂಸ್ಕೃತಿ, ಭಾಷೆಯನ್ನು ರಕ್ಷಿಸುವ ಸರ್ಕಾರ ಬದ್ಧವಾಗಿದ್ದು, ಅಸ್ಸಾಂ ಒಪ್ಪಂದವನ್ನು ಜಾರಿಗೆ ತರುವ ಮೂಲಕ ಅಸ್ಸಾಂ ಜನರ ರಾಜಕೀಯ ಮತ್ತು ಭೂ ಹಕ್ಕುಗಳು ರಕ್ಷಿಸಲಾಗುವುದು ಎಂದು ಅಭಯ ನೀಡಿದ್ದಾರೆ.
ಯುಎನ್ಐ ಎಎಚ್ 2150
More News
ಡ್ರಗ್‌ ಮಾಫಿಯಾ; ದೀಪಿಕಾ, ಸಾರಾ, ಶ್ರದ್ಧಾ ವಿಚಾರಣೆ

ಡ್ರಗ್‌ ಮಾಫಿಯಾ; ದೀಪಿಕಾ, ಸಾರಾ, ಶ್ರದ್ಧಾ ವಿಚಾರಣೆ

26 Sep 2020 | 8:27 PM

ಮುಂಬೈ, ಸೆ 26 (ಯುಎನ್ಐ) ಡ್ರಗ್‌ ಸೇವನೆ ಮತ್ತು ವಿತರಣೆ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಶನಿವಾರ ಮದ್ಯವ್ಯಸನ ಮುಂಬೈನ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.

 Sharesee more..
ವ್ಯಭಿಚಾರ ಅಪರಾಧ ವಲ್ಲ  : ಮುಂಬೈ ಹೈಕೋರ್ಟ್

ವ್ಯಭಿಚಾರ ಅಪರಾಧ ವಲ್ಲ : ಮುಂಬೈ ಹೈಕೋರ್ಟ್

26 Sep 2020 | 8:10 PM

ಮುಂಬೈ, ಸೆ 26(ಯುಎನ್ಐ) ವ್ಯಭಿಚಾರ ಅಪರಾಧ ವೆಂದು ಯಾವುದೇ ಕಾನೂನಿನಲ್ಲೂ ಇಲ್ಲ, ತಮಗೆ ಇಷ್ಟವಾದ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಮಹಿಳೆಯರು ಹೊಂದಿದ್ದಾರೆ ಎಂದು ಬಾಂಬೆ ಹೈಕೋರ್ಟ್ ವ್ಯಾಖ್ಯಾನಿಸಿದೆ.

 Sharesee more..
ಮಾಜಿ ಪ್ರಧಾನಿ ಡಾ  ಮನ್ ಮೋಹನ್ ಸಿಂಗ್ ಗೆ ಪ್ರಧಾನಿ ಮೋದಿ, ರಾಹಲ್ ಗಾಂಧಿ ಜನ್ಮದಿನ ಶುಭಾಶಯ

ಮಾಜಿ ಪ್ರಧಾನಿ ಡಾ ಮನ್ ಮೋಹನ್ ಸಿಂಗ್ ಗೆ ಪ್ರಧಾನಿ ಮೋದಿ, ರಾಹಲ್ ಗಾಂಧಿ ಜನ್ಮದಿನ ಶುಭಾಶಯ

26 Sep 2020 | 6:20 PM

ನವದೆಹಲಿ, ಸೆ 26(ಯುಎನ್ಐ) 88ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟರ್ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

 Sharesee more..