Wednesday, Feb 26 2020 | Time 08:51 Hrs(IST)
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಪ್ರಧಾನಿ ಮೋದಿ- ನೋಬೆಲ್‌ ಪ್ರಶಸ್ತಿ ಪುರಸ್ಕೃತ ರಿಚರ್ಡ್‌ ಥೇಲರ್‌ ಮಾತುಕತೆ

ಪ್ರಧಾನಿ ಮೋದಿ- ನೋಬೆಲ್‌ ಪ್ರಶಸ್ತಿ ಪುರಸ್ಕೃತ ರಿಚರ್ಡ್‌ ಥೇಲರ್‌ ಮಾತುಕತೆ
ಪ್ರಧಾನಿ ಮೋದಿ- ನೋಬೆಲ್‌ ಪ್ರಶಸ್ತಿ ಪುರಸ್ಕೃತ ರಿಚರ್ಡ್‌ ಥೇಲರ್‌ ಮಾತುಕತೆ

ನವದೆಹಲಿ, ಜ.9 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನೊಬೆಲ್ ಪ್ರಶಸ್ತಿ ವಿಜೇತ ರಿಚರ್ಡ್ ಥೇಲರ್ ಅವರನ್ನು ಭೇಟಿಯಾಗಿ ಸ್ವಚ್ಛತೆ, ಗೀವ್‌ ಇಟ್ ಅಪ್‌, ಡಿಜಿಟಲ್‌ ವರ್ಗಾವಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಮಾನವ ವರ್ತನೆ ಅರ್ಥಶಾಸ್ತ್ರ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ನೊಬೆಲ್ ಪ್ರಶಸ್ತಿ ವಿಜೇತ ರಿಚರ್ಡ್ ಥೇಲರ್ ಅವರೊಂದಿಗೆ ಸಂವಹನ ನಡೆಸಿದರು. ಅವರ ಕೆಲಸದ ಆಸಕ್ತಿದಾಯಕ ಅಂಶಗಳನ್ನು ತಿಳಿದುಕೊಂಡರು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ

ನಾವು ಮಾನವ ಆಸಕ್ತಿ ಸಿದ್ಧಾಂತಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಿದೆವು. ಸ್ವಚ್ಛತೆ, ಗಿವ್ ಇಟ್ ಅಪ್ ’ಮತ್ತು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ಅಪಾರ ಪರಿವರ್ತನೆಗಳಿಗೆ ಕಾರಣವಾಗಿವೆ ಎಂದು ಅವರು ಬರೆದಿದ್ದಾರೆ.

ಮಾನವ ವರ್ತನೆಯ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಥೇಲರ್ ಅವರಿಗೆ 2017 ರಲ್ಲಿ ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿ ನೀಡಲಾಯಿತು.

ತನ್ನ ನೊಬೆಲ್ ಬಹುಮಾನ ಪ್ರಕಟಣೆಯಲ್ಲಿ, ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, "ಅವರ ಕೊಡುಗೆಗಳು ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವಿಕೆಯ ಆರ್ಥಿಕ ಮತ್ತು ಮಾನಸಿಕ ವಿಶ್ಲೇಷಣೆಗಳ ನಡುವೆ ಸೇತುವೆಯನ್ನು ನಿರ್ಮಿಸಿವೆ" ಎಂದು ಹೇಳಿದ್ದಾರೆ. ಹೊಸ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಕ್ಷೇತ್ರವನ್ನು ರಚಿಸುವಲ್ಲಿ ಅವರ ಪ್ರಾಯೋಗಿಕ ಸಂಶೋಧನೆಗಳು ಮತ್ತು ಸೈದ್ಧಾಂತಿಕ ಒಳನೋಟಗಳು ಪ್ರಮುಖವಾಗಿವೆ ಎಂದು ರಾಯಲ್ ಸ್ವೀಡಿಸ್ ಅಕಾಡಮಿ ತಿಳಿಸಿತ್ತು.

ಯುಎನ್ಐ ಎಎಚ್ 2130