Saturday, Jul 4 2020 | Time 16:56 Hrs(IST)
 • ಕುಲ್ಗಾಮ್‍ನಲ್ಲಿ ಮುಂದುವರೆದ ಕಾರ್ಯಾಚರಣೆ: ಎನ್‍ಕೌಂಟರ್‍ ನಲ್ಲಿ ಓರ್ವ ಉಗ್ರ ಹತ
 • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
 • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
 • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
 • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
 • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
 • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
 • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
 • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
 • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
 • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
 • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
 • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
 • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
 • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
National Share

ಪ್ರಸ್ತಾಪಿತ ಎನ್‌ಪಿಆರ್‌ನಲ್ಲಿ ಪ್ಯಾನ್‌ ಕಾರ್ಡ್ ಕೈಬಿಟ್ಟು ಮಾತೃಭಾಷೆ ಸೇರ್ಪಡೆ

ನವದೆಹಲಿ, ಜ.15 (ಯುಎನ್‌ಐ) ಏಪ್ರಿಲ್‌ನಿಂದ ಪ್ರಾರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಗಾಗಿ ಇತ್ತೀಚೆಗೆ ಮುಕ್ತಾಯಗೊಂಡ ಎನ್‌ಪಿಆರ್‌ನ ಪೂರ್ವ-ಸಿದ್ಧತಾ ಪ್ರಕ್ರಿಯೆಯ ಸಂದರ್ಭದಲ್ಲಿ, ಪ್ರಸ್ತಾವಿತ ದತ್ತಾಂಶ ಸಂಗ್ರಹದಲ್ಲಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅನ್ನು ಭಾರತದ ರಿಜಿಸ್ಟ್ರಾರ್ ಜನರಲ್ (ಆರ್‌ಜಿಐ) ಹೊರಗಿಟ್ಟಿದೆ ಎಂದು ಗೃಹ ಸಚಿವಾಲಯದ ಮೂಲವು ಬುಧವಾರ ಇಲ್ಲಿ ತಿಳಿಸಿದೆ.
ಜನರ ಆತಂಕಗಳನ್ನು ಅರಿತುಕೊಂಡು, ಆರ್‌ಜಿಐ ಮುಂಬರುವ ಎನ್‌ಪಿಆರ್ ನವೀಕರಣದಲ್ಲಿ ಪ್ಯಾನ್‌ನ ಅಗತ್ಯವನ್ನು ಕೈಬಿಟ್ಟಿದೆ ಮತ್ತು ಮಾತೃಭಾಷೆಗೆ ಸಂಬಂಧಿಸಿದ ಹೊಸ ಷರತ್ತು ಸೇರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಎನ್‌ಪಿಆರ್ ಪ್ರಕ್ರಿಯೆ ನವೀಕರಣದ ಕುರಿತು ಇತ್ತೀಚೆಗೆ ಮುಕ್ತಾಯಗೊಂಡ ಪೂರ್ವ ಪರೀಕ್ಷೆ ಅಥವಾ ವಿಚಾರಣೆಯ ಸಮಯದಲ್ಲಿ, ಮೊಬೈಲ್ ದಾಖಲೆ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ ಮತ್ತು ಪ್ಯಾನ್‌ನಂತಹ ಐದು ದಾಖಲೆಗಳ ಸಂಖ್ಯೆಗಳನ್ನು ಕೋರಲಾಗಿದೆ.
ಕೇಂದ್ರದ ಅಧಿಸೂಚನೆಯ ಪ್ರಕಾರ, ಎನ್‌ಪಿಆರ್ ನವೀಕರಣ ಪ್ರಕ್ರಿಯೆಯನ್ನು ಏಪ್ರಿಲ್ 1 ಮತ್ತು ಸೆಪ್ಟೆಂಬರ್ 30 ರ ನಡುವೆ ಎಲ್ಲಾ ರಾಜ್ಯಗಳು ಮಾಡಲಿವೆ. ಈ ಆರು ತಿಂಗಳ ಅವಧಿಯಲ್ಲಿ ಈ ದತ್ತಾಂಶ ಸಂಗ್ರಹವನ್ನು 45 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ರಾಜ್ಯಗಳಿಗೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ 45 ದಿನಗಳ ಅವಧಿಯನ್ನು ನಿಗದಿಪಡಿಸಲು ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎನ್‌ಪಿಆರ್ ದತ್ತಾಂಶ ನವೀಕರಣ ಪ್ರಕ್ರಿಯೆಯ ಪೂರ್ವ- ಸಿದ್ಧತೆಯನ್ನು ದೇಶದ 73 ಜಿಲ್ಲೆಗಳಲ್ಲಿ ನಡೆಸಲಾಯಿತು ಮತ್ತು 30 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಡೇಟಾವನ್ನು ಆರ್‌ಜಿಐ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದಾಖಲಿಸಿದ್ದಾರೆ.
ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ನವೀಕರಿಸುವ ಎನ್‌ಪಿಆರ್ ಪ್ರಕ್ರಿಯೆಯನ್ನು ಮರು-ಅಧಿಸೂಚನೆ ಹೊರಡಿಸಿವೆ ಎಂದು ಗೃಹ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.
ಯಾವುದೇ ಬಯೋ ಮೆಟ್ರಿಕ್ ಇರುವುದಿಲ್ಲ ಮತ್ತು ಎನ್‌ಪಿಆರ್‌ಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಮತ್ತೆ ಪುನರುಚ್ಚರಿಸಿದರು.
ದೇಶದಲ್ಲಿ ಕೊನೆಯ ಎನ್‌ಪಿಆರ್ ನವೀಕರಣವು 2015 ರಲ್ಲಿ ನಡೆದಿತ್ತು.
ಕಳೆದ ಎನ್‌ಪಿಆರ್‌ನ ದತ್ತಾಂಶವನ್ನು ಸರ್ಕಾರವು 'ಆಯುಷ್ಮಾನ್ ಭಾರತ್' ಮತ್ತು ಅನೇಕ ರಾಜ್ಯಗಳಲ್ಲಿ ಪಡಿತರ ಚೀಟಿ ತಯಾರಿಕೆ ಮುಂತಾದ ವಿವಿಧ ಕಲ್ಯಾಣ ಕ್ರಮಗಳಲ್ಲಿ ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎನ್ಐ ಎಎಚ್ 2032