Friday, Oct 30 2020 | Time 07:39 Hrs(IST)
Special Share

ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ

ಆಗ್ರಾ, ಸಪ್ಟೆಂಬರ್ 21(ಯುಎನ್ಐ ) ಕೊರೊನಾಸೋಂಕು ಹರಡುವಿಕೆ ಭೀತಿ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಉತ್ತರ ಪ್ರದೇಶ ಸರಕಾರ ಸೋಮವಾರದಿಂದ ಅನುಮತಿ ನೀಡಿದೆ.

ಉತ್ತರ ಪ್ರದೇಶದಲ್ಲಿ ಸೋಮವಾರದಿಂದ ಅನ್ ಲಾಕ್ 4.0 ಜಾರಿಗೆ ಬರಲಿದೆ.ಆಗ್ರಾದಲ್ಲಿ ಇರುವ ಪ್ರೇಮಸೌಧ ತಾಜ್ ಮಹಲ್ ಗೆ ಸಾರ್ವಜನಿಕರ ಪ್ರವೇಶಕ್ಕೆ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. ಕೊವಿಡ್-19 ಹರಡುವಿಕೆ ಭೀತಿಯಲ್ಲಿ ಮುಚ್ಚಲಾಗಿದ್ದ ತಾಜ್ ಮಹಲ್ ನ್ನು ಮತ್ತೊಮ್ಮೆ ತೆರೆಯಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಆದರೆ ಪ್ರೇಮಸೌಧ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಅನುಸರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 5 ಸಾವಿರದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 5758 ಜನರಿಗೆ ಕೊವಿಡ್-19 ಸೋಂಕು ತಗುಲಿದೆ.
ಯುಎನ್ಐ ಕೆಎಸ್ಆರ್ 0915