Monday, Jul 13 2020 | Time 04:59 Hrs(IST)
Special Share

ಪೂರ್ವ ಅಫ್ಘಾನಿಸ್ತಾನ : ಟ್ರಕ್ ಬಾಂಬ್ ಸ್ಫೋಟಕ್ಕೆ 5 ಸಾವು, 46 ಮಂದಿಗೆ ಗಾಯ

ಗಾರ್ಡೆಜ್, ಮೇ 14 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಪೂರ್ವ ಪಕ್ತಿಯಾ ಪ್ರಾಂತ್ಯದ ರಾಜಧಾನಿ ಗಾರ್ಡೆಜ್ ನಗರದಲ್ಲಿ ಗುರುವಾರ ಭಾರಿ ಟ್ರಕ್ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಐದು ನಾಗರಿಕರು ಸಾವನ್ನಪ್ಪಿದ್ದಾರೆ. ಮತ್ತು ಹಲವಾರು ಮಿಲಿಟರಿ ಸಿಬ್ಬಂದಿ ಸೇರಿದಂತೆ 46 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
"ಸ್ಥಳೀಯ ಸಮಯ ಬೆಳಿಗ್ಗೆ 08:30 ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ದಪ್ಪ ಬೂದು ಹೊಗೆ ವ್ಯಾಪಿಸಿತ್ತು. ಘಟನೆಯ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ನೋವಿಗೆ ಈಡಾಗುವವರ ಸಂಖ್ಯೆ ಏರಿಕೆಯಾಗಬಹುದು ಎಂಬ ಆತಂಕವನ್ನು ಪ್ರಾಂತೀಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.
"ಭಯೋತ್ಪಾದಕನು ರಕ್ಷಣಾ ಸಚಿವಾಲಯದ ಪ್ರಾಂತೀಯ ನಿರ್ದೇಶನಾಲಯದ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಆದರೆ ಅವನನ್ನು ಸೇನಾ ಸೈನಿಕರು ತಡೆದ ನಂತರ ಪ್ರಾಂತೀಯ ಮಿಲಿಟರಿ ನ್ಯಾಯಾಲಯ ಮತ್ತು ಪ್ರಾಂತೀಯ ಹಣಕಾಸು ಮತ್ತು ತೆರಿಗೆ ಕಚೇರಿಗಳ ಬಳಿ ಟ್ರಕ್ ಬಾಂಬ್ ಸ್ಫೋಟಿಸಿದ" ಎಂದು ಅವರು ಮಾಹಿತಿ ನೀಡಿದ್ದಾರೆ.
ಸ್ಫೋಟವು ಭಾರಿ ವಿನಾಶಕ್ಕೆ ಕಾರಣವಾಯಿತು, ಹಲವಾರು ಕಟ್ಟಡಗಳು, ಅಂಗಡಿಗಳು ಮತ್ತು ವಾಹನಗಳನ್ನು ನಾಶಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಭಯೋತ್ಪಾದನಾ ಗುಂಪು ಈ ಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ.
ಅಫ್ಘನ್ನರು ರಂಜಾನ್ ಉಪವಾಸವನ್ನು ಆಚರಿಸುತ್ತಿರುವಾಗ ಇತ್ತೀಚೆಗೆ ನಡೆದ ದಾಳಿ ಇದಾಗಿದೆ.
ಯುಎನ್‍ಐ ಎಸ್‍ಎ ವಿಎನ್ 1258
More News
ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

12 Jul 2020 | 8:41 PM

ಲಕ್ನೋ, ಜುಲೈ ೧೨ (ಯುಎನ್‌ಐ) ಭೂಗತ ಪಾತಕಿ ವಿಕಾಸ್ ದುಬೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ಜರುಗಿಸಬೇಕು.

 Sharesee more..
ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್  ಸುರೇಶ್ ಕುಮಾರ್

ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್ ಸುರೇಶ್ ಕುಮಾರ್

12 Jul 2020 | 6:42 PM

ಕುಕ್ಕೆ ಸುಬ್ರಮಣ್ಯ,ಜುಲೈ ೧೨(ಯುಎನ್ಐ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗಳು ಜುಲೈ ೧೮ ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.

 Sharesee more..
ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ  ೨೦ ಚಿನ್ನದ  ಬಿಸ್ಕೆಟ್  !

ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ೨೦ ಚಿನ್ನದ ಬಿಸ್ಕೆಟ್ !

12 Jul 2020 | 6:35 PM

ತಿರುಮಲ, ಜುಲೈ ೧೨(ಯುಎನ್‌ಐ) ತಿರುಮಲ- ತಿರುಪತಿ ದೇವಸ್ಥಾನ ಆಸ್ತಿ ಪಾಸ್ತಿಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ನಂತರ ಶ್ವೇತ ಪತ್ರ ಪ್ರಕಟಿಸಲಾಗುವುದು ಎಂದು ಟಿಟಿಡಿ ಇ ಓ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

12 Jul 2020 | 6:19 PM

ನವದೆಹಲಿ, ಜುಲೈ 12 (ಯುಎನ್ಐ) ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8.50 ಲಕ್ಷದ ಸನಿಹ ತಲುಪಿದೆ.

 Sharesee more..
ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

12 Jul 2020 | 6:11 PM

ಮುಂಬೈ, ಜು 12 (ಯುಎನ್ಐ) ಕೋವಿಡ್ ಸೋಂಕು ದೃಢಪಟ್ಟಿರುವ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ, ನಟ ಅಭಿಷೇಕ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದ ನಾನಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 Sharesee more..