Monday, Jun 1 2020 | Time 00:35 Hrs(IST)
Karnataka Share

ಪ್ಲಾಸ್ಟಿಕ್ ಆಯುವ 450 ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ಗಳ ವಿತರಣೆ

ಪ್ಲಾಸ್ಟಿಕ್ ಆಯುವ 450 ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ಗಳ ವಿತರಣೆ
ಪ್ಲಾಸ್ಟಿಕ್ ಆಯುವ 450 ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ಗಳ ವಿತರಣೆ

ಧಾರವಾಡ , ಮೇ 23 ( ಯುಎನ್ಐ) ಕೊರೊನಾ ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ , ಪ್ಲಾಸ್ಟಿಕ್ ಆಯುವ 450 ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ ಗಳ ವಿತರಿಸಲಾಯಿತು.

ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಷನ್ ಇಂಡಿಯಾ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಗ್ರಾಮೀಣ ವಿಕಾಸ ಫೌಂಡೇಷನ್ ಧಾರವಾಡ ಇವರುಗಳ ಸಂಯುಕಾಶ್ರಯದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ನಗರದ ಕೊಳಚೆ ಪ್ರದೇಶದ ಪ್ಲಾಸ್ಟಿಕ್ ಆಯುವ ಕುಟುಂಬಗಳಿಗೆ ಉಚಿತ ಅಕ್ಕಿ, ಬೇಳೆ, ರವಾ, ಗೋಧಿಹಿಟ್ಟು, ಎಣ್ಣೆ ಮುಂತಾದ ಕಿರಾಣಿ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು.

ಶಾಸಕ ಅರವಿಂದ ಬೆಲ್ಲದ ಅವರು , ತಮ್ಮ ಕುಟುಂಬದ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸೋಪು ಉಪಯೋಗಿಸಬೇಕು ಮತ್ತು ಕೈಗಳನ್ನು ತೊಳೆದುಕೊಳ್ಳಬೇಕು, ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜನರಿಗೆ ತಿಳಿಸಿದರು.

ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಶನ ಇಂಡಿಯಾ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ವಕೀಲರು ಮತ್ತು ಅಸಿಸ್ಟಂಟ್ ಸಾಲಿಸಿಟರ್ ಜನರಲ್ ಜೋಶಿ, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಹೀನಾ ಖಾನ್, ಮಹಿಳಾ ಕಲ್ಯಾಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರಾವಣಿ ಪವಾರ, ಜಗದೀಶ ನಾಯಕ್, ಗಿರೀಶ ಮತ್ತಿಕೊಪ್ಪ, ಮಲ್ಲಪ್ಪ ಮಾನಗಾಂವಿ, ಬಸವರಾಜ ಯಲಿಬಳ್ಳಿ ಉಪಸ್ಥಿತರಿದ್ದರು.

ಯುಎನ್ಐ ಪಿಕೆ ಎಎಚ್ 1746