Sunday, Aug 18 2019 | Time 04:38 Hrs(IST)
Sports Share

ಫುಟ್ಬಾಲ್: ಉತ್ತರ ಕೊರಿಯಾ ವಿರುದ್ಧ ಸೋತ ಭಾರತ

ಅಹಮದಾಬಾದ್, ಜು 13 (ಯುಎನ್ಐ)- ಇಲ್ಲಿ ನಡೆದಿರುವ ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ 2-5 ರಿಂದ ಉತ್ತರ ಕೊರಿಯಾ ವಿರುದ್ಧ ಸೋಲು ಕಂಡಿದೆ.

ಹಾಲಿ ಚಾಂಪಿಯನ್ ಭಾರತ, ಪ್ರಸಕ್ತ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿದೆ. ಇದಕ್ಕೂ ಮೊದಲು ತಜಿಕಿಸ್ತಾನ್ ವಿರುದ್ಧ 4-2 ರಿಂದ ಆಘಾತ ಕಂಡಿತ್ತು. ಇದರಿಂದೊಂಗೆ ಛೆಟ್ರಿ ಪಡೆ ಮುಂದಿನ ಕನಸು ಕಮರಿದಂತಾಗಿದೆ. ಫೈನಲ್ ಪ್ರವೇಶ ಪಡೆಯಲು ಭಾರತಕ್ಕೆ ಕಠಿಣ ಸವಾಲಾಗಿದೆ. ತಜಿಕಿಸ್ತಾನ್ ಮುಂದಿನ ಪಂದ್ಯದಲ್ಲಿ ಸೋಲು ಅನುಭವಿಸಿದರೆ, ಭಾರತ ಸಿರಿಯಾ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸುವ ಅನಿವಾರ್ಯತೆ ಇದೆ.

ಆರಂಭದಲ್ಲೇ ಉತ್ತರ ಕೊರಿಯಾ ಭರ್ಜರಿ ಪ್ರದರ್ಶನವನ್ನು ನೀಡಿ ಭಾರತದ ಮೇಲೆ ಒತ್ತಡವನ್ನು ಹೇರಿತು. ಮೊದಲಾವಧಿಯಲ್ಲಿ 3-0 ಹಿನ್ನಡೆಯೊಂದಿಗೆ ಭಾರತ, ಎರಡನೇ ಅವಧಿ ಪ್ರವೇಶಿಸಿತು. ಈ ಅವಧಿಯ ಆರಂಭದಲ್ಲಿ ಭಾರತ-ಕೊರಿಯಾ ಗಳು ತಲಾ ಒಂದು ಗೋಲು ಬಾರಿಸಿದವು. 71ನೇ ನಿಮಿಷದಲ್ಲಿ ಸುನಿಲ್ ಛೆಟ್ರಿ ಒಂದು ಗೋಲು ದಾಖಲಿಸಿದರೆ, ಹೆಚ್ಚುವರಿ ಸಮಯದಲ್ಲಿ ಕೊರಿಯಾ ಮತ್ತೊಂದು ಗೋಲು ದಾಖಲಿಸಿ ಜಯ ಸಾಧಿಸಿತು.
ಯುಎನ್ಐ ವಿಎನ್ಎಲ್ ಜಿಎಸ್ಆರ್ 1120