Monday, Jun 1 2020 | Time 02:29 Hrs(IST)
Flash Share

ಫ್ರಾನ್ಸ್, ಜರ್ಮನಿ ಮತ್ತು ಆಸ್ಟ್ರೀಯಾ ಗಡಿ ತೆರೆಯಲಿರುವ ಸ್ವಿಟ್ಜರ್‍ ಲ್ಯಾಂಡ್‍

ಜಿನೀವಾ, ಮೇ 14(ಕ್ಸಿನುವಾ)- ಕೊವಿಡ್‍-19 ತಡೆಗಟ್ಟುವಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಆಸ್ಟ್ರಿಯಾಗಳ ಗಡಿಯನ್ನು ಮೇ 15ರಂದು ತೆರೆಯಲು ಸ್ವಿಟ್ಜರ್‍ ಲ್ಯಾಂಡ್‍ ಉದ್ದೇಶಿಸಲಾಗಿದೆ ಎಂದು ಫೆಡರಲ್‍ ಕೌನ್ಸಿಲ್‍ ಗುರುವಾರ ಪ್ರಕಟಿಸಿದೆ.

ಫೆಡರಲ್‍ ಕೌನ್ಸಿಲರ್ ಮತ್ತು ಕಾನೂನು ಮತ್ತು ಪೊಲೀಸ್ ನ ಫೆಡರಲ್‍ ಇಲಾಖೆಯ ಮುಖ್ಯಸ್ಥ ಕರಿನ್‍ ಕೆಲ್ಲರ್ ಈ ವಿಷಯ ತಿಳಿಸಿ, ಗಡಿಯನ್ನು ಮುಕ್ತಗೊಳಿಸುವ ನಿರ್ಧಾರವನ್ನು ಮೂರೂ ದೇಶಗಳ ಸಮ್ಮತಿ ಪಡೆದು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗದ ತೀವ್ರತೆ ಸ್ವಲ್ಪ ಕಡಿಮೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಫ್ರಾನ್ಸ್, ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿ ಕಂಟೈನ್‍ಮೆಂಟ್‍ ವಲಯಗಳನ್ನು ಮುಕ್ತಗೊಳಿಸಲಾಗಿದ್ದು, ಸ್ವಿಟ್ಜರ್‍ ಲ್ಯಾಂಡ್‍ನಲ್ಲೂ ಸಾಂಕ್ರಾಮಿಕ ಸೋಂಕಿನ ಮಟ್ಟದಲ್ಲಿ ಇದೇ ಪರಿಸ್ಥಿತಿ ಇದೆ. ಆದರೆ, ಇಟಲಿಯಲ್ಲಿ ಪರಿಸ್ಥಿತಿ ಬೇರೆಯದೇ ರೀತಿಯಿದ್ದು, ಅಲ್ಲಿ ಓಡಾಟಕ್ಕೆ ಇನ್ನೂ ನಿರ್ಬಂಧಗಳಿವೆ. ಈ ಹಿನ್ನೆಲೆಯಲ್ಲಿ ಇಟಲಿಯೊಂದಿಗೆ ಗಡಿ ತೆರೆಯುವ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ನೆರೆಯ ಮೂರು ದೇಶಗಳೊಂದಿಗೆ ಸ್ವಿಟ್ಜರ್‍ ಲ್ಯಾಂಡ್‍ ಗಡಿಯನ್ನು ಮುಕ್ತಗೊಳಿಸುವುದರಿಂದ ಹೆಚ್ಚಿನ ಅಪಾಯದ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಸೇವೆಗಳ ಕಾರ್ಯಕ್ರಮದ ಮುಖ್ಯಸ್ಥ ಮೈಖೆಲ್‍ ರಯಾನ್‍ ಹೇಳಿದ್ದಾರೆ.

ಬುಧವಾರದವರೆಗೆ ಸ್ವಿಟ್ಜರ್‍ ಲ್ಯಾಂಡ್‍ ನಲ್ಲಿ ಕೊವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 30,413ಕ್ಕೆ ಏರಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,564ಕ್ಕೆ ಏರಿದೆ.
uni sls 0838

ಯುಎನ್‍ಐ ಎಸ್‍ಎಲ್‍ಎಸ್ 0836
There is no row at position 0.