Friday, Feb 28 2020 | Time 09:35 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಫಾಸ್ಟ್ ಟ್ಯಾಗ್ ಮೂಲಕ 52 ಕೋಟಿ

ಫಾಸ್ಟ್ ಟ್ಯಾಗ್ ಮೂಲಕ 52 ಕೋಟಿ
ಫಾಸ್ಟ್ ಟ್ಯಾಗ್ ಮೂಲಕ 52 ಕೋಟಿ

ನವದೆಹಲಿ, ಡಿಸೆಂಬರ್ 31 (ಯುಎನ್‌ಐ) ಡಿಸೆಂಬರ್ 15 ರಂದು ಪರಿಚಯಿಸಿದ ಮೊದಲ ಹದಿನೈದು ದಿನಗಳಲ್ಲೇ ಫಾಸ್ಟ್ಯಾಗ್ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು 52 ಕೋಟಿ ರೂ.ಗಳನ್ನು ದಾಟಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ತಿಳಿಸಿದೆ.

ದೇಶದಲ್ಲಿ ದಿನನಿತ್ಯದ ಫಾಸ್ಟ್‌ಟ್ಯಾಗ್ ಬಳಕೆ ಹೆಚ್ಚಾಗಿದ್ದು ಈಗಾಗಲೇ 1.15 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳ ಮೂಲಕ ಪ್ರಯಾಣಿಕರಿಗೆ ಫಾಸ್ ಟ್ಯಾಗ್ ಸುಗಮ ಪ್ರಯಾಣವನ್ನು ಒದಗಿಸುತ್ತಿರುವುದರಿಂದ 1.15 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ಈಗಾಗಲೇ ನೀಡಲಾಗಿದ್ದು, ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ವಿತರಿಸಲಾಗುತ್ತಿದೆ.

ಈಗಾಗಲೇ ಫಾಸ್ಟ್‌ಟ್ಯಾಗ್‌ಗಳ ವಹಿವಾಟು ಸಂಖ್ಯೆ 30 ಲಕ್ಷ ದಾಟಿರುವುದರಿಂದ, ದೈನಂದಿನ ವಹಿವಾಟಿನ ಮೌಲ್ಯದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ 52 ಕೋಟಿ ರೂ.ಗಳನ್ನು ದಾಟಿದೆ ಎಂದು ಸಚಿವಾಲಯ ತಿಳಿಸಿದೆ.

ಯುಎನ್ಐ ಡಿಸಿ ವಿಎನ್ 1814