Monday, Jun 1 2020 | Time 02:48 Hrs(IST)
Special Share

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ  ಡಿಜಿಪಿ ಪ್ರವೀಣ್ ಸೂದ್  ಮನವಿ
ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

ಬೆಂಗಳೂರು, ಮಾ ೨೮(ಯುಎನ್‌ಐ) ರಾಷ್ಟ್ರೀಯ ಲಾಕ್ ಡೌನ್ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸಲು ಬಯಸುವ ಪರೋಪಕಾರಿಗಳು ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸಿದರೆ, ಅಗತ್ಯವಿರುವ ಜನರಿಗೆ ತಲುಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

ಸಂಕಷ್ಟದ ಈ ಸಂದರ್ಭದಲ್ಲಿ ಬಡವರು, ನಿರಾಶ್ರಿತರಿಗೆ ಆಹಾರ ಒದಗಿಸಲು ಮುಂದೆ ಬರುವ ಲೋಕೋಪಕಾರಿಗಳು, ಬೇಯಿಸಿದ, ಪ್ಯಾಕ್ ಮಾಡಿದ, ಸರಳ ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳ ಬಳಿ ತಂದಿರಿಸಿದರೆ ಅದನ್ನು ಅರ್ಹ ಬಡವರಿಗೆ ತಲುಪಿಸಲಾಗುವುದು. ಸರಬರಾಜು ನ್ಯಾಯಯುತವಾಗಿ ನಡೆಸಲು ನೋಡಲ್ ಅಧಿಕಾರಿಯನ್ನು ಘೋಷಿಸಿ. ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಧಿಕೃತ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಅಗತ್ಯ ಕ್ರಮ ಜರುಗಿಸಿ, ನ್ಯಾಯಯುತ ವಿತರಣೆಯನ್ನು ಖಾತರಿ ಪಡಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ

ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವ ಹಿನ್ನಲೆಯಲ್ಲಿ ಹಸಿವಿನಿಂದ ಕಂಗೆಟ್ಟ ಬಡವರು,ಇನ್ನಿತರ ನಿರಾಶ್ರಿತ ಜನರಿಗೆ ಆಹಾರ, ತಿನಿಸು,ಕುಡಿಯುವ ನೀರು ಮತ್ತಿತರ ಅಗತ್ಯ ವಸ್ತುಗಳನ್ನು ವಿತರಿಸಲು ಬೆಂಗಳೂರು ಪೊಲೀಸರ ಕೈಗೊಂಡಿರುವ ಕ್ರಮ ದೇಶಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕೆಲ ಪೊಲೀಸ್ ಠಾಣೆಗಳು ಈಗಾಗಲೇ ದಾನಿಗಳಿಂದ ಆಹಾರ ಸಂಗ್ರಹಿಸಿ ಬಡವರು, ಅಗತ್ಯಿರುವವರಿಗೆ ವಿತರಿಸುತ್ತಿವೆ. ಕೆಲ ಠಾಣೆಗಳು ಅಡುಗೆ ಮಾಡುವವರನ್ನು ನೇಮಿಸಿಕೊಂಡು ಠಾಣೆಯ ಮಹಿಳಾ ಸಿಬ್ಬಂದಿಯ ನೆರವಿನೊಂದಿಗೆ ಆಹಾರ ಸಿದ್ದಪಡಿಸಿ ವಿತರಿಸುತ್ತಿದ್ದಾರೆ

ರಾಷ್ಟ್ರೀಯ ಲಾಕ್ ಡೌನ್ ಬಹುತೇಕ ದಿನಗೂಲಿ ಕಾರ್ಮಿಕರ ಜೀವನದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡಿದ್ದು, ಕೆಲಸ ಸಿಗದೆ ಹಸಿವಿನಿಂದ ಕಂಗೆಡುವಂತೆಮಾಡಿದೆ.

ಯುಎನ್‌ಐ ಕೆವಿಆರ್ ೨೦೧೩