Saturday, May 25 2019 | Time 04:54 Hrs(IST)
Election Share

ಬಡವರು ವೈದ್ಯಕೀಯ ವೆಚ್ಚದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ; ಮೋದಿ

ಬಡವರು ವೈದ್ಯಕೀಯ ವೆಚ್ಚದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ; ಮೋದಿ
ಬಡವರು ವೈದ್ಯಕೀಯ ವೆಚ್ಚದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ; ಮೋದಿ

ಡಿಯೋಘರ್ ಮೇ 15 (ಯುಎನ್ಐ) ಬಾಬಾ ಬೈದ್ಯನಾಥ್ ಧಾಮ ಸೇರಿದಂತೆ ಸಂತಲ್ ಪರಗಣ ಪ್ರದೇಶದ ಅಭಿವೃದ್ಧಿಯೇ ತಮ್ಮ ಸರ್ಕಾರದ ಆದ್ಯತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

ಕುಂದಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಾಬಾ ಧಾಮದ ಅಭಿವೃದ್ಧಿ ಕೆಲಸಗಳ ಜೊತೆಗೆ ರೈಲು, ರಸ್ತೆ ಮತ್ತು ವಾಯು ಮಾರ್ಗಗಳ ವಿಸ್ತರಣೆಗೂ ಆದ್ಯತೆ ನೀಡಲಾವುದು ಎಂದರು. ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು ಬಹು ಮಾದರಿಯ ಕೈಗಾರಿಕೆಗಳು ತಲೆ ಎತ್ತಿ ಸಾಹೆಬ್ಗಾಂಜ್ನ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

ಡಿಯೋಘರ್ ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಯು ಸಂತಲ್ ಪರಗಣ ಪ್ರದೇಶಕ್ಕೆ ಮಾತ್ರವಲ್ಲದೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಪ್ರಮುಖ ಆರೋಗ್ಯ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು.

ಇದೀಗ ಬಡಜನರು ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರಡಿ 5 ಲಕ್ಷದ ವರೆಗೂ ಚಿಕಿತ್ಸೆಯನ್ನು ಬಡ ಜನರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಬಡವರು ಬಡತನದಿಂದ ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ವೈದ್ಯಕೀಯ ವೆಚ್ಚಗಳನ್ನೂ ಭರಿಸಲು ಬಡ ಕುಟುಂಬಗಳಿಗೆ ಸಾಧ್ಯವಿರುವುದಿಲ್ಲ. ಹೀಗಿರುವಾಗ ಇಂತಹ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಆ ವೈದ್ಯಕೀಯ ವೆಚ್ಚ ಭರಿಸಿ ಮತ್ತಷ್ಟು ಬಡತನಕ್ಕೆ ಸಿಲುಕುತ್ತಾರೆ. ಆದರೀಗ ಬಡವರು ತಮ್ಮ ವೈದ್ಯಕೀಯ ವೆಚ್ಚದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಆರೋಗ್ಯದ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಯುಎನ್ಐ ಡಿಸಿ ಜಿಎಸ್ಆರ್ 1620

More News

ಪ್ರಧಾನಿ ಮೋದಿಗೆ ಶತ್ರುಘ್ನ ಸಿನ್ಹಾ ಅಭಿನಂದನೆ

24 May 2019 | 8:42 PM

 Sharesee more..
ರಾಷ್ಟ್ರಪತಿಯವರಿಂದ ಸರ್ಕಾರದ ರಾಜೀನಾಮೆ ಅಂಗೀಕಾರ: ಪ್ರಮಾಣ ವಚನ ಸ್ವೀಕರಿಸುವವರಿಗೆ ಮುಂದುವರೆಯಲು ಸೂಚನೆ

ರಾಷ್ಟ್ರಪತಿಯವರಿಂದ ಸರ್ಕಾರದ ರಾಜೀನಾಮೆ ಅಂಗೀಕಾರ: ಪ್ರಮಾಣ ವಚನ ಸ್ವೀಕರಿಸುವವರಿಗೆ ಮುಂದುವರೆಯಲು ಸೂಚನೆ

24 May 2019 | 8:41 PM

ನವದೆಹಲಿ ಮೇ 24 (ಯುಎನ್‌ಐ)-ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಸರ್ಕಾರದ ರಾಜೀನಾಮೆ ಅಂಗೀಕರಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೆ ಮುಂದುವರೆಯುವಂತೆ ಪ್ರಧಾನಿ ನರೇಂದ್ರಮೋದಿ ಹಾಗೂ ಸಚಿವ ಪರಿಷತ್‌ನ ಸದಸ್ಯರಿಗೆ ಮನವಿ ಮಾಡಿದ್ದಾರೆ.

 Sharesee more..