Wednesday, Jan 29 2020 | Time 02:14 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Entertainment Share

ಬನ್ಸಾಲಿ ಚಿತ್ರದಲ್ಲಿ ನಟಿಸುತ್ತಿಲ್ಲ ಕಾರ್ತಿಕ್

ಮುಂಬೈ, ಡಿ 4 (ಯುಎನ್ಐ) ಸಂಜಯ್ ಲೀಲಾ ಬನ್ಸಾಲಿ‌ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಟಿಸುತ್ತಿಲ್ಲವಂತೆ. ಹೌದು ಬಾಲಿವುಡ್ ನಲ್ಲಿ ಇದು ಬಿಸಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಕಾರ್ತಿಕ್ ಆರ್ಯನ್ ಅವರು ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಿಟೌನ್ ನಲ್ಲಿ ಕೇಳಿ ಬಂದಿತ್ತು.
ಆದರೀಗ ಬನ್ಸಾಲಿ ಅವರ ಪ್ರೊಡಕ್ಷನ್ ಸಿಇಓ ಸಾಯಿ ಪ್ರೇರಣಾ ಈ ಕುರಿತು ಪ್ರತಿಕ್ರಿಯಿಸಿದ್ದು, ಕಾರ್ತಿಕ್ ಹಾಗೂ ಬನ್ಸಾಲಿ ಅವರಿಬ್ಬರೂ ಜೊತೆಗೂಡಿ ಯಾವುದೇ ಚಿತ್ರ ಮಾಡುತ್ತಿಲ್ಲ. ಅದೆಲ್ಲ ಕೇವಲ ಗಾಳಿ ಸುದ್ದಿ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ.
ಅಷ್ಟೇ ಅಲ್ಲ ಬನ್ಸಾಲಿ ಅವರ ಯಾವುದೇ ಚಿತ್ರಕ್ಕೂ ಕಾರ್ತಿಕ್ ಸಹಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಕಾರ್ತಿಕ್ , ಪತಿ, ಪತ್ನಿ ಹಾಗೂ ಓ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಚಿತ್ರ ಶುಕ್ರವಾರ ತೆರೆ ಕಾಣಲಿದೆ.
ಈ ಚಿತ್ರದಲ್ಲಿ ಕಾರ್ತಿಕ್ ಜೊತೆಗೆ ನಟಿಯರಾದ ಅನನ್ಯ ಪಾಂಡೆ, ಭೂಮಿ ಪೆಡ್ನೇಕರ್ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ಹೊರತಾಗಿ ಕಾರ್ತಿಕ್ ಕೈಯಲ್ಲಿ ಭುಲ್ ಭುಲಯ್ಯ -2 ಹಾಗೂ ದೋಸ್ತಾನಾ-2 ಚಿತ್ರಗಳಿವೆ.
ಯುಎನ್ಐ ಪಿಕೆ ವಿಎನ್ 2000
More News
‘ಮಧುರ ಮಧುರವೀ ಮಂಜುಳ ಗಾನ’  ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

‘ಮಧುರ ಮಧುರವೀ ಮಂಜುಳ ಗಾನ’ ಚಿತ್ರಗೀತೆ, ಭಕ್ತಿ, ಭಾವ, ಜಾನಪದ ಗೀತೆಗಳ ಬೃಹತ್ ಭಂಡಾರ ಬಿಡುಗಡೆ

28 Jan 2020 | 8:48 PM

ಬೆಂಗಳೂರು, ಜ 28 (ಯುಎನ್‍ಐ) ಸೌಂಡ್ ಆಫ್ ಮ್ಯೂಸಿಕ್ ಸಂಸ್ಥೆ ಹೊರ ತಂದಿರುವ ‘ಮಧುರ ಮಧುರವೀ ಮಂಜುಳ ಗಾನ’ ಎರಡನೇ ಸಂಚಿಕೆಯನ್ನು ಖ್ಯಾತ ನಟ, ನಿರ್ಮಾಪಕ ಶರಣ್ ಬಿಡುಗಡೆಗೊಳಿಸಿದರು

 Sharesee more..

ಮಹಿಳಾ ಪ್ರಧಾನ ಚಿತ್ರ “ಓಜಸ್’ ಫೆ 7ರಂದು ತೆರೆಗೆ

28 Jan 2020 | 8:31 PM

 Sharesee more..
ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

28 Jan 2020 | 8:27 PM

ಬೆಂಗಳೂರು, ಜ 28 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ

 Sharesee more..

ರಾಧೆಯ ಫೈಟ್ ಸೀನ್ ಗೆ 7 50 ಕೋಟಿ ಖರ್ಚು

28 Jan 2020 | 7:17 PM

 Sharesee more..