Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

ಬಿಎಸ್‌ಪಿ ಸೇರಿದ ಬಾಲಚಂದ್ರ ಯಾದವ್‌

ಸಂತಕಬೀರ್‌ನಗರ, ಜುಲೈ 12 (ಯುಎನ್‌ಐ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡ ಒಂದು ದಿನದ ನಂತರ, ಮಾಜಿ ಸಂಸದ ಬಾಲಚಂದ್ರ ಯಾದವ್ ಶುಕ್ರವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿದ್ದಾರೆ.
ಗುರುವಾರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ನಂತರ ಕಾಂಗ್ರೆಸ್ ಶಿಸ್ತಿನ ಸಮಿತಿಯು ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿತ್ತು.
ಸಂತ ಕಬೀರ್ ನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಯಾದವ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಇತರರ ನಿರ್ದೇಶನದ ಮೇರೆಗೆ ಇವರು ಬಿಎಸ್ಪಿಗೆ ಸೇರಿದರು.
ಯುಎನ್‌ಐ ಕೆಎಸ್‌ವಿ ಎಚ್‌ಎ 1806