Thursday, Nov 21 2019 | Time 03:10 Hrs(IST)
Karnataka Share

ಬಿ.ಎಂ. ವಿಜಯಶಂಕರ್ ಅರ್ಜಿ: ಎಸ್‌ಐಟಿ, ಸಿಬಿಐಗೆ ಹೈಕೋರ್ಟ್‌ ನೋಟೀಸ್‌

ಬೆಂಗಳೂರು, ಜುಲೈ 11(ಯುಎನ್ಐ) ತಮ್ಮ ವಿರುದ್ಧ ಪ್ರಕರಣ ರದ್ದುಗೊಳಿಸುವಂತೆ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಬಂಧಿತರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಸಲ್ಲಿಸಿದ್ದ ಅರ್ಜಿ ಸಂಬಂಧ ಸಿಬಿಐ ಹಾಗೂ ಎಸ್ ಐ ಟಿ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ತಮ್ಮ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ವಿಜಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಐಎಂಎ ಹಗರಣ ಸಂಬಂಧ ಎಸ್ಐಟಿ ಜುಲೈ 6ರಂದು ವಿಜಯಕುಮಾರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯ ಅವರನ್ನು ನಾಲ್ಕು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿತ್ತು.
ಯುಎನ್ಐ ಎಸ್ ಎಚ್ ಕೆಎಸ್‌ವಿ 2215
More News

ಜಾನಪದ ಗಾಯನದ ಬಗ್ಗೆ ತರಬೇತಿ: ಅರ್ಜಿ ಆಹ್ವಾನ

20 Nov 2019 | 7:25 PM

 Sharesee more..
ಉಪ ಚುನಾವಣೆಯಲ್ಲಿ ಸೋಲಾದರೆ ಮಂತ್ರಿಯಾಗಿ ಮುಂದುವರೆಯುವುದು ಕಷ್ಟವಾದೀತು: ಯಡಿಯೂರಪ್ಪ

ಉಪ ಚುನಾವಣೆಯಲ್ಲಿ ಸೋಲಾದರೆ ಮಂತ್ರಿಯಾಗಿ ಮುಂದುವರೆಯುವುದು ಕಷ್ಟವಾದೀತು: ಯಡಿಯೂರಪ್ಪ

20 Nov 2019 | 7:13 PM

ಬೆಂಗಳೂರು, ನ 20 []ಯುಎನ್ಐ] ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಿಜೆಪಿ ಸರ್ಕಾರದ ಅಳಿವು - ಉಳಿವು ನಿರ್ಧರಿಸಲಿದ್ದು, ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

 Sharesee more..