Friday, Feb 28 2020 | Time 09:36 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ: ಚಿತ್ರರಂಗದ ಗಣ್ಯರೊಂದಿಗೆ ಅಕಾಡೆಮಿ ಅಧ್ಯಕ್ಷರ ಸಭೆ

ಬೆಂಗಳೂರು, ಜ 21 (ಯುಎನ್‍ಐ) 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸುವ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮಂಗಳವಾರ ಚಿತ್ರರಂಗದ ಗಣ್ಯರೊಂದಿಗೆ ವಿಶೇಷ ಸಭೆ ನಡೆಸಿದರು.
ಸಿನಿಮೋತ್ಸವದ ಯಶಸ್ವಿಗೆ ತಮ್ಮ ಅನುಭವದ ಸಲಹೆ ಸೂಚನೆಗಳ ಜತೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದ ಅವರು, ಚಿತ್ರೊತ್ಸವದ ಯಶಸ್ವಿಗೆ ಅಗತ್ಯ ಮುಂಜಾಗ್ರತಾ ಕ್ರಮ, ಚಿತ್ರ ಪ್ರದರ್ಶನಗಳ ವ್ಯವಸ್ಥೆ, ಪ್ರವೇಶಪತ್ರಗಳ ವಿತರಣೆ ವ್ಯವಸ್ಥೆ ಮತ್ತು ಚಿತ್ರೋದ್ಯಮದ ಗಣ್ಯರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಎಲ್ಲ ವರ್ಗದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವ ಸಂಬಂಧವಾಗಿ ಸಭೆಯಲ್ಲಿ ಚರ್ಚಿಸಿದರು.
ಮುಂದಿನ ದಿನಗಳಲ್ಲಿ ಚಿತ್ರೋತ್ಸವವನ್ನು ನಿಗದಿತ ಅವಧಿಯಲ್ಲೇ ನಡೆಸಬೇಕೆಂಬ ಆಶಯದಲ್ಲಿ ಪ್ರತಿ ವರ್ಷ ಫೆಬ್ರವರಿ ಮಾಹೆಯಲ್ಲಿಯೇ ಚಿತ್ರೋತ್ಸವ ನಡೆಸಲು ನಿರ್ಣಯಿಸಲಾಯಿತು.
ಈ ಬಾರಿಯ ಚಿತ್ರೋತ್ಸವದಲ್ಲಿ ವಿಶೇಷವಾಗಿ ರೆಡ್ ಕಾರ್ಪೆಟ್ ಸ್ಕ್ರೀನಿಂಗ್ ಮಾಡುವ ಬಗ್ಗೆಯೂ ಚರ್ಚಿಸಲಾಯಿತು.
ಸಭೆಯಲ್ಲಿ ವಿಶೇಷವಾಗಿ ಉಚಿತ ಪಾಸು ವಿತರಿಸುವ ವ್ಯವಸ್ಥೆಗೆ ಕಡಿವಾಣ ಹಾಕಿ ಪ್ರತಿಯೊಬ್ಬರೂ ಟಿಕೆಟ್ ಖರೀದಿಸಿಯೇ ಸಿನಿಮೋತ್ಸವದಲ್ಲಿ ಭಾಗವಹಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಅಂತಾರಾಷ್ಟ್ರೀಯ ಸಿನಿಮೋತ್ಸವದ ಗುಣಮಟ್ಟ ಹೆಚ್ಚಿಸುವ ಸಂಬಂಧ ಕೆಲವೊಂದು ಯೋಜನೆಗಳನ್ನು ರೂಪಿಸಿಕೊಳ್ಳುವ ಅಗತ್ಯತೆ ಯನ್ನು ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರು ವ್ಯಕ್ತಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಕನ್ನಡ ಚಿತ್ರೋದ್ಯಮದ ಪ್ರತಿಷ್ಠಿತ ಉತ್ಸವ. ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿದ್ಸು ಚಿತ್ರೋದ್ಯಮ ಸಂಪೂರ್ಣ ಸಹಕಾರ ನೀಡುವಂತೆ ಸುನಿಲ್ ಪುರಾಣಿಕ್ ಮನವಿ ಮಾಡಿದರು.
ಸಭೆಯಲ್ಲಿ ಚಿತ್ರೋದ್ಯಮದ ಗಣ್ಯರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಟಿ.ಎಸ್ ನಾಗಾಭರಣ, ಎಸ್.ಕೆ.ಭಗವಾನ್, ಪಿ.ಶೇಷಾದ್ರಿ, ಬಿ.ಸುರೇಶ, ಎಚ್.ಎಸ್.ಭಾಸ್ಕರ, ಜಾರ್ಜ್ ಕುಟ್ಟಿ, ಬಿ.ಎಸ್.ಲಿಂಗದೇವರು, ನಟ ದೊಡ್ಡಣ್ಣ, ವಿದ್ಯಾಶಂಕರ್ ಭಾಗವಹಿಸಿದ್ದರು.
ಯುಎನ್‍ಐ ಎಸ್‍ಎ ವಿಎನ್ 2052
More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..