Sunday, Nov 1 2020 | Time 01:00 Hrs(IST)
business economy Share

ಬೆಂಗಳೂರಿನಲ್ಲಿ ಸೇವೆ ಪ್ರಾರಂಭಿಸಲಿರುವ ಕ್ಸನಾಡು ರಿಯಾಲ್ಟಿ; ಗಿರೀಶ್‌ ಕಾಂಬ್ಳೆ ನಿರ್ದೇಶಕರಾಗಿ ನೇಮಕ

ಬೆಂಗಳೂರು, ಸೆ.24 (ಯುಎನ್ಐ) ಮುಂಬೈನ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಯಶಸ್ಸು ಕಂಡು, 2016 ರಿಂದ ಪ್ರಾರಂಭವಾದ ನಂತರ 3500 ಕೋಟಿ ರೂಪಾಯಿ ಮಾರಾಟ ಆದಾಯ ದಾಖಲಿಸಿದ ಕ್ಸನಾಡು ರಿಯಾಲ್ಟಿ (Xanadu Realty) ಸಂಸ್ಥೆಯು ಬೆಂಗಳೂರು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ.
ವಿಶ್ವಾಸಾರ್ಹ ಬೆಳವಣಿಗೆಯನ್ನು ಒಳಗೊಂಡಿರುವ ಬೆಂಗಳೂರು ಬೆಳವಣಿಗೆಗೆ ಪೂರಕ ಮಾರುಕಟ್ಟೆಯಾಗಿದೆ. ಹಣಕಾಸು ಸಂಸ್ಥೆಗಳು ಮತ್ತು ಅಭಿವರ್ಧಕರಿಂದ ಹೆಚ್ಚಿನ ಸಾಮರ್ಥ್ಯ ಮತ್ತು ಆಸಕ್ತಿ ಹೆಚ್ಚಿಸಿ ಉದಯೋನ್ಮುಖ ಬ್ರಾಂಡ್‌ಗಳು ಬೆಂಗಳೂರು ಪ್ರದೇಶಕ್ಕೆ ಪಾದಾರ್ಪಣೆ ಮಾಡಲು ಪ್ರೇರೆಪಿಸುತ್ತದೆ.
ಬೆಂಗಳೂರು ಪ್ರದೇಶದ ನಿರ್ದೇಶಕರಾಗಿ ಗಿರೀಶ್ ಕಾಂಬ್ಳೆ ಅವರನ್ನು ಕ್ಸನಾಡು ರಿಯಾಲ್ಟಿ ನೇಮಕ ಮಾಡಿದೆ.
"ಪ್ರಾರಂಭದಿಂದಲೂ ಎಂಎಂಆರ್ ಪ್ರದೇಶದಲ್ಲಿ ನಮಗೆ ಬಹಳ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ದೊರೆತಿದೆ. ಬಹಳ ಕಡಿಮೆ ಅವಧಿಯಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಲು ಇದು ಕಾರಣವಾಯಿತು. ಲಾಕ್‌ಡೌನ್‌ ನಂತಹ ಕಷ್ಟದ ಅವಧಿಯಲ್ಲಿ ಗ್ರಾಹಕರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ಮತ್ತು ಶಾರ್ಟ್‌ಲಿಸ್ಟ್ ಮಾಡುವ ಸಮಗ್ರ ವರ್ಚುವಲ್ ಅನುಭವವ ಸೇರಿದಂತೆ ಆನ್‌ಲೈನ್ ಮನೆ ಖರೀದಿ ಪರಿಹಾರ ನೀಡುವುದು ನಮ್ಮ ಗ್ರಾಹಕರಿಗೆ ಕೆಲವು ಉತ್ತಮ ಪರಿವರ್ತನೆಗಳನ್ನು ಒದಗಿಸಿದ್ದೇವೆ. ಸಂಕೀರ್ಣ ರಿಯಲ್ ಎಸ್ಟೇಟ್ ಪ್ರಶ್ನೆಗಳಿಗೆ ನಾವು ಅನನ್ಯ ಪರಿಹಾರಗಳನ್ನು ಒದಗಿಸುತ್ತೇವೆ. ನಾವು ಈಗ ನಮ್ಮ ಕಾರ್ಯಾಚರಣೆಗಳನ್ನು ಬೆಂಗಳೂರಿನಿಂದ ಪ್ರಾರಂಭಿಸಿ ಹೊಸ ಭೌಗೋಳಿಕ ಪ್ರದೇಶಗಳಿಗೆ ವಿಸ್ತರಿಸಲು ನೋಡುತ್ತಿದ್ದೇವೆ.ಬೆಂಗಳೂರು ಬಿಸಿನೆಸ್ ನಿರ್ದೇಶಕರಾಗಿ ಶಗಿರೀಶ್ ಕಾಂಬ್ಳೆ ಅವರ ಮುಂದಾಳತ್ವದಲ್ಲಿ ಸಾಗಲು ನಾವು ಸಂತೋಷಪಡುತ್ತೇವೆ. ಅವರ ಸಮರ್ಥ ನಾಯಕತ್ವದಲ್ಲಿ ಕ್ಸನಾಡು ಹೊಸ ಎತ್ತರಕ್ಕೆ ಏರುತ್ತದೆ ಎಂದು ನಾವು ನಂಬುತ್ತೇವೆ ಮತ್ತು ಮುಂಬೈನಂತೆಯೇ ಬೆಂಗಳೂರಿನಲ್ಲೂ ಪ್ರಬಲ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಲಿದೆ”ಎಂದು ಕ್ಸನಾಡು ರಿಯಾಲ್ಟಿಯ ಸಿಇಒ ವಿಕಾಸ್ ಚತುರ್ವೇದಿ ಹೇಳಿದರು.
ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಐಟಿ ಮೂಲಸೌಕರ್ಯವು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಪೂರಕ ಅಂಶವಾಗಿದೆ. ಬೆಂಗಳೂರು ಐಟಿ / ಐಟಿ ಉದ್ಯಮದ ಕೇಂದ್ರವಾಗಿದ್ದು ಈ ಪ್ರದೇಶದಲ್ಲಿ ರಿಯಾಲ್ಟಿ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿದೆ. ಅಷ್ಟೇ ಅಲ್ಲದೆ, ಮುಂಬೈ, ದೆಹಲಿ ಮತ್ತು ಎನ್‌ಸಿಆರ್ ನಂತಹ ಭಾರತದ ಅಗ್ರ ಮೂರು ರಿಯಲ್ ಎಸ್ಟೇಟ್ ಮಾರುಕಟ್ಟೆಗಳ ಸಾಲಿಗೆ ಬೆಂಗಳೂರು ಸೇರಿದೆ. ಈ ಎಲ್ಲಾ ಅಮೂಲ್ಯ ಅಂಶಗಳ ಕಾರಣ ಬೆಂಗಳೂರು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಗೆ ಹೆಜ್ಜೆ ಇಟ್ಟು ಭಾರತದಾದ್ಯಂತ ತನ್ನ ವ್ಯವಹಾರವನ್ನು ವಿಸ್ತರಿಸುವ ಉದ್ದೇಶ ಕ್ಸನಾಡು ರಿಯಾಲ್ಟಿ ಹೊಂದಿದೆ.
"ಕ್ಸನಾಡು ರಿಯಾಲ್ಟಿ ಸೇರಲು ಮತ್ತು ಬೆಂಗಳೂರಿನಲ್ಲಿ ಅದರ ಕಾರ್ಯಾಚರಣೆಯನ್ನು ಮುನ್ನಡೆಸಲು ನನಗೆ ಒಂದು ಉತ್ತೇಜಕ ಸಮಯವಾಗಿದೆ. ಬೆಳೆಯುತ್ತಿರುವ ಸಂಸ್ಥೆಯ ಭಾಗವಾಗಲು ನನಗೆ ಅಪಾರ ಸಂತೋಷವಾಗುತ್ತಿದೆ. ನನ್ನ ಕೊಡುಗೆ ನೀಡಬಲ್ಲೆ ಕೌಶಲ್ಯ ಮತ್ತು ಪರಿಣತಿ ಮತ್ತು ಯಶಸ್ಸಿನ ಪಟ್ಟಿಯನ್ನು ಹೊಸ ಮಟ್ಟಕ್ಕೆ ಏರಿಸುವುದು. ಬೆಂಗಳೂರು ಮಾರುಕಟ್ಟೆಗೆ ನಮ್ಮ ಪ್ರವೇಶವು ನಮ್ಮ ಪಾಲುದಾರರಿಗೆ ತ್ವರಿತ ಆವೇಗವನ್ನು ಪಡೆಯಲು ಮತ್ತು ಉತ್ತಮ ಬೆಳವಣಿಗೆಯ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ” ಎಂದು ಕ್ಸಾನಾಡು ರಿಯಾಲ್ಟಿ ನಿರ್ದೇಶಕ ಗಿರೀಶ್‌ ಕಾಂಬ್ಳೆ ಹೇಳಿದರು.
ರಿಯಲ್ ಎಸ್ಟೇಟ್, ಇ-ಕಾಮರ್ಸ್ ಮತ್ತು ಆಟೋಮೊಬೈಲ್ ಉದ್ಯಮದಲ್ಲಿ ಗಿರೀಶ್ ಅವರು 16 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಪ್ರಸಿದ್ಧ ಕಂಪನಿಗಳಾದ ಲೋಧಾ ಗ್ರೂಪ್, ಎಡೆಲ್ವೀಸ್ ಫೈನಾನ್ಷಿಯಲ್ ಸರ್ವೀಸಸ್, ಇಬೇ ಮತ್ತು ಜನರಲ್ ಮೋಟಾರ್ಸ್ ಇಂಡಿಯಾದಲ್ಲಿ ವೈವಿಧ್ಯಮಯ ತಂಡಗಳನ್ನು ಮುನ್ನಡೆಸಿದ ಗಿರೀಶ್‌ ಅವರು ಪಾತ್ರರಾಗಿದ್ದಾರೆ.
ಯುಎನ್ಐ ಎಎಚ್ 1343
More News
ರಿಲಯನ್ಸ್ ಕಂಪನಿ ನಿವ್ವಳ ಲಾಭ ಶೇಕಡ 15 ರಷ್ಟು ಕುಸಿತ

ರಿಲಯನ್ಸ್ ಕಂಪನಿ ನಿವ್ವಳ ಲಾಭ ಶೇಕಡ 15 ರಷ್ಟು ಕುಸಿತ

30 Oct 2020 | 10:06 PM

ನವದೆಹಲಿ, ಅ 30 (ಯುಎನ್ಐ) ಕೊರೋನ ಕಾರಣಕ್ಕಾಗಿ ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಯ ನಿವ್ವಳ ಲಾಭ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಶೇಕಡ.15ರಷ್ಟು ಕುಸಿತ ಕಂಡಿದೆ.

 Sharesee more..

ನ 9ರಂದು ವರದಿ ಸಲ್ಲಿಸಲಿರುವ ಹಣಕಾಸು ಆಯೋಗ

30 Oct 2020 | 6:41 PM

 Sharesee more..

ಸೆನ್ಸೆಕ್ಸ್: 200ಕ್ಕೂ ಹೆಚ್ಚು ಅಂಕದಿಂದ ಚೇತರಿಕೆ

30 Oct 2020 | 11:33 AM

 Sharesee more..