Sunday, Oct 20 2019 | Time 08:59 Hrs(IST)
  • ಮಾನಸಿಕ ಹೊಂದಾಣಿಕೆಯೇ ರೋಹಿತ್ ಯಶಸ್ಸಿನ ಮೂಲಮಂತ್ರ: ವಿಕ್ರಮ್ ರಾಥೋಡ್
Health -Lifestyle Share

ಬೆಂಗಳೂರಿನಲ್ಲಿ ಸೆ. 29 ರಂದು ಮಕ್ಕಳ ಜಾಗತಿಕ ಫ್ಯಾಷನ್ ಶೋ

ಬೆಂಗಳೂರು, ಸೆ 7 [ಯುಎನ್ಐ] ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಕ್ಕಳು ತಮ್ಮನ್ನು ತಾವೇ ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಇದೇ 29 ರಂದು ಗ್ಲೋಬಲ್ ಕಿಡ್ಸ್ ಫ್ಯಾಷನ್ ಶೋ ಆಯೋಜಿಸಲಾಗಿದೆ.
ನಗರದ ಫೋರ್ ಸೀಸನ್ಸ್ ನಲ್ಲಿ ಈ ಪ್ಯಾಷನ್ ಶೋ ನಡೆಯಲಿದ್ದು, ಇದಕ್ಕೂ ಮುನ್ನ ಭಾನುವಾರ, ಸೆಪ್ಟೆಂಬರ್ 8 ರಂದು ಐನಾಕ್ಸ್ ಮಲ್ಟಿಪ್ಲೆಕ್ಸ್ ಗರುಡ ಮಾಲ್ ಆಡಿಷನ್ ಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ರಿಂದ 3 ಗಂಟೆವರೆಗೆ ಪ್ಯಾಷನ್ ಶೋಗೆ ಆಡಿಷನ್ ನಡೆಯಲಿದೆ.
ಸಾಮುದ್ರಿಕಾ ಡಿಸೈನರ್ ಸ್ಟುಡಿಯೋ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಫ್ಯಾಷನ್ ಪ್ರದರ್ಶನ ಆಯೋಜಿಸಲಾಗಿದ್ದು, 5 ರಿಂದ 15 ವರ್ಷ ವಯೋಮಾನದ ಮಕ್ಕಳಿಗೆ ವೇದಿಕೆ ಕಲ್ಪಿಸಲಾಗಿದೆ.
ಸಾಮುದ್ರಿಕಾ ಡಿಸೈನರ್ ಸ್ಟುಡಿಯೋ ಕಾರ್ಯನಿರ್ವಹಣಾಧಿಕಾರಿ ಮಿಸ್ ಮೀನು ಸರವಣನ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಅಂತಾರಾಷ್ಟ್ರೀಯ ಗುಡ್‌ವಿಲ್ ರಾಯಭಾರಿ, ಮಿಸ್ ಅರ್ತ್ ಯುಕೆ ಭವ್ಯ ಗೌಡ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಭಾರತದಾದ್ಯಂತ ಆಡಿಷನ್ ಮೂಲಕ 10 ಪ್ರಮುಖ ಫ್ಯಾಷನ್ ಡಿಸೈನರ್ ಗಳ ಮತ್ತು ಬ್ರಾಂಡ್ ಗಳ ರ‍್ಯಾಂಪ್ ನಡಿಗೆಗೆ 200 ಮಕ್ಕಳನ್ನು ಆಯ್ಕೆ ಮಾಡಲಾಗುತ್ತಿದೆ. ಇದರಿಂದ ಡಿಸೈನರ್ ಗಳು ಮತ್ತು ಬ್ರಾಂಡ್ ಗಳಿಗೂ ಉತ್ತಮ ವೇದಿಕೆ ದೊರೆಯಲಿದೆ ಎಂದರು.
ವಿವಿಧ ಸರ್ಕಾರಿ ಶಾಲೆಗಳ ಮಕ್ಕಳನ್ನು ಸಹ ಪ್ಯಾಷನ್ ಪ್ರದರ್ಶನದ ಭಾಗವಾಗಿಸಲು ಇದೇ ಮೊದಲ ಬಾರಿಗೆ ದೇಶಾದ್ಯಂತ ಕೆಲವು ಸರ್ಕಾರಿ ಶಾಲೆಗಳಲ್ಲಿ ಆಡಿಷನ್ ಗಳನ್ನು ಸಹ ನಡೆಸಲಾಗುವುದು. ಆಯ್ಕೆಯಾದ ಮಕ್ಕಳ ಪ್ರಯಾಣ ಮತ್ತು ವಾಸ್ತವ್ಯದ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದರು.
ತಾವು ಸಹ ಚೆನ್ನೈನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯಲ್ಲಿ ಕಾಲೇಜು ವಿದ್ಯಾರ್ಥಿನಿ ಮತ್ತು ಅಲ್ಲಿನ ರ‍್ಯಾಂಕ್ ವಿದ್ಯಾರ್ಥಿನಿಯಾಗಿ 2006 ರಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದ ನಂತರ ಯು.ಕೆ.ಗೌನ್ಸ್ ನಿಂದ ಪ್ರೇರಣೆ ಪಡೆದು ಸಾಮುದ್ರಿಕಾಸ್ ಡಿಸೈನರ್ ಸ್ಟುಡಿಯೋ ಸ್ಥಾಪಿಸಿ ಫ್ಯಾಷನ್ ವಲಯದಲ್ಲೇ ತಮ್ಮ ಭವಿಷ್ಯ ಕಂಡುಕೊಳ್ಳುತ್ತಿರುವುದಾಗಿ ಮಿಸ್ ಮೀನು ಸರವಣನ್ ಹೇಳಿದರು.
ಸಾಮುದ್ರಿಕಾಸ್ ಸಂಸ್ಥೆ ನಟಿರಾದ ತಮನ್ನಾ, ಕಾಜಲ್ ಅಗರ್‌ವಾಲ್ ಹಾಗೂ ದಕ್ಷಿಣ ಭಾರತದ ತಾರೆಯರ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದೆ. ಇದರ ಜತೆಗೆ ಮಿಸರ್ಸ್ ಇಂಡಿಯಾ 2017 -18, ಮಿಸರ್ಸ್ ವರ್ಲ್ಡ್ 2018 ವಿಜೇತೆಯ ಗೌನ್ ಅನ್ನು ವಿನ್ಯಾಸ ಮಾಡಿದೆ. ಇತ್ತೀಚಿನ ಗಿನ್ನಿಸ್ ದಾಖಲೆ ವೈಬ್ಸ್ 360 ಬ್ರಾಂಡ್ ರನ್ ವೇ - ದೀರ್ಘ ಡಿಸೈನರ್ ಫ್ಯಾಷನ್ ಷೋ ದಲ್ಲಿ ಅವರ ಪ್ರಪ್ರಥಮ ಪರ್ಟ್ ಎ - ಪೋರ್ಟರ್ ಸಂಗ್ರಹವನ್ನು ಸಾಮುದ್ರಿಕಾಸ್ ಎಂಬ ಹೆಸರಿನಡಿ ಪರಿಚಯಿಸಲಾಯಿತು. ಲ್ಯಾಕ್ಮೇ ಫ್ಯಾಷನ್ ಸಪ್ತಾಹ, ಬೆಂಗಳೂರು ಫ್ಯಾಷನ್ ಸಪ್ತಾಹ, ಟಾಮಿ ಫ್ಯಾಷನ್ ರನ್‌ವೇ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿಯೂ ಈ ಸಂಸ್ಥೆ ವಿನ್ಯಾಸದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ.
ಮೀನು ಸರವಣನ್ ಅವರಿಗೆ ಉತ್ತಮ ಭಾರತೀಯ ವಧು ವಿನ್ಯಾಸಕಿ ಪುರಸ್ಕಾರ 2017, ಜಿಟಿಎಫ್ ಬೆಸ್ಟ್ ವಿಮೆನ್ ಡಿಸೈನರ್ ಆಫ್ ದಿ ಇಯರ್ 2018, ಟ್ರೆಂಡಿಂಗ್ ಡಿಸೈನರ್ ಅವಾರ್ಡ್ 2018 ಮೊದಲಾದ ಪ್ರಶಸ್ತಿಗಳು ಸಂದಿವೆ.
ಯುಎನ್ಐ ವಿಎನ್ 1747
More News
ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

13 Sep 2019 | 3:55 PM

ಬೆಂಗಳೂರು, ಸೆ 13 [ಯುಎನ್ಐ]ಬೆಂಗಳೂರು ನಗರ ಡೆಂಘೀ ಜ್ವರದ ರಾಜಧಾನಿಯಾಗಿ ಪರಿವರ್ತನೆಯಾಗಿದ್ದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 60ಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

 Sharesee more..
'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

09 Sep 2019 | 5:54 PM

ಬೆಂಗಳೂರು, ಸೆ 9 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ

 Sharesee more..